More

    ಚಂದ್ರಯಾನ-3 ರಾಕೆಟ್ ಉಡಾವಣೆ ನಂತರ ಮತ್ತೊಮ್ಮೆ ಟ್ರೋಲ್ ಆಗುತ್ತಿದೆ ಆದಿಪುರುಷ್ ಚಿತ್ರ! ಯಾಕೆ?

    ನವದೆಹಲಿ: ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ್ ಮತ್ತೊಮ್ಮೆ ಟ್ರೋಲ್ ಆಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಚಂದ್ರಯಾನ 3ಗಾಗಿ ಖರ್ಚು ಮಾಡಿದಕ್ಕಿಂತ ಹೆಚ್ಚಿನ ಹಣವನ್ನು ಓಂ ರಾವತ್ ತಮ್ಮ ಚಿತ್ರಕ್ಕಾಗಿ ಖರ್ಚು ಮಾಡಿದ್ದಾರೆ ಎಂದು ಟ್ವೀಟ್ ಮಾಡಲಾಗಿದ್ದು ಅದು ವೈರಲ್ ಆಗಿದೆ.

    ಆದಿಪುರುಷ್ ಚಿತ್ರವನ್ನು 700 ಕೋಟಿ ರೂ.ಗಳ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು, ಚಂದ್ರಯಾನ 3 ಬಜೆಟ್ 615 ಕೋಟಿ ರೂ. ಆಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈಗ ಆದಿಪುರುಷ್ ಅನ್ನು ಅಣಕಿಸುವ ಮೀಮ್ಸ್ ಹಂಚಿಕೊಳ್ಳುತ್ತಿದ್ದಾರೆ.

    ಆದಿಪುರುಷ್-700 ಕೋಟಿ, ಚಂದ್ರಯಾನ-3-ಅಂದಾಜು 615 ಕೋಟಿ. ಆದ್ದರಿಂದ ಚಲನಚಿತ್ರದ ನಿರ್ಮಾಪಕರು ಸರ್ಕಾರಕ್ಕೆ ದೇಣಿಗೆ ನೀಡಲು ಸಾಧ್ಯವಾದರೆ, ನಾವು ಚಂದ್ರಯಾನ್ 4 ನೋಡಬಹುದಾಗಿದೆ. ತಮಾಷೆಯನ್ನು ಹೊರತುಪಡಿಸಿ ನೊಡುವುದಾದರೆ, ನಾವು ಇಸ್ರೋ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ” ಎಂದು ಟ್ವೀಟ್ ಮಾಡಲಾಗಿದೆ. ವೈರಲ್ ಟ್ವೀಟ್‍ಗೆ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ನೋಡಿ: https://twitter.com/vicharabhio/status/1679865684963266562?s=20

    ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಆದಿಪುರುಷ್ ಜೂನ್ 16ರಂದು ಬಿಡುಗಡೆಯಾಗಿತ್ತು. ಈ ಚಿತ್ರವು ಹಿಂದು ಪೌರಾಣಿಕ ಮಹಾಕಾವ್ಯ ರಾಮಾಯಣವನ್ನು ಆಧರಿಸಿದೆ. ಆದರೆ, ಬಿಡುಗಡೆಯಾದಾಗಿನಿಂದ, ರಾಮಾಯಣ ತಿರುಚಿದ್ದಕ್ಕಾಗಿ ಈ ಚಿತ್ರ ಪ್ರೇಕ್ಷಕರಿಂದ ಭಾರಿ ಟೀಕೆಗೆ ಗುರಿಯಾಗಿದೆ. ಚಿತ್ರದಲ್ಲಿ ರಾವಣ ಮತ್ತು ಹನುಮಂತನ ನಡುವಿನ ಸಂಭಾಷಣೆಗಳು ಮತ್ತು ಚಿತ್ರಣದ ಬಗ್ಗೆ ಜನರು ನಿರಾಶೆ ವ್ಯಕ್ತಪಡಿಸಿದ್ದಾರೆ. ನಿರ್ಮಾಪರು, ಕಳೆದ ತಿಂಗಳು ಕುಖ್ಯಾತ ‘ಕಪ್ಡಾ ತೇರೆ ಬಾಪ್ ಕಾ’ ಸಂಭಾಷಣೆಯನ್ನು ಬದಲಾಯಿಸಿದರೂ, ಅದು ಯಾವುದೇ ಪರಿಣಾಮ ಬೀರಿಲ್ಲ.  ಅನೇಕರು ಚಲನಚಿತ್ರವನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts