More

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನಕ್ಕೆ ಕೈಜೋಡಿಸಿದ ಉತ್ತರಪ್ರದೇಶ; ಈಶ ಔಟ್​ರೀಚ್​ ಒಪ್ಪಂದಕ್ಕೆ ಸಹಿ..

    ಉತ್ತರಪ್ರದೇಶ: ಈಶ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಮಣ್ಣು ರಕ್ಷಣೆ ಸಲುವಾಗಿ ಹಮ್ಮಿಕೊಂಡಿರುವ ಅಭಿಯಾನದ ಅಂಗವಾದ ಈಶ ಔಟ್​ರೀಚ್ ಒಪ್ಪಂದಕ್ಕೆ ಇದೀಗ ಉತ್ತರಪ್ರದೇಶವೂ ಒಪ್ಪಿ ಸಹಿ ಮಾಡಿದೆ. ಈ ಮೂಲಕ ಮಣ್ಣು ರಕ್ಷಣೆ ಒಪ್ಪಂದಕ್ಕೆ ಸಹಿ ಮಾಡಿದ ಭಾರತದ ಮೂರನೇ ರಾಜ್ಯವಾಗಿ ಉತ್ತರಪ್ರದೇಶ ಹೊರಹೊಮ್ಮಿದೆ.

    ಉತ್ತರಪ್ರದೇಶವು ಈಶ ಔಟ್​​ರೀಚ್ ಜೊತೆ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಗುಜರಾತ್ ಮತ್ತು ರಾಜಸ್ಥಾನಗಳೊಂದಿಗೆ ಈ ಜಾಗತಿಕ ಅಭಿಯಾನದಲ್ಲಿ ಅಧಿಕೃತವಾಗಿ ಸೇರಿತು. ಲಕ್ನೋದಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸದ್ಗುರು ಒಪ್ಪಂದಪತ್ರವನ್ನು ವಿನಿಮಯ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸದ್ಗುರು ಈ ಅಭಿಯಾನದ “ಮಣ್ಣು ಉಳಿಸಿ ಕಾರ್ಯನೀತಿಯ” ಕೈಪಿಡಿಯನ್ನು ಮುಖ್ಯಮಂತ್ರಿ ಯೋಗಿಗೆ ನೀಡಿದರು. ಈ ಕೈಪಿಡಿಯು ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಜಾರಿಗೆ ತರಬಹುದಾದ ವೈಜ್ಞಾನಿಕ ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಒಳಗೊಂಡಿದೆ.

    ಉತ್ತರಪ್ರದೇಶದ ಕೃಷಿ ಸಚಿವ ಸೂರ್ಯಪ್ರತಾಪ್ ಶಾಹಿ, ಅಲಹಾಬಾದ್ ಉಚ್ಛ ನ್ಯಾಯಾಲಯದ ಮುಖ್ಯನ್ಯಾಯಾಧೀಶ ರಾಜೇಶ್ ಬಿಂದಲ್, ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರ ಮತ್ತಿತರ ಸರ್ಕಾರಿ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐದು ಸಾವಿರಕ್ಕೂ ಅಧಿಕ ಜನರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನಕ್ಕೆ ಕೈಜೋಡಿಸಿದ ಉತ್ತರಪ್ರದೇಶ; ಈಶ ಔಟ್​ರೀಚ್​ ಒಪ್ಪಂದಕ್ಕೆ ಸಹಿ..

    ಸದ್ಯದಲ್ಲಿ, ಮಾನವಕುಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಮೇಲ್ದರ್ಜೆಯ ವಿಜ್ಞಾನಿಗಳು “ಅಳಿಯುವಿಕೆ” ಎಂಬ ಪದವನ್ನು ಮಣ್ಣಿಗೆ ಸಂಬಂಧಿಸಿ ಬಳಸುತ್ತಿದ್ದಾರೆ ಎಂದು ಸದ್ಗುರುಗಳು ನೆರೆದಿದ್ದ ಜನತೆಗೆ ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳಿದರು. ಮಣ್ಣಿನ ಜೀರ್ಣೋದ್ಧಾರದಲ್ಲಿ ತಮ್ಮ ಭರವಸೆ ವ್ಯಕ್ತಪಡಿಸುತ್ತ, ಭಾರತವು ಈ ದಿಶೆಯಲ್ಲಿ ಯಾವಾಗಲೂ ಮುಂದಾಳಾಗಬೇಕು, ಏಕೆಂದರೆ ನಾವು ಯಾವಾಗಲೂ ಭೂಮಿಯನ್ನು ತಾಯಿಯೆಂದು ಕಾಣುತ್ತ ಬಂದಿದ್ದೇವೆ. ಭಾರತದಲ್ಲಿ ಉತ್ತರಪ್ರದೇಶ ಅತಿದೊಡ್ಡ ರಾಜ್ಯವಾಗಿದ್ದು, ಬಹಳಷ್ಟು ಭೂಮಿ ಕೃಷಿ ನಿರತವಾಗಿರುವುದರಿಂದ ಅದು ಮುಂಚೂಣಿಯಲ್ಲಿರಬೇಕು ಎಂದರು.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸದ್ಗುರುವನ್ನು ಸ್ವಾಗತಿಸುತ್ತ, ನದಿಗಳನ್ನು ರಕ್ಷಿಸಿ ಅಭಿಯಾನದ ಅಂಗವಾಗಿ ಉತ್ತರ ಪ್ರದೇಶದ ಏಳು ನದಿಗಳ ಪುನರುಜ್ಜೀವನದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ತಮ್ಮ ಸರ್ಕಾರವು ಮಣ್ಣಿನ ರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತ, ಗಂಗಾನದಿಯ ಶುದ್ಧೀಕರಣಕ್ಕಾಗಿ “ನಮಾಮಿ ಗಂಗಾ ಯೋಜನೆ”ಯ ಬಗ್ಗೆ ವಿವರಿಸಿದರು. “ಮಣ್ಣು ಉಳಿಸಿ” ಮತ್ತು “ನದಿಗಳನ್ನು ರಕ್ಷಿಸಿ” ಅಭಿಯಾನವನ್ನು ಅತ್ಯವಶ್ಯಕ ಉಪಕ್ರಮಗಳೆಂದು ಹೇಳುತ್ತ, ಈ ಅಭಿಯಾನದಲ್ಲಿ ತಮ್ಮ ರಾಜ್ಯದ 25 ಕೋಟಿ ಜನರು ಬೆಂಬಲ ನೀಡುವರೆಂದು ಭರವಸೆ ನೀಡಿದರು.

    2022ರ ಮಾರ್ಚ್ 21ರಂದು ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಾದ್ಯಂತ ಒಬ್ಬಂಟಿ ಮೋಟಾರ್‌ ಬೈಕ್ ಪ್ರಯಾಣವನ್ನು ಪ್ರಾರಂಭಿಸಿದ ಸದ್ಗುರು ಕೆಲವು ದಿನಗಳ ಹಿಂದೆ ಗುಜರಾತ್‌ನ ಪಶ್ಚಿಮ ಭಾಗದ ಬಂದರು ನಗರವಾದ ಜಾಮ್‌ ನಗರವನ್ನು ತಲುಪಿದರು. 9 ಭಾರತೀಯ ರಾಜ್ಯಗಳಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸಿದ ಅವರು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ನವದೆಹಲಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿದರು. ಹೊಸದಿಲ್ಲಿಯಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದ್ಗುರುಗಳ ಮಣ್ಣು ಉಳಿಸಿ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹವನ್ನು ವ್ಯಕ್ತಪಡಿಸಿದ್ದರು. ಸದ್ಗುರು ಮಣ್ಣಿನ ಪುನರುಜ್ಜೀವನಕ್ಕಾಗಿ ಬೇಕಾದ ಪ್ರಾಯೋಗಿಕ ಮತ್ತು ವೈಜ್ಞಾನಿಕ ಪರಿಹಾರಗಳುಳ್ಳ ಮಣ್ಣು ಉಳಿಸಿ ಕಾರ್ಯನೀತಿ ಕೈಪಿಡಿಯನ್ನು ಪ್ರಧಾನಿಯವರಿಗೂ ನೀಡಿದ್ದರು.

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನಕ್ಕೆ ಕೈಜೋಡಿಸಿದ ಉತ್ತರಪ್ರದೇಶ; ಈಶ ಔಟ್​ರೀಚ್​ ಒಪ್ಪಂದಕ್ಕೆ ಸಹಿ..

    ಈಗಾಗಲೇ ಗುಜರಾತ್ ಮತ್ತು ರಾಜಸ್ಥಾನ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಮಣ್ಣು ಉಳಿಸಲು ಒಡಂಬಡಿಕೆಗೆ ಸಹಿ ಹಾಕಿವೆ. ಈ ಅಭಿಯಾನವು ಇಲ್ಲಿಯವರೆಗೆ 2.5 ಶತಕೋಟಿ ಜನರನ್ನು ತಲುಪಿದೆ, ಜೊತೆಗೆ 74 ದೇಶಗಳು ತಮ್ಮ ರಾಷ್ಟ್ರಗಳ ಮಣ್ಣನ್ನು ಉಳಿಸಲು ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಭಾರತದ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಮಣ್ಣು ಮತ್ತು ಅವರ ಭವಿಷ್ಯವನ್ನು ಉಳಿಸಲು ಕಾರ್ಯನಿರ್ವಹಿಸುವಂತೆ ವಿನಂತಿಸಿದ್ದಾರೆ. ಉತ್ತರ ಪ್ರದೇಶದ 25 ಜಿಲ್ಲೆಗಳ 300ಕ್ಕೂ ಹೆಚ್ಚು ಶಾಲೆಗಳ 65,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.

    ಮಣ್ಣು ಉಳಿಸಿ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ತುರ್ತು ಕಾರ್ಯನೀತಿ ಸುಧಾರಣೆಗಳ ಮೂಲಕ ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ 3ರಿಂದ 6 ಜೈವಿಕ ಅಂಶವನ್ನು ಕಡ್ಡಾಯಗೊಳಿಸುವಂತೆ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನು ಆಗ್ರಹಪಡಿಸುವುದು. ಇಷ್ಟು ಕನಿಷ್ಠ ಜೈವಿಕ ಅಂಶವಿಲ್ಲದೆ, ಮಣ್ಣಿನ ವಿಜ್ಞಾನಿಗಳು ಮಣ್ಣಿನ ನಿರ್ಧಾರಿತ ಅವನತಿಯ ಬಗ್ಗೆ ಎಚ್ಚರಿಸಿದ್ದಾರೆ, ಈ ವಿದ್ಯಮಾನವನ್ನು ಅವರು ‘ಮಣ್ಣಿನ ಅಳಿವು’ ಎಂದು ಕರೆಯುತ್ತಿದ್ದಾರೆ.

    ಭಾರತದಲ್ಲಿ ಸುಮಾರು ಶೇ.30 ಫಲವತ್ತಾದ ಮಣ್ಣು ಈಗಾಗಲೇ ಬಂಜರಾಗಿ ವ್ಯವಸಾಯ ಮಾಡಲು ಅಸಮರ್ಥವಾಗಿದೆ. ಪ್ರಸ್ತುತದಲ್ಲಿ ನಡೆಯುತ್ತಿರುವ ಮಣ್ಣಿನ ಅವನತಿಯು ಹೀಗೆ ಮುಂದುವರಿದರೆ, 2050ರ ಹೊತ್ತಿಗೆ ಪ್ರಪಂಚದ ಶೇ. 90ರಷ್ಟು ಮಣ್ಣು ಮರುಭೂಮಿಯಾಗಿ ಬದಲಾಗಬಹುದು ಎಂದು ವಿಶ್ವಸಂಸ್ಥೆಯು ಎಚ್ಚರಿಸಿದೆ. ಇದು ಇನ್ನು ಕೇವಲ ಮೂರು ದಶಕಗಳಿಗಿಂತಲೂ ಕಡಿಮೆ. ಈ ಅನಾಹುತವನ್ನು ತಪ್ಪಿಸಲು ಸದ್ಗುರು ಈ ವರ್ಷದ ಮಾರ್ಚ್‌ನಲ್ಲಿ ಮಣ್ಣು ಉಳಿಸಿ ಅಭಿಯಾನ ಪ್ರಾರಂಭಿಸಿದರು ಮತ್ತು 27 ದೇಶಗಳಲ್ಲಿ ಸಂಚರಿಸಿ ಅಲ್ಲಿನ ನಾಯಕರು, ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ನಾಗರಿಕರನ್ನು ಭೇಟಿ ಮಾಡಿ ಮಣ್ಣನ್ನು ಉಳಿಸಲು ಬೆಂಬಲವನ್ನು ಪಡೆದರು.

    ಹಿರಿಯ ನಾಗರಿಕರಿಗೊಂದು ಸಂತಸದ ಸಂಗತಿ; ಮತ್ತೊಮ್ಮೆ ಆದೇಶ ಹೊರಡಿಸಿತು ಸರ್ಕಾರ..

    ನಮ್ಮ ಮೆಟ್ರೋದಲ್ಲಿ ಇನ್ಮುಂದೆ ಸೈಕಲ್ ತಗೊಂಡು ಹೋಗಬಹುದು; ಆದರೆ ಒಂದು ಷರತ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts