More

    ಉತ್ತರಪ್ರದೇಶದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ, ಯಾರಾದರೂ ಹೆದರಿಸಲು ಸಾಧ್ಯವೇ?: ಯೋಗಿ ಆದಿತ್ಯನಾಥ್​

    ಲಖನೌ: ಉಮೇಶ್​ ಪಾಲ್​ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗ್ಯಾಂಗ್​ಸ್ಟಾರ್​ ಅತೀಕ್​ ಅಹ್ಮದ್​ ಹಾಗೂ ಆತನ ಸಹೋದರ ಅಶ್ರಫ್​ ಅಹ್ಮದ್​ ಕೊಲೆ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮೌನ ಮುರಿದಿದ್ದಾರೆ.

    ಈ ಕುರಿತು ಮಾತನಾಡಿದ ಯೋಗಿ ಮಾಫಿಯಾಗಳು ಇನ್ನು ಮುಂದೆ ಉತ್ತರಪ್ರದೇಶದ ಜನೆತಯನ್ನು ಹೆದರಸಿಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ

    ಯಾರಾದರೂ ಹೆದರಿಸಲು ಸಾಧ್ಯವೇ

    ಈಗ ಉತ್ತರಪ್ರದೇಶದಲ್ಲಿ ಯಾರಾದರೂ ಮಾಫಿಯಾದವರ ಯಾರಅದರೂ ಉದ್ಯಮಿಗಳನ್ನು ಹೆದರಿಸಲು ಸಾಧ್ಯವೇ. ನಾವು ನಿಮ್ಮಗೆ ಉತ್ತಮ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ಬಗ್ಗೆ ಖಾತರಿ ಪಡಿಸುತ್ತೇವೆ ಎಂದು ಹೇಳಿದ್ಧಾರೆ.

    ಇದನ್ನೂ ಓದಿ: ಬಿಲ್ಕಿಸ್​ ಬಾನೊ ಪ್ರಕರಣ; ಗುಜರಾತ್​ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್​

    2012-17ರ ಅವಧಿಯಲ್ಲಿ ಒಟ್ಟು 700 ಗಲಭೆಗಳು ನಡೆದಿದ್ದವು. 2017ರ ನಂತರ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ಗಲಭೆಗಳು ಕಡಿಮೆಯಾಗಿವೆ ಎಂದು ಮಾತನಾಡುವ ವೇಳೆ ಹೇಳಿದ್ಧಾರೆ.

    ಈಗ ಪರಿಸ್ಥಿತಿ ಬದಲಾಗಿದೆ

    ಈ ಹಿಂದೆ ಉತ್ತರಪ್ರದೇಶ ಕೋಮುಗಲಭೆಗಳಿಗೆ ಹೆಸರು ವಾಸಿಯಾಗಿತ್ತು. ಆದರೆ, ನಾವು ಬಂದ ತಕ್ಷಣ ಅದನ್ನು ಬದಲಾಯಿಸಿದ್ದೇವೆ ಎಂದು ಜವಳಿ ಪಾರ್ಕ್​ ಸ್ಥಾಪನೆ ಕುರಿತು ನಡೆದ MOU ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts