

ಮುಂಬಯಿ: ಬಾಲಿವುಡ್ ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುತ್ತದೆ. ಇದಕ್ಕೆ ಬಾಲಿವುಡ್ ನಟರೇನೂ ಕಮ್ಮಿ ಇಲ್ಲ. ಇದೀಗ ನಟ ಅಕ್ಷಯ್ ಕುಮಾರ್ ನಟಿಸಿದ ಜಾಹೀರಾತು ಕಾಂಟ್ರವರ್ಸಿ ಸೃಷ್ಟಿಸಿದೆ.
ಇದರಲ್ಲಿ ಅಕ್ಷಯ್ ಕುಮಾರ್ ರಸ್ತೆ ಸುರಕ್ಷತೆಯ ಕುರಿತಾದ ಜಾಹೀರಾತಿನಲ್ಲಿ ಕಪ್ಪುಹಣದ ಮೂಲಕ ವರದಕ್ಷಿಣೆಗೆ ಬೆಂಬಲ ನೀಡುವ ದೃಶ್ಯ ಕಂಡುಬರುತ್ತದೆ. ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಮತ್ತು ಟಿಎಂಸಿಯ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಈ ಜಾಹೀರಾತಿನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಟೀಕಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಆರು ಬ್ಯಾಗ್ಗಳನ್ನು ಒಳಗೊಂಡಿರುವ ಟ್ರಾವೆಲಿಂಗ್ ಕಾರನ್ನು ಪ್ರಚಾರ ಮಾಡುವ ಭರದಲ್ಲಿ ಈ ಜಾಹೀರಾತಿನ ವಿಡಿಯೋ ತುಣುಕನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಇದರ ಕುರಿತು ಪ್ರಿಯಾಂಕ ಟ್ವಿಟ್ ಮಾಡಿದ್ದರು. "ಇದು ನಿಜಕ್ಕೂ ಒಂದು ಸಮಸ್ಯಾತ್ಮಕ ಜಾಹೀರಾತು. ಈ ರೀತಿಯ ಕ್ರಿಯಾಶೀಲತೆಯನ್ನು ತರುವವರು ಯಾರು? ಸರ್ಕಾರವೇನಾದರೂ ಕಾರಿನ ಸುರಕ್ಷಿತೆಯ ಕುರಿತಾಗಿ ಜಾಹೀರಾತು ತರಲು ಹಣ ಕೊಡುತ್ತಿದೆಯಾ? ಅಥವಾ ಈ ರೀತಿ ದುಷ್ಟ ಮತ್ತು ಕ್ರೂರ ಪದ್ಧತಿಯಾದ ವರದಕ್ಷಿಣೆಯನ್ನು ಬೆಂಬಲಿಸಿ ಪ್ರಚಾರ ಮಾಡುತ್ತಿದೆಯಾ?" ಎಂದು ತಮ್ಮ ಟ್ವೀಟ್ ನಲ್ಲಿ ಪ್ರಶ್ನಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದು ಈಗ ಭಾರೀ ಚರ್ಚೆಯ ವಿಷಯವಾಗಿದೆ. (ಏಜೆನ್ಸೀಸ್)