ಟಿ20 ಲೀಗ್​ಗಳಲ್ಲಿ ಹಾಲಿ ವರ್ಷ ಹೊಸ ತಂಡಗಳ ಗೆಲುವಿನ ಟ್ರೆಂಡ್​! ಐಪಿಎಲ್​ನಲ್ಲೂ ಮುಂದುವರಿಯುತ್ತಾ?

web t20 l
Published on

ಬೆಂಗಳೂರು: ಹಾಲಿ ವರ್ಷದ ವಿವಿಧ ಟಿ20 ಲೀಗ್​ಗಳಲ್ಲಿ ಹೊಸ ತಂಡಗಳ ಗೆಲುವಿನ ಟ್ರೆಂಡಿಂಗ್​ ಮುಂದುವರಿದಿದೆ. ಆಸ್ಟ್ರೆಲಿಯಾದ ಬಿಗ್​ಬಾಷ್​ ಲೀಗ್​ನಲ್ಲಿ ಹೋರ್ಬಟ್​ ಹರಿಕೇನ್​ ಮೊದಲ ಬಾರಿ ಚಾಂಪಿಯನ್​ ಆಗಿದ್ದರೆ, ದಕ್ಷಿಣ ಆಫ್ರಿಕಾದ ಎಸ್​ಎ20ಯಲ್ಲಿ ಎಂಐ ಕೇಪ್​ಟೌನ್​ ಮೊದಲ ಬಾರಿ ಪ್ರಶಸ್ತಿ ಜಯಿಸಿತ್ತು. ಇದೀಗ ಯುಎಇಯ ಐಎಲ್​ಟಿ20ಯಲ್ಲೂ ದುಬೈ ಕ್ಯಾಪಿಟಲ್ಸ್​ ಮೊದಲ ಬಾರಿ ಪ್ರಶಸ್ತಿ ಜಯಿಸಿದೆ.

ಇದರ ಬೆನ್ನಲ್ಲೇ ಐಪಿಎಲ್​ನಲ್ಲೂ ಇದೇ ಟ್ರೆಂಡ್​ ಮುಂದುವರಿಯುವುದೇ ಎಂದು ಕ್ರಿಕೆಟ್​ ಪ್ರೇಮಿಗಳಲ್ಲಿ ಕುತೂಹಲ ಮೂಡಿದೆ. ಜತೆಗೆ ಆರ್​ಸಿಬಿ, ಪಂಜಾಬ್​ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಲಖನೌ ಸೂಪರ್​ಜೈಂಟ್ಸ್​ ಅಭಿಮಾನಿಗಳು "ಈ ಸಲ ಕಪ್​ ನಮ್ದೇ' ಎಂದು ಹೇಳಲಾರಂಭಿಸಿದ್ದಾರೆ.

ಐಪಿಎಲ್​ನಲ್ಲಿ ಆಡುವ ಇತರ 6 ತಂಡಗಳು (ಮುಂಬೈ, ಸಿಎಸ್​ಕೆ, ರಾಜಸ್ಥಾನ, ಕೆಕೆಆರ್, ಗುಜರಾತ್​, ಸನ್​ರೈಸರ್ಸ್) ಈಗಾಗಲೆ ಕನಿಷ್ಠ ಒಮ್ಮೆಯಾದರೂ ಪ್ರಶಸ್ತಿ ಗೆದ್ದಿರುವ ತಂಡಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net