Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಕೆಲವರು ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಎಲ್ಲ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಮನುಷ್ಯನ ಒಳಿತು-ಕೆಡುಕು, ನಡೆ-ನುಡಿ ಎಲ್ಲದರ ಮೇಲೂ ಗ್ರಹಗಳು ಪ್ರಭಾವ ಬೀರುತ್ತವೆ. ಒಬ್ಬ ವ್ಯಕ್ತಿಯ ಭವಿಷ್ಯದ ಜೀವನ ಹೇಗಿರುತ್ತದೆ? ಆತನ ವಿಶಿಷ್ಟ ಗುಣಗಳು ಏನೆಂಬುದನ್ನು ಗ್ರಹಗತಿಗಳ ಆಧಾರದ ಮೇಲೆ ಸುಲಭ ಊಹಿಸಬಹುದಾಗಿದೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ.
ಹಾಗೆ ನೋಡಿದರೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಪುರುಷರು ಇತರ ಪುರುಷರಿಗಿಂತ ಉತ್ತಮ ಪ್ರೇಮಿಗಳಾಗಿರುತ್ತಾರೆ. ಎಷ್ಟರಮಟ್ಟಿಗೆ ಅಂದರೆ, ಅವರು ತಮ್ಮ ಸಂಗಾತಿಯನ್ನು ತಮ್ಮ ಪ್ರಪಂಚವೆಂದು ನೋಡುವ ಗುಣವನ್ನು ಹೊಂದಿರುತ್ತಾರೆ. ಅಲ್ಲದೆ, ಪ್ರೀತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಈ ಗುಣಗಳನ್ನು ಹೊಂದಿರುವ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ತುಂಬಾ ಭಾವನಾತ್ಮಕವಾಗಿರುತ್ತಾರೆ. ಅವರು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಪ್ರೀತಿಯ ಬಗ್ಗೆ ತುಂಬಾ ಗೌರವವನ್ನು ಇಟ್ಟುಕೊಂಡಿರುತ್ತಾರೆ. ಈ ರಾಶಿಯವರು ತಮ್ಮ ಸಂಗಾತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಸ್ವಭಾವದವರಾಗಿರುತ್ತಾರೆ. ಈ ಜನರು ತಮ್ಮ ಪ್ರೀತಿಗಾಗಿ ಯಾವುದೇ ಹಂತಕ್ಕೂ ಹೋಗುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ಪ್ರೀತಿಯ ವಿಚಾರದಲ್ಲಿ ಹುಚ್ಚರಾಗಿರುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಜನಿಸಿದ ಪುರುಷರು ಸ್ವಾಭಾವಿಕವಾಗಿಯೇ ಇತರರನ್ನು ಆಕರ್ಷಿಸುವ ದೈಹಿಕ ನೋಟವನ್ನು ಹೊಂದಿರುತ್ತಾರೆ. ಅವರು ಪ್ರೀತಿ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ತುಂಬಾ ಪ್ರಾಮಾಣಿಕ ಮತ್ತು ನಿಷ್ಠರಾಗಿರುತ್ತಾರೆ. ಅವರು ಯಾರನ್ನಾದರೂ ಮದುವೆಯಾಗಲು ನಿರ್ಧರಿಸಿದರೆ, ಆ ವ್ಯಕ್ತಿಗೆ ತಮ್ಮ ಎಲ್ಲ ಪ್ರೀತಿಯನ್ನು ನೀಡುತ್ತಾರೆ. ಪ್ರೀತಿಯನ್ನು ನೀಡುವುದು ಮಾತ್ರವಲ್ಲದೆ ಅದನ್ನು ಉಳಿಸಿಕೊಳ್ಳುವವರಾಗಿರುತ್ತಾರೆ. ಪ್ರೀತಿಯ ವಿಚಾರದಲ್ಲಿ ಈ ರಾಶಿಯವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬಂತೆ ಪ್ರೀತಿಯ ಸಂಪೂರ್ಣ ಭಾವನೆಯನ್ನು ನೀಡುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಜನಿಸಿದ ಜನರು ಎರಡು ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ. ಅವರು ತಮ್ಮ ಅಂತರಂಗದ ಭಾವನೆಗಳನ್ನು ಹತ್ತಿರದವರೊಂದಿಗೆ ಮಾತ್ರ ಹಂಚಿಕೊಳ್ಳಬೇಕೆಂದು ಭಾವಿಸುತ್ತಾರೆ. ಅಲ್ಲದೆ, ಪ್ರೀತಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಇವರು ತಮ್ಮ ಸಂಗಾತಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಲ್ಲದೆ, ತಮ್ಮ ಕೋಪವನ್ನು ಸಹಿಸಿಕೊಳ್ಳಬಲ್ಲ ಸಂಗಾತಿಯನ್ನು ಮಾತ್ರ ಮದುವೆಯಾಗಲು ಬಯಸುತ್ತಾರೆ. ಅವರು ಪ್ರೀತಿಯಲ್ಲಿ ಬೀಳುವ ಮೊದಲು ಹಲವು ಬಾರಿ ಯೋಚಿಸುತ್ತಾರೆ ಮತ್ತು ನಂತರ ಪ್ರೀತಿಗಾಗಿ ತಮ್ಮ ಪ್ರಾಣವನ್ನು ನೀಡಲು ಸಿದ್ಧರಾಗುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಜವಾಬ್ದಾರರಾಗಿರುವುದಿಲ್ಲ.
ಭಾರತದ ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಗೆ ಇಬ್ಬರು ಹೆಂಡ್ತಿಯರು ಇರಲೇಬೇಕು! ಕಾರಣ ಕೇಳಿದ್ರೆ ಅಚ್ಚರಿ ಖಚಿತ | Two Wives
ಇಂದು ನನಗೆ… ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮ ಅಚ್ಚರಿ ಮಾತು! Rohit Sharma