More

    ಭಾರಿ ಯಶಸ್ಸು ಕಂಡ ಪ್ರಾಪರ್ಟಿ ಎಕ್ಸಪೊ,ಸ್ಥಳದಲ್ಲೇ ಸೈಟ್, ಮನೆಗಳ ಬುಕ್ಕಿಂಗ್

    ಹುಬ್ಬಳ್ಳಿ: ಸಾವಿರಾರು ಜನರಿಗೆ ಕನಸಿನ ಮನೆ ಸಾಕಾರಗೊಳಿಸಲು ಸುಸಜ್ಜಿತ ವೇದಿಕೆ ಒದಗಿಸಿದ್ದ ಮೂರು ದಿನಗಳ ವಿಜಯವಾಣಿ ಪ್ರಾಪರ್ಟಿ ಎಕ್ಸ್ ಪೋ ಭಾನುವಾರ ಸಂಜೆ ತೆರೆ ಕಂಡಿತು.

    ಇಲ್ಲಿಯ ಹೊಸೂರ ರಾಯ್ಕರ್ ಮೈದಾನದಲ್ಲಿ ಎಸಿ ಟೆಂಟ್ನಲ್ಲಿ ಏರ್ಪಡಿಸಲಾಗಿದ್ದ ಅದ್ದೂರಿ ಪ್ರಾಪರ್ಟಿ ಎಕ್ಸ್ಪೋಕ್ಕೆ ಭಾನುವಾರ ಬೆಳಗ್ಗೆಯಿಂದಲೇ ಲಗ್ಗೆ ಇಟ್ಟ ಸಾವಿರಾರು ಮಂದಿ ಅತ್ಯಂತ ಕುತೂಹಲದಿಂದ ವಸತಿ ಯೋಜನೆಗಳ ಬಗ್ಗೆ ತಿಳಿದುಕೊಂಡರು.

    ಬಹುತೇಕ ಜನರು ಕುಟುಂಬಸಮೇತರಾಗಿ ಬಂದಿದ್ದು ವಿಶೇಷವಾಗಿತ್ತು. ಅಜ್ಜ, ಅಜ್ಜಿ, ಮಗ, ಮಗಳು, ಮೊಮ್ಮಕ್ಕಳು ಹೀಗೆ ಮನೆಯ ಬಹುತೇಕ ಎಲ್ಲ ಸದಸ್ಯರು ತಾವು ಕೂಡಿ ಬಾಳುವ ಕನಸಿನ ಮನೆ ಅಥವಾ ಸೈಟ್ ಖರೀದಿಗೆ ಸಂಭ್ರಮದಿಂದ ಆಗಮಿಸಿದ್ದರು. ಇನ್ನು ಕೆಲವರು ಸೈಟ್, ಮನೆ ಮೇಲೆ ಹೂಡಿಕೆ ಮಾಡಲು ಉತ್ತಮ ಜಾಗ ಯಾವುದು ಎಂದು ತಿಳಿದುಕೊಂಡರು.

    ಸ್ಕೆ$ಟೌನ್ ಗ್ರುಪ್ ಪ್ರಾಯೋಜಕತ್ವದಲ್ಲಿ ವಿಜಯವಾಣಿ ಆಯೋಜಿಸಿದ್ದ ರಿಯಲ್ ಎಸ್ಟೇಟ್ ಹಾಗೂ ಇಂಟೀರಿಯರ್ ಪ್ರಾಪಟಿರ್ ಎಕ್ಸ್ಪೋಕ್ಕೆ ಶ್ರೀಯಾ ಪ್ರಾಪಟಿರ್ಸ್, ಶ್ರೀ ದುರ್ಗಾ ಡೆವಲಪರ್ಸ್ ಆಂಡ್ ಪ್ರಮೋಟರ್ಸ್ ಅಸೋಸಿಯೇಟ್ ಸ್ಪಾನ್ಸರ್ ಆಗಿದ್ದರು. ಶಾಂಭವಿ, ರಾಟ್ಸನ್ ಗ್ರುಪ್, ಉಜ್ವಲ ಡೆವಲಪರ್ಸ್ ಆಂಡ್ ಬಿಲ್ಡರ್ಸ್ ಹಾಗೂ ಶ್ರೀದತ್ತ ಇನ್ ಪ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರು ಕೋ ಸ್ಪಾನ್ಸರ್ ಆಗಿ ಸಹಯೋಗ ನೀಡಿದ್ದರು. ಇದಲ್ಲದೇ ಅನೇಕ ಬಿಲ್ಡರ್ ಹಾಗೂ ಡೆವಲಪರ್ಸ್ಗಳು ಸಹಕಾರ ನೀಡಿ ಎಕ್ಸ್ಪೋದಲ್ಲಿ ಪಾಲ್ಗೊಂಡಿದ್ದರು.

    ಈ ಎಲ್ಲರೂ ಅಭಿವೃದ್ಧಿ ಪಡಿಸಿದ್ದ 200ಕ್ಕೂ ಹೆಚ್ಚು ವಸತಿ ಯೋಜನೆಗಳನ್ನು ಇಲ್ಲಿ ಪ್ರದರ್ಶನ ಮಾಡಿದರು. ಸ್ಪರ್ಧಾತ್ಮಕ ದರಗಳನ್ನು ನಿಗದಿ ಮಾಡಲಾಗಿತ್ತು. ಹಾಗಾಗಿ ಅನೇಕ ಜನರಿಗೆ ಇದು ಅನುಕೂಲ ಒದಗಿಸಿತ್ತು. ಪ್ರತಿಯೊಂದು ವಸತಿ ಯೋಜನೆಯ ಮಾಹಿತಿ ಪಡೆದ ಜನರು ತಮಗೆ ಹೊಂದುವಂತಹ ಮನೆ, ನಿವೇಶನ ತಮ್ಮದಾಗಿಸಿಕೊಂಡರು.

    ಗಣ್ಯರ ಭೇಟಿ: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಭಾನುವಾರ ಬೆಳಗ್ಗೆ ಪ್ರಾಪರ್ಟಿ ಎಕ್ಸ್ ಪೋ ವೀಕ್ಷಣೆ ಮಾಡಿದರು. ಪ್ರತಿಯೊಂದು ಮಳಿಗೆಗೂ ಭೇಟಿ ನೀಡಿ ಪ್ರದರ್ಶಕರೊಂದಿಗೆ ಮಾತುಕತೆ ನಡೆಸಿದರು. ಎಕ್ಸಿಬಿಟರ್ ಪ್ರದರ್ಶಿಸಿದ ಪ್ರೊಜೆಕ್ಟ್ಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾನ್ಯ ಜನರಿಂದ ಹಿಡಿದು ಎಲ್ಲರಿಗೂ ಅನುಕೂಲವಾಗುವ ವಸತಿ ಯೋಜನೆಗಳು ಇಲ್ಲಿವೆ. ಸಾರ್ವಜನಿಕರಿಗೆ ಬಹಳಷ್ಟು ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಶಿರಹಟ್ಟಿ ಸಂಸ್ಥಾನ ಭಾವೈಕ್ಯ ಪೀಠದ ಶ್ರೀ ಫಕೀರ ಸಿದ್ದರಾಮ ಸ್ವಾಮೀಜಿಗಳು ಎಕ್ಸ್ಪೋಕ್ಕೆ ಭೇಟಿ ನೀಡಿದರು. ಎಲ್ಲ ಮಳಿಗೆಗಳನ್ನು ವೀಕ್ಷಣೆ ಮಾಡಿ ಜನರಿಗೆ ಅನುಕೂಲವಾಗುವ ಕೆಲಸ ಇದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts