ಮುಂಬೈ: ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ನಿಂದ (ಆರ್ ಸಿಪಿಎಲ್) ಹೊಸ ಕ್ರೀಡಾ ಪಾನೀಯ ‘ಸ್ಪಿನ್ನರ್’ ಅನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಈ ಕ್ರೀಡಾ ಪಾನೀಯವನ್ನು ಸ್ಪಿನ್ ಮಾಂತ್ರಿಕ ಮತ್ತು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಸಹಯೋಗದಲ್ಲಿ ಹೊರತರಲಾಗಿದೆ. ಮುಂದಿನ 3 ವರ್ಷಗಳಲ್ಲಿ ಕ್ರೀಡಾ ಪಾನೀಯಗಳ ಮಾರುಕಟ್ಟೆ 1 ಬಿಲಿಯನ್ ಡಾಲರ್ ತಲುಪಲಿದೆ. ಅಂದರೆ ಇಂದಿನ ಭಾರತದ ರೂಪಾಯಿ ಲೆಕ್ಕದಲ್ಲಿ 8744 ಕೋಟಿಗೂ ಹೆಚ್ಚು ಮತ್ತು ‘ಸ್ಪಿನ್ನರ್’ ಈ ಮಾರುಕಟ್ಟೆಯಲ್ಲಿ ದೊಡ್ಡ ಉತ್ಪನ್ನ ಆಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಕ್ರೀಡಾ ಪಾನೀಯ ‘ಸ್ಪಿನ್ನರ್’ ಇಂಡಿಯನ್ ಕ್ರಿಕೆಟ್ ಲೀಗ್‌ನ ಅಂದರೆ ಐಪಿಎಲ್ ನ ಹಲವಾರು ತಂಡಗಳೊಂದಿಗೆ ಸಹಯೋಗ ಹೊಂದಿದೆ. ಇವುಗಳಲ್ಲಿ ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಸೇರಿವೆ.
‘ಸ್ಪಿನ್ನರ್’ ಪಾನೀಯದ ಸಹ-ನಿರ್ಮಾತೃ ಮತ್ತು ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಮಾತನಾಡಿ, “ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಜತೆಗಿನ ಈ ರೋಮಾಂಚಕಾರಿ ಉದ್ಯಮದ ಭಾಗವಾಗಲು ನನಗೆ ಖುಷಿಯಾಗಿದೆ. ಒಬ್ಬ ಕ್ರೀಡಾಪಟುವಾಗಿ, ವಿಶೇಷವಾಗಿ ನೀವು ಪ್ರಯಾಣದಲ್ಲಿರುವಾಗ ಅಥವಾ ಕ್ರೀಡೆಗಳನ್ನು ಆಡುವಾಗ ದೇಹದಲ್ಲಿನ ನೀರಿನ ಪ್ರಮಾಣ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಎಂದು ನನಗೆ ತಿಳಿದಿದೆ. ‘ಸ್ಪಿನ್ನರ್’ ಪ್ರತಿ ಭಾರತೀಯರೂ ನೀರಿನ ಅಂಶ ಹೊಂದಿರುವುದಕ್ಕೆ ಮತ್ತು ಚಟುವಟಿಕೆಯಿಂದ ಇರುವುದಕ್ಕೆ ಸಹಾಯ ಮಾಡುವ ಗೇಮ್ ಚೇಂಜರ್ ಆಗಿದೆ,” ಎಂದು ಹೇಳಿದರು.
“ಪ್ರತಿ ಭಾರತೀಯರಿಗೂ ಗುಣಮಟ್ಟದ ಉತ್ಪನ್ನಗಳು ಲಭ್ಯವಾಗಬೇಕು ಎಂದು ನಾವು ನಂಬುತ್ತೇವೆ. ‘ಸ್ಪಿನ್ನರ್’ ಜತೆಗೆ ವೃತ್ತಿಪರ ಕ್ರೀಡಾಪಟುವಾಗಲಿ ಅಥವಾ ನೀರಿನಂಶವನ್ನು ಕಾಪಾಡಿಕೊಳ್ಳಲು ಬಯಸುವವರಾಗಲಿ ಎಲ್ಲರೂ ಆನಂದಿಸಬಹುದಾದ ಕೈಗೆಟುಕುವ ಮತ್ತು ಪರಿಣಾಮಕಾರಿಯಾದ ದೇಹದಲ್ಲಿನ ನೀರು ಕಾಪಾಡಿಕೊಳ್ಳುವ ಪಾನೀಯವನ್ನು ನಾವು ಹೊರತಂದಿದ್ದೇವೆ. ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಮತ್ತು ಐಪಿಎಲ್ ತಂಡಗಳ ಸಹಭಾಗಿತ್ವದಲ್ಲಿ ಈ ನವೀನ ಉತ್ಪನ್ನವನ್ನು ಮಾರುಕಟ್ಟೆಗೆ ತರಲು ನಾವು ತುಂಬಾ ಉತ್ಸುಕರಾಗಿದ್ದೇವೆ,” ಎಂದು ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಸಿಒಒ ಕೇತನ್ ಮೋದಿ ಹೇಳಿದರು. ‘ಸ್ಪಿನ್ನರ್’ ಕ್ರೀಡಾ ಪಾನೀಯವು ನಿಂಬೆ, ಕಿತ್ತಳೆ ಮತ್ತು ನೈಟ್ರೋ ನೀಲಿ ಎಂಬ ಮೂರು ರುಚಿಗಳಲ್ಲಿ ಲಭ್ಯವಿದೆ.
ನೀರಿನ ಅಂಶ ಕಾಯ್ದುಕೊಳ್ಳಲು ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಅದರಲ್ಲಿ ಬೆರೆಸಲಾಗಿದೆ. ನೀವು ಅತಿಯಾಗಿ ಬೆವರು ಹರಿಸಿದಾಗ ಅದು ದೇಹದಲ್ಲಿ ನೀರಿನ ಅಂಶ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ‘ಸ್ಪಿನ್ನರ್’ ಅನ್ನು ಪ್ರಾರಂಭಿಸುವುದರೊಂದಿಗೆ, ನೀರಿನ ಅಂಶ ದೇಹದಲ್ಲಿ ಕಾಯ್ದುಕೊಳ್ಳಲು ಕೈಗೆಟುಕುವ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡಲು ಕಂಪನಿಯು ಹೆಮ್ಮೆಪಡುತ್ತದೆ ಎಂದು ಆರ್ ಸಿಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹಾಯ್-ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ಗೆ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಪ್ರಚಾರ ರಾಯಭಾರಿ