ಹನೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹನೂರು ಶೈಕ್ಷಣಿಕ ವಲಯದಲ್ಲಿ ಹೆಚ್ಚು ಅಂಕ ಪಡೆದ ಹನೂರು ತಾಲೂಕಿನ ಟಾಪರ್ ಕಂಡಯ್ಯನಪಾಳ್ಯ ಗ್ರಾಮದ ಶ್ರೀ ವಿವೇಕಾನಂದ ಶಾಲೆಯ ವಿದ್ಯಾರ್ಥಿನಿ ಆರ್.ಸೌಜನ್ಯಾ ಮನೆಗೆ ಬುಧವಾರ ಬಿಇಒ ಮಹೇಶ್ ಹಾಗೂ ಅಧಿಕಾರಿಗಳು ತೆರಳಿ ಸನ್ಮಾನಿಸಿದರು.

ಈ ವೇಳೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು. ಚಿನ್ನಪ್ಪಯ್ಯ, ಪ್ರಾಂಶುಪಾಲ ಮಧುಸೂದನ್, ಪಾಲಕರು ಇತರರಿದ್ದರು.