WhatsApp Marriage : ಬಿಹಾರದ ಮುಜಾಫರ್‌ಪುರದಲ್ಲಿ ನಡೆದ ಮದುವೆಯೊಂದು ಭಾರಿ ಸಂಚಲನ ಮೂಡಿಸಿದೆ. ಜೋಡಿಯೊಂದು ವಾಟ್ಸ್ಆ್ಯಪ್ನಲ್ಲೇ ವಿವಾಹವಾಗುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಆದರೆ, ಎರಡೂ ಕುಟುಂಬಗಳು ಅವರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ವಿರೋಧಕ್ಕೂ ಅಂಜದ ಯುವ ಜೋಡಿ, ತಮ್ಮ ಹಿರಿಯರ ನಿರ್ಧಾರಕ್ಕೆ ವಿರುದ್ಧವಾಗಿ ಒಟ್ಟಿಗೆ ಇರಲು ಮುಂದಾಗಿದ್ದಾರೆ.
ಇಂಟರ್ಮೀಡಿಯೇಟ್ ವಿದ್ಯಾರ್ಥಿಗಳಾದ ಹುಡುಗಿ ಮತ್ತು ಹುಡುಗ ವಾಟ್ಸ್ಆ್ಯಪ್ ಸಂದೇಶಗಳ ಮೂಲಕವೇ ವಿವಾಹವಾಗಿದ್ದಾರೆ. ನಾನು ನಿನ್ನ ಮದುವೆಯಾಗಲು ಒಪ್ಪಿಗೆ ನೀಡುತ್ತೇನೆ ಎಂದು ಹುಡುಗ ಮೊದಲು ಮೆಸೇಜ್ ಮಾಡಿದನು. ಅದಕ್ಕೆ ಪ್ರತಿಕ್ರಿಯೆಯಾಗಿ ಹುಡುಗಿ “ಕಾಬೂಲ್ ಹೈ” (ನಾನು ಒಪ್ಪುತ್ತೇನೆ) ಎಂದು ಹೇಳಿದಳು. ಹುಡುಗ ಮತ್ತು ಹುಡುಗಿ ಕಾಬೂಲ್ ಹೈ ಎಂದು ಮೂರು ಬಾರಿ ಮೆಸೇಜ್ ಕಳುಹಿಸಿದ್ದಾರೆ.
ಹುಡುಗ ಅವಳನ್ನು ತನ್ನ ಹೆಂಡತಿ ಎಂದು ಪರಿಗಣಿಸುವುದಾಗಿ ಮಸೇಜ್ ಕಳುಹಿಸಿದ್ದು, ಅದಕ್ಕೆ ಆಕೆಯು ಒಪ್ಪಿಕೊಂಡಿದ್ದಾಳೆ. ಆದರೆ, ಎರಡೂ ಕುಟುಂಬಗಳು ಈ ವಾಟ್ಸ್ಆ್ಯಪ್ ಮದುವೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದವು. ಇದರಿಂದ ಸಾಕಷ್ಟು ವಾಗ್ವಾದ ಮತ್ತು ಗಲಾಟೆಗಳು ನಡೆದವು. ಕೊನೆಗೆ ಪೊಲೀಸರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮಾಡಿತು.
ಇದನ್ನೂ ಓದಿ: ಟಿ20 ಲೀಗ್ಗಳಲ್ಲಿ ಹಾಲಿ ವರ್ಷ ಹೊಸ ತಂಡಗಳ ಗೆಲುವಿನ ಟ್ರೆಂಡ್! ಐಪಿಎಲ್ನಲ್ಲೂ ಮುಂದುವರಿಯುತ್ತಾ?
ಹುಡುಗ ಎರಡು ವರ್ಷಗಳಿಂದ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಇಬ್ಬರೂ ವಿಭಿನ್ನ ಜಾತಿಯವರಾದ್ದರಿಂದ ಎರಡೂ ಕುಟುಂಬಗಳು ಇದಕ್ಕೆ ಒಪ್ಪಲಿಲ್ಲ. ನಾನು ಹುಡುಗಿಯನ್ನು ಮದುವೆಯಾಗಲು ಅನುಮತಿ ನೀಡಲೇಬೇಕೆಂದು ಒತ್ತಾಯಿಸಿ ಸುಮಾರು 2 ಗಂಟೆಗಳ ಕಾಲ ಹುಡುಗ ಠಾಣೆಯಲ್ಲಿ ಹೈಡ್ರಾಮ ಸೃಷ್ಟಿಸಿದ.
ಪೊಲೀಸರು ಹುಡುಗ ಮತ್ತು ಹುಡುಗಿಯ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದಾಗ, ಕಾಬೂಲ್ ಹೈ ಎಂಬ ಸಂದೇಶಗಳು ಪತ್ತೆಯಾಯಿತು. ಪೊಲೀಸರು ಗಂಟೆಗಟ್ಟಲೆ ಕೌನ್ಸೆಲಿಂಗ್ ನೀಡಿದರೂ ಹುಡುಗ, ತನ್ನ ಹುಡುಗಿಯೊಂದಿಗೆ ಇರಬೇಕೆಂದು ದೃಢವಾಗಿ ಒತ್ತಾಯಿಸಿದನು.
ಕಾನೂನು ಕ್ರಮ ಕೈಗೊಳ್ಳಲು ಎರಡೂ ಕುಟುಂಬಗಳಿಂದ ಅಧಿಕೃತ ದೂರಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಅಲ್ಲದೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಎರಡೂ ಕಡೆಯವರ ನಡುವೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸೀಸ್)
ಗೇ ಆ್ಯಪ್ನಲ್ಲಿ ಪರಿಚಯ: ಕರೆದ ಕೂಡಲೇ ಮನೆಗೆ ಹೋದ ಯುವಕನಿಗೆ ಕಾದಿತ್ತು ಬಿಗ್ ಶಾಕ್! Gay App
ಈ 3 ರಾಶಿಯ ಪುರುಷರು ಪ್ರೀತಿಗೋಸ್ಕರ ತಮ್ಮ ಪ್ರಾಣ ಕೊಡಲು ಸಿದ್ಧರಾಗಿರುತ್ತಾರೆ! ನಿಮ್ಮದು ಇದೇ ರಾಶಿನಾ? Zodiac Signs