AC ಇಲ್ಲದ ಕೋಣೆಯನ್ನು ಹೆರಿಗೆಗೆ ಬುಕ್ ಮಾಡಿದ್ದಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ!

UP AC
Published on

ಉತ್ತರಪ್ರದೇಶ: AC ಇಲ್ಲದೆ ಆಸ್ಪತ್ರೆಯ ಕೊಠಡಿಯಲ್ಲಿ ತಮ್ಮ ಮಗಳಿಗೆ ಹೆರಿಗೆ ಮಾಡಿಸಿದ್ದಕ್ಕೆ ಕೋಪಗೊಂಡ ಯುವತಿಯ ಕುಟುಂಬಸ್ಥರು ಉತ್ತರಪ್ರದೇಶದ ಬಾರಾಬಂಕಿ ಎಂಬ ಪ್ರದೇಶದಲ್ಲಿ ಅಳಿಯನ ಕುಟುಂಬಸ್ಥರಿಗೆ ಥಳಿಸಿದ್ದಾರೆ.

AC ವಿಚಾರಕ್ಕೆ ಆಕ್ರೋಶಗೊಂಡ ಯುವತಿಯ ತವರು ಮನೆಯವರು ಆಕೆಯ ಗಂಡನ ತಂದೆ-ತಾಯಿ ಮತ್ತು ಸಹೋದರಿಯರನ್ನು ಥಳಿಸಿದ್ದಾರೆ. ಇದು ಎರಡು ಗುಂಪಿನ ನಡುವೆ ಪೂರ್ಣ ಪ್ರಮಾಣದ ಜಗಳಕ್ಕೆ ಕಾರಣವಾಯಿತು. ಈ ಹೊಡೆದಾಟವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಜನರು ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡುತ್ತಿರುವುದು ಕಂಡು ಬಂದಿದೆ.

ಹೆರಿಗೆಗೆಂದು ತಮ್ಮ ಸೊಸೆಯನ್ನು ಬಾರಾಬಂಕಿಯ ಸಿವಿಲ್ ಲೈನ್ಸ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಈ ಕುಟುಂಬ ದಾಖಲಿಸಿತ್ತು. ಹೆರಿಗೆಗೆ ಸಂಬಂಧಿಸಿದ ಎಲ್ಲ ವೆಚ್ಚವನ್ನು ತಾವೇ ಭರಿಸಿರುವುದಾಗಿ ಮಹಿಳೆಯ ಮಾವ ರಾಮ್‌ಕುಮಾರ್ ತಿಳಿಸಿದ್ದಾರೆ.

ಆದರೆ, ಹುಡುಗಿಯ ಪೋಷಕರು ಮತ್ತು ಸಂಬಂಧಿಕರು ತಮ್ಮ ಮಗಳನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಾಗ, ಅವರು ಹವಾನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಲಿಲ್ಲ ಎಂದು ಕಾರಣ ನೀಡಿ ರಾಮ್​ಕುಮಾರ್​ರನ್ನು ನಿಂದಿಸಲು ಪ್ರಾರಂಭಿಸಿದರು. ಅವರು ಮರುಪ್ರಶ್ನೆ ಮಾಡಿದಾಗ, ಜಗಳ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net