More

    ಅಕ್ಷಯ್ ಕುಮಾರ್ ಫಿಟ್ನೆಸ್‍ ರಹಸ್ಯವೇನು? ಸ್ಟಾರ್ ನಟ ನೀಡಿದ 5 ಟಿಪ್ಸ್ ಇಂತಿವೆ…

    ನವದೆಹಲಿ: ಅಕ್ಷಯ್ ಕುಮಾರ್, ಬಾಲಿವುಡ್ ನಟರಲ್ಲಿ ಫಿಟ್‍ನೆಸ್‍ಗೆ ಹೆಸರಾಗಿರುವ ನಟರಲ್ಲಿ ಒಬ್ಬರೆಂದು ಪರಿಗಣಿಸಬಹುದು. ಅವರ ಮುಂಬರುವ ಚಿತ್ರ ಒಎಂಜಿ 2 ರ ಟೀಸರ್ನಲ್ಲಿ, ತೆರೆಯ ಮೇಲೆ ಶಿವನಾಗಿ ಕಾಣಿಸಿಕೊಳ್ಳುತ್ತಿದ್ದು ಅನೇಕರು ಹೊಸ ಅವತಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅವರು ಕೇವಲ ಜಿಮ್ನಲ್ಲಿ ಗಂಟೆಗಟ್ಟಲೆ ಕಳೆದು ಬಾಡಿ ಬಿಲ್ಡ್ ಮಾಡುವುದಿಲ್ಲ ಎನ್ನುವ ಮಾತಿದೆ. ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವ ಕಡೆಗೆ ಅವರ ಸಂಪೂರ್ಣ ಗಮನ ಇರುತ್ತದೆ ಎನ್ನಬಹುದು. ಅವರ ಹೊಸ ಲುಕ್‍ ೀ ಜೀವನಶೈಲಿಯದ್ದೇ ಫಲಿತಾಂಶವಾಗಿದೆ ಎನ್ನಬಹುದು. 55 ನೇ ವಯಸ್ಸಿನಲ್ಲೂ ನಟ ಹೇಗೆ ಫಿಟ್ ಮತ್ತು ಆರೋಗ್ಯಕರವಾಗಿ ಕಾಣುತ್ತಾನೆ ಎಂದು ಎಂದಾದರೂ ಆಶ್ಚರ್ಯ ಪಡುವ ಪ್ರತಿಯೊಬ್ಬರೂ ಅವರ ಸಲಹೆಗಳನ್ನು ಅನುಸರಿಸಬಹುದಾಗಿದೆ.

    ಅಕ್ಷಯ್ ಕುಮಾರ್ ಫಿಟ್ನೆಸ್‍ ರಹಸ್ಯವೇನು? ಸ್ಟಾರ್ ನಟ ನೀಡಿದ 5 ಟಿಪ್ಸ್ ಇಂತಿವೆ…

    ಇದನ್ನೂ ಓದಿ: ನೆಲ ಕಚ್ಚಿದ ಬಾಲಿವುಡ್​ಗೆ ಮತ್ತೆ ಜೀವ ತುಂಬೋದು ಹೇಗೆ? ಅಕ್ಷಯ್ ಕುಮಾರ್ ನೀಡಿದ್ದಾರೆ ಈ ಒಂದು ಸಲಹೆ…!

    ಅಕ್ಷಯ್ ಕುಮಾರ್, ಸಂದರ್ಶನವೊಂದರಲ್ಲಿ ತಮ್ಮ ಫಿಟ್‍ನೆಸ್‍ ಬಗ್ಗೆ ಮಾತನಾಡಿದ್ದು ಆ ಸಂದರ್ಭದಲ್ಲಿ ಒಟ್ಟು 5 ವಿಚಾರಗಳನ್ನು ಮುನ್ನೆಲೆಗೆ ತಂದಿದ್ದಾರೆ. ಅವರ ಜೀವನಶೈಲಿ ಎಂತಹದ್ದು ಎನ್ನುವುದು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅವರು ಜನರಿಗಾಗಿ ನೀಡಿದ 5 ಟಿಪ್ಸ್ ಹೀಗಿದೆ:

    ಅಕ್ಷಯ್ ಕುಮಾರ್ ಫಿಟ್ನೆಸ್‍ ರಹಸ್ಯವೇನು? ಸ್ಟಾರ್ ನಟ ನೀಡಿದ 5 ಟಿಪ್ಸ್ ಇಂತಿವೆ…

    ಇದನ್ನೂ ಓದಿ: ವರದಕ್ಷಿಣೆಗೆ ಉತ್ತೇಜನ ನೀಡಿದರೇ ಅಕ್ಷಯ್ ಕುಮಾರ್? ನಟನಿಗೆ ನೆಟ್ಟಿಗರ ತರಾಟೆ

    1. ಸರಿಯಾದ ಆಹಾರವನ್ನು ಆರಿಸಿ ತಿನ್ನಿ: ಅನೇಕ ತರಬೇತುದಾರರು ಮತ್ತು ತಜ್ಞರು ಕಟ್ಟುನಿಟ್ಟಾದ ಡಯೆಟ್‍ ಶಿಫಾರಸು ಮಾಡಿದರೆ, ಅಕ್ಷಯ್ ಕುಮಾರ್ ಮಾತ್ರ, ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ಆಹಾರವನ್ನು ತಿನ್ನುವತ್ತ ಗಮನ ಹರಿಸುತ್ತಾರೆ. ದಿನದ ಹೆಚ್ಚಿನ ಸಮಯ ಹೊರಗೆ ಕೆಲಸ ಮಾಡುವ ವೃತ್ತಿಪರರು, ಮನೆಯಲ್ಲೇ ತಯಾರಿಸಿದ ಆಹಾರವನ್ನು ಒಯ್ಯಬೇಕು. ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ತಿನ್ನುವುದನ್ನು ತಪ್ಪಿಸುತ್ತಾರೆ ಎಂದು ಅವರು ಸಲಹೆ ನೀಡಿದ್ದಾರೆ. ಈ ಸಂದರ್ಭ ಹಣ್ಣುಗಳ ಮಹತ್ವವನ್ನು ಅವರು ಒತ್ತಿ ಹೇಳಿದ್ದು ಊಟದಲ್ಲಿ ಉತ್ತಮ ಕೊಬ್ಬಾಗಿರುವ ತುಪ್ಪವನ್ನು ತಿನ್ನಬೇಕು ಎಂದೂ ಹೇಳಿದ್ದಾರೆ. 
      ಅಕ್ಷಯ್ ಕುಮಾರ್ ಫಿಟ್ನೆಸ್‍ ರಹಸ್ಯವೇನು? ಸ್ಟಾರ್ ನಟ ನೀಡಿದ 5 ಟಿಪ್ಸ್ ಇಂತಿವೆ…
      ಇದನ್ನೂ ಓದಿ: ಅಕ್ಷಯ್ ಕುಮಾರ್​ ಚಿತ್ರ ಕೇಳೋರಿಲ್ಲ..!
       
    2. ಸಮಯಕ್ಕೆ ಸರಿಯಾಗಿ ನಿದ್ದೆ: ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದರ ಬಗೆಗಿನ ಮಹತ್ವವನ್ನು ಎಷ್ಟು ಹೇಳಿದರೂ ಸಾಲದು. ನಾವು ಸಮಯಕ್ಕೆ ಸರಿಯಾಗಿ ಮಲಗಿ ಬೇಗನೆ ಎದ್ದಾಗ ತಾಜಾ ಮನಸ್ಸಿನಿಂದ ದಿನವನ್ನು ಪ್ರಾರಂಭಿಸಬಹುದು ಎಂದು ಅಕ್ಷಯ್ ಕುಮಾರ್ ಹೇಳುತ್ತಾರೆ. ಅವರು ರಾತ್ರಿ 9 ಗಂಟೆಗೆ ಮಲಗಿ ಬೆಳಿಗ್ಗೆ 4 ಗಂಟೆಗೆ ಎಚ್ಚರಗೊಳ್ಳುತ್ತಾರೆ ಎಂದು ಹೇಳಕೊಂಡಿದ್ದಾರೆ. ಅವರು ಬೆಳಗಿನ ಹೊತ್ತನ್ನು ಏಕಾಂತದಲ್ಲಿ ಕಳೆಯಲು ಇಷ್ಟಪಡುತ್ತಾರೆ ಎಂದು ಹೇಳಿಕೊಳ್ಳುತ್ತಾರೆ.
      ಇದನ್ನೂ ಓದಿ: ಅಕ್ಷಯ್ ಕುಮಾರ್ ‘ಬೆಲ್​ಬಾಟಂ’ ಸಿನಿಮಾ ಚಿತ್ರಮಂದಿರಕ್ಕೆ ಬರಲು ರೆಡಿ; ಇಲ್ಲಿದೆ ನೂತನ ಬಿಡುಗಡೆ ದಿನಾಂಕ
      ಅಕ್ಷಯ್ ಕುಮಾರ್ ಫಿಟ್ನೆಸ್‍ ರಹಸ್ಯವೇನು? ಸ್ಟಾರ್ ನಟ ನೀಡಿದ 5 ಟಿಪ್ಸ್ ಇಂತಿವೆ…
    3. ವ್ಯಾಯಾಮ: ಡೆಸ್ಕ್ ಕೆಲಸ ಮಾಡುವ ಉದ್ಯೋಗಗಿಳ ಜೀವನವು ಹೆಚ್ಚಿನ ಪ್ರಕರಣಗಳಲ್ಲಿ ವ್ಯಾಯಾಮ ಇಲ್ಲದೇ ಸಾಗುತ್ತದೆ. ಹೀಗಾಗಬಾರದು ಎಂದು ಹೇಳುವ ಅಕ್ಷಯ್ ಕುಮಾರ್, ನಿಯಮಿತವಾಗಿ ವ್ಯಾಯಾಮ ಮಾಡುವುದರ ಮಹತ್ವವನ್ನು ಒತ್ತಿಹೇಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ ಒಂದು ಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಬೇಕು ಎಂದು ಅವರು ಸಲಹೆ ನೀಡುತ್ತಾರೆ. ಅವರು ಸರಳವಾಗಿ ನಡೆಯಬಹುದು, ಜಿಮ್ ಗೆ ಹೋಗಬಹುದು ಅಥವಾ ಯಾವುದೇ ರೀತಿಯ ತಾಲೀಮು ಆಯ್ಕೆ ಮಾಡಬಹುದು, ಆದರೆ ದಿನನಿತ್ಯವೂ ವ್ಯಾಯಾಮ ಮಾಡುವ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎನ್ನುತ್ತಾರೆ.
      ಇದನ್ನೂ ಓದಿ: ಸೋಲಿನ ಎಫೆಕ್ಟ್​​; ಮತ್ತೆ ಕಾಮಿಡಿಯತ್ತ ಹೊರಳಿದ ಅಕ್ಷಯ್​ ಕುಮಾರ್​
      ಅಕ್ಷಯ್ ಕುಮಾರ್ ಫಿಟ್ನೆಸ್‍ ರಹಸ್ಯವೇನು? ಸ್ಟಾರ್ ನಟ ನೀಡಿದ 5 ಟಿಪ್ಸ್ ಇಂತಿವೆ…
    4. ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ: ವೇಗದ ಜೀವನಶೈಲಿ ರೂಢಿಸಿಕೊಂಡಿರುವ ನಾವು, ನಮ್ಮ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಿ ನಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸಲು ಪಟ್ಟುಬಿಡದೆ ಕೆಲಸ ಮಾಡುತ್ತೇವೆ. ಹೀಗೆ ಮಾಡಿದಾಗ ಶಾರೀರಿಕ ಆರೋಗ್ಯವೂ ಹದಗೆಡುತ್ತದೆ ಎಂದು ನಟ ಹೇಳಿದ್ದಾರೆ. ಹೀಗಾಗಿ ಅವರ ಸಲಹೆಯಂತೆ ಅಗತ್ಯ ಸಂದರ್ಭಗಳಲ್ಲಿ ವಿರಾಮ ತೆಗೆದುಕೊಳ್ಳುವುದು ಮತ್ತು ಸ್ವಯಂ ಕಾಳಜಿ ಮಾಡುವುದು ಅತ್ಯಗತ್ಯ.
      ಇದನ್ನೂ ಓದಿ: ಅಕ್ಷಯ್​ಕುಮಾರ್ ಅಭಿನಯದ ಸೂರ್ಯವಂಶಿ ಆಗಮನ

    5. ಶಿಸ್ತು: ಒಬ್ಬರು ಫಿಟ್ ಆಗಿರಲು ಬಯಸಿದರೆ ಅವರು ಅದಕ್ಕೆ ಸ್ವತಃ ಆದ್ಯತೆ ನೀಡಬೇಕು. ಅವರು ತಮ್ಮ ಆರೋಗ್ಯದ ಗುರಿಗಳನ್ನು ನಿಗದಿಪಡಿಸಿ ಅದರ ಕಡೆಗೆ ಪ್ರತಿದಿನ ಕೆಲಸ ಮಾಡಲು ಬದ್ಧರಾಗಿರಬೇಕು ಎಂದು ಅಕ್ಕಿ ಹೇಳುತ್ತಾರೆ. ಶಿಸ್ತು ಇಲ್ಲದೇ ಹೋದಲ್ಲಿ ನಿಯಮಿತವಾಗಿ ದಿನವೂ ಒಂದೇ ರೀತಿಯಲ್ಲಿ ಬದುಕುವುದು ಕಷ್ಟಕರ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts