6 ತಿಂಗಳ ಬಳಿಕ ಮತ್ತೆ ಸಿನಿಮಾ ಶೂಟಿಂಗ್​ಗೆ ಮರಳಿದ ನಟ ಸಾಯಿ ಧರಮ್ ತೇಜ್! ವಿಡಿಯೋ ವೈರಲ್...

Published on
ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ಬೈಕ್ ಅಪಘಾತದ ನಂತರ ಮೆಗಾ ಕುಟುಂಬದ ನಟ ಸಾಯಿ ಧರಮ್ ತೇಜ್ ಅವರು ಹೆಚ್ಚು ಕಡಿಮೆ ನಾಲ್ಕು ತಿಂಗಳು ವಿಶ್ರಾಂತಿ ಪಡೆದರು ಎಂದು ವರದಿಗಳು ತಿಳಿಸಿದ್ದವು. ಇದೀಗ, 6 ತಿಂಗಳ ನಂತರ ಪೂರ್ತಿ ಚೇತರಿಸಿಕೊಂಡ ಬಳಿಕ ಸಾಯಿ ಧರಮ್ ತೇಜ್ ಮಂಗಳವಾರ ದಂದು ಹೈದರಾಬಾದ್‌ನಲ್ಲಿ ತಮ್ಮ ಮುಂಬರುವ ಚಿತ್ರ #SDT15 ಶೂಟಿಂಗ್ ಅನ್ನು ಆರಂಭಿಸಿದ್ದಾರೆ.
ಈ ಬಗ್ಗೆ ಸ್ವತಃ 'ಎಸ್‌ಡಿಟಿ 15' ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಶ್ರೀ ವೆಂಕಟೇಶ್ವರ ಸಿನಿಸ್, ಚಿತ್ರದ ಸೆಟ್‌ಗಳಿಗೆ ಆಗಮಿಸಿದ ನಟನನ್ನು ಚಿತ್ರತಂಡ ಸ್ವಾಗತಿಸುವ ವಿಡಿಯೋವೊಂವನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಇನ್ನು, ವಿಡಿಯೋದಲ್ಲಿ ನಟ ಸಾಯಿ ಭಾವುಕರಾಗಿರುವುದು ಕಂಡು ಬಂದಿದೆ. ಸಾಯಿ, "ನನಗೆ ಇಂತಹ ಆತ್ಮೀಯ ಸ್ವಾಗತವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು," ಎಂದು ತಿಳಿಸಿದ್ದಾರೆ.
ಈ ಹೃತ್ಪೂರ್ವಕ ಸ್ವಾಗತದಿಂದ ಭಾವಿಕರಾದ ಸಾಯಿ, "ಈ ಆಶ್ಚರ್ಯಕರ ಸ್ವಾಗತಕ್ಕಾಗಿ ತಂಡ #SDT15 ಗೆ ಧನ್ಯವಾದಗಳು. ಮತ್ತೆ ಸೆಟ್‌ಗಳಿಗೆ ಹಿಂತಿರುಗುವುದು ತುಂಬಾ ರೋಮಾಂಚನಕಾರಿ ಮತ್ತು ಭಾವನಾತ್ಮಕವಾಗಿದೆ, ನೀವು ನನ್ನ ಆಗಮನದ ಸಂತಸವನ್ನು ನಿಮ್ಮ ಪ್ರೀತಿಯಿಂದ ಇನ್ನಷ್ಟು ಹೆಚ್ಚು ಮಾಡಿದ್ದೀರಿ. @IAmVarunTej ಧನ್ಯವಾದಗಳು. #RNarayanaMurthyಗೆ ವಿಶೇಷ ಧನ್ಯವಾದಗಳು. #ಹೊಸ ಆರಂಭ," ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, SVCC ಮತ್ತು ಸುಕುಮಾರ್ ಬರವಣಿಗೆಯ ಬ್ಯಾನರ್‌ಗಳ ಅಡಿಯಲ್ಲಿ ಬೀವಿಸ್ ಪ್ರಸಾದ್ ಮತ್ತು ಸುಕುಮಾರ್ ಅವರಿಂದ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕಾರ್ತಿಕ್ ದಂಡು ಅವರು ಈ ಸಿನಿಮಾಗೆ ನಿರ್ದೇಶಕರಾಗಿದ್ದಾರೆ. ಶಾಂದತ್ ಸೈನುದ್ದೀನ್ ಅವರು ಕ್ಯಾಮೆರಾ ಕೆಲಸ ಮಾಡಿಲಿದ್ದು, ಈ ಸಿನಿಮಾಗೆ ನಾಯಕಿ ನಟಿ ಇನ್ನು ಆಯ್ಕೆಯಾಗ ಬೇಕಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net