More

    ನೀನೇನು ಹೊಸಬನಲ್ಲ; ಸಂಜು ಸ್ಯಾಮ್ಸನ್​ ಕುರಿತು ಗೌತಮ್​ ಗಂಭೀರ್​ ಹೀಗಂದಿದ್ಯಾಕೆ

    ನವದೆಹಲಿ: ತಮ್ಮ ತೀಕ್ಷ್ಣ ಮಾತುಗಳ ಮೂಲಕವೇ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಸದಾ ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಇದೀಗ ರಾಜಸ್ಥಾನ ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್​ ಕುರಿತಾಗಿ ಮಾತನಾಡಿರುವ ಗೌತಮ್​ ನೀನೇನು ಹೊಸಬನಲ್ಲ ಎಂದು ಹೇಳಿದ್ದಾರೆ.

    ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಗೌತಮ್​, ಆತ ಎಂತಹ ಆಟಗಾರ ಎಂದು ಅಂದಾಜಿಸಲು ಐದು ನಿಮಿಷಗಳು ಸಾಕು ಸ್ಯಾಮ್ಸನ್​ ನಾಯಕತ್ವದಿಂದ ಅವರಿಗೆ ಅವಕಾಶ ಸಿಕ್ಕರೆ ಅದನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಇದೆ: ಗೃಹಸಚಿವ ಪರಮೇಶ್ವರ್

    ಸ್ಯಾಮ್ಸನ್​ ನೀವು ಈಗ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿದ್ದೀರ. ನಿಮಗೆ ಅವಕಾಶಗಳು ಸಿಕ್ಕರೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತೇನೆ ಎಂಬುದರ ಬಗ್ಗೆ ಮೊದಲು ಖಚಿತಪಡಿಸಿಕೊಳ್ಳಬೇಕು. ಅಂತರಾಷ್ಟ್ರೀಯ ಕ್ರಿಕೆಟ್​ ಆಡಿದ ಅನುಭವವನ್ನು ಹೊಂದಿರುವ ನೀವು ತಂಡಕ್ಕೆ ಹೊಸಬರೇನಲ್ಲ. ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನೀವು ಈಗ ವಿಶ್ವಕಪ್​ ಆಡುವ ಅವಕಾಶವನ್ನು ಪಡೆದಿದ್ದೀರಾ.

    ವಿಶ್ವಕಪ್​ನಂತಹ ದೊಡ್ಡ ಟೂರ್ನಿಗಳಿಂದ ನೀವು ಪ್ರವರ್ಧಮಾನಕ್ಕೆ ಬಂದಾಗ ಇಡೀ ಜಗತ್ತು ನಿಮ್ಮನ್ನು ವೀಕ್ಷಿಸುತ್ತದೆ. ಆತ ಎಂತಹ ಆಟಗಾರ ಎಂದು ನಾನು ಐದು ನಿಮಿಷದಲ್ಲಿ ಅಂದಾಜಿಸಬಲ್ಲೇ. ನಾನು ನೋಡಿದಂರೆ ಸ್ಯಾಮ್ಸನ್​​ ಕ್ಯಾಪ್ಟನಿ ವಿಚಾರದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ. ಮುಂಬರುವ ವಿಶ್ವಕಪ್​ನಲ್ಲಿ ನಾಯಕತ್ವದಿಂದ ಅವರಿಗೆ ಅವಕಾಶ ಸಿಕ್ಕರೆ ಅದನ್ನು ಪ್ರತಿಬಿಂಬಿಸುತ್ತದೆ ಎಂದು ಗೌತಮ್ ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts