

ಬೆಂಗಳೂರು: ಪ್ರಾಯೋಗಿಕ ಕಲಿಕೆ ಮತ್ತು ಸಮಗ್ರ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಹಾಯ್-ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ಗೆ ಭಾರತದ ಖ್ಯಾತ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರು ಪಾಲುದಾರರಾಗಿದ್ದಾರೆ ಮತ್ತು ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಸಹಭಾಗಿತ್ವವು ಶೈಕ್ಷಣಿಕ, ಶಿಸ್ತು ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರೇಷ್ಠತೆಗಾಗಿ ಹಾಯ್-ಕಲ್ಪಾದ ಬದ್ಧತೆಯನ್ನು ಇನ್ನಷ್ಟು ಬಲವರ್ಧನೆಗೊಳಿಸುತ್ತದೆ.
ಈ ಪಾಲುದಾರಿಕೆ ಮೂಲಕ ಕ್ರೀಡಾಪಟುವಾಗಿ ಚಾಹಲ್ ಅವರ ಸ್ಫೂರ್ತಿದಾಯಕ ಪ್ರಯಾಣವು ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವದ ಮೌಲ್ಯಗಳನ್ನು ಹೊಂದಲು ಸಹಕಾರಿಯಾಗಲಿದೆ ಎಂದು ಹಾಯ್-ಕಲ್ಪಾ ತಿಳಿಸಿದೆ. ಜಾಗತಿಕ ಕ್ರಿಕೆಟ್ ಲೋಕದ ಐಕಾನ್ ಮತ್ತು ಯುವ ಸಮುದಾಯಕ್ಕೆ ರೋಲ್ಮಾಡೆಲ್ ಆಗಿ, ಶಾಲೆಯೊಂದಿಗೆ ಚಾಹಲ್ ಅವರ ಪಾಲುದಾರಿಕೆಯು ಕ್ರೀಡೆ-ಸಂಯೋಜಿತ ಕಲಿಕೆ, ನಾಯಕತ್ವ ಮತ್ತು ಪಾತ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಚಾಹಲ್ ಅವರು ವಿಶೇಷ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರೇರಣಾದಾಯಕ ಮಾತುಗಳನ್ನಾಡಿದರು. ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ಅವರು, ಶಿಕ್ಷಣ ಮತ್ತು ಕ್ರೀಡೆಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶೈಕ್ಷಣಿಕ ಉತ್ಕೃಷ್ಣತೆ ಮತ್ತು ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಪೋಷಿಸಲು ಬದ್ಧವಾಗಿರುವ ಸಂಸ್ಥೆಯಾಗಿರುವ ಹಾಯ್-ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ ಜತೆಗೆ ಸೇರಲು ನಾನು ಉತ್ಸುಕನಾಗಿದ್ದೇನೆ. ಭಾರತದಾದ್ಯಂತ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇದರ ಭಾಗವಾಗಿರುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಾಯ್-ಕಲ್ಪಾ ಗ್ರೂಪ್ ಆಫ್ ಸ್ಕೂಲ್ಸ್ನ ಸಂಸ್ಥಾಪಕ ಮತ್ತು ನಿರ್ದೇಶಕ ಶಾಲಿನಿ ಶರ್ಮ ಮತ್ತು ವಿಕಾಶ್ ಶರ್ಮ ಅವರು, ಯಜುವೇಂದ್ರ ಚಾಹಲ್ ನಮ್ಮ ವಿದ್ಯಾರ್ಥಿಗಳಲ್ಲಿ ನಾವು ಆಳವಾಗಿ ತುಂಬುವ ಶ್ರೇಷ್ಠತೆ ಮತ್ತು ನಿರ್ಣಯದ ಮನೋಭಾವವನ್ನು ಸಾಕಾರಗೊಳಿಸಿದ್ದಾರೆ. ಹಾಯ್-ಕಲ್ಪಾ ಅವರೊಂದಿಗಿನ ಒಡನಾಟವು ಯುವ ಮನಸ್ಸುಗಳನ್ನು ದೊಡ್ಡ ಕನಸು ಕಾಣಲು, ಶ್ರಮವಹಿಸಿ ಕೆಲಸ ಮಾಡಲು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.