Astrology Tips: ರುದ್ರಾಕ್ಷಿ ಎಂಬ ಪದ ಕೇಳಿದೊಡನೆ ನಮ್ಮಲ್ಲಿ ಭಕ್ತಿ ಭವಾನೆ ಮೂಡುತ್ತದೆ. ರುದ್ರಾಕ್ಷಿಗಳಿಂದ (Rudraksha) ತಯಾರಿಸ್ಪಟ್ಟ ಹಾರ, ಮಾಲೆಗಳು ಜನರ ಆಧ್ಯಾತ್ಮಿಕತೆಯನ್ನು ಹೆಚ್ಚಿಸುತ್ತದೆ. ಇವುಗಳನ್ನು ಧರಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ, ಸಕಾರಾತ್ಮಕ ಚಿಂತನೆ ಹೆಚ್ಚುತ್ತದೆ ಎಂಬ ಬಲವಾದ ನಂಬಿಕೆ ನಮ್ಮಲ್ಲಿ. ಹಿಂದೂ ಸಂಪ್ರಾದಯದಲ್ಲಿ ರುದ್ರಾಕ್ಷಿ ಮಣಿ, ಹಾರಗಳಿಗೆ ಮಹತ್ವ ಹಾಗೂ ವಿಶೇಷ ಸ್ಥಾನವಿದೆ.
ಇದನ್ನೂ ಓದಿ: ನಮ್ಮ ಸುತ್ತಲೂ ಎಂತಹ ಸ್ನೇಹಿತರಿರುವರು ಎಂಬುದು ಮುಖ್ಯ; ಆಪ್ತರಿಗಾಗಿಯೇ ಈ ಸಂದೇಶ ಹಂಚಿಕೊಂಡ್ರ ಪವಿತ್ರಾಗೌಡ | Pavithra Gowda
ನಮ್ಮ ಹಿಂದೂ ಪುರಾಣಗಳಲ್ಲಿ ರುದ್ರಾಕ್ಷಿಗಳಿಗೆ ಹೆಚ್ಚಿನ ಗೌರವ ಹಾಗೂ ಪ್ರಾಮುಖ್ಯತೆ ಇದೆ. ರುದ್ರಾಕ್ಷಿಯನ್ನು ಶಿವನ ಒಂದು ರೂಪವೆಂದು ಪರಿಗಣಿಸಲಾಗಿದೆ. ಇದು ಬಹಳ ಶಕ್ತಿಶಾಲಿ ಮತ್ತು ದೈವಿಕ ಶಕ್ತಿಯನ್ನು ಹೊಂದಿವೆ ಎಂಬ ನಂಬಿಕೆಯಿದೆ. ರುದ್ರಾಕ್ಷಿಯು ಶಿವನ ಕಣ್ಣೀರಿನ ಹನಿಯಿಂದ ಸೃಷ್ಟಿಯಾಗಿದೆ ಎಂಬ ಮಾತು ನಮ್ಮಲ್ಲಿದೆ. ಅತ್ಯಂತ ಪವಿತ್ರವಾದ ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ಆಶೀರ್ವಾದ ಲಭಿಸುತ್ತದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ನಮ್ಮಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ಹೇಳಲಾಗಿದೆ. ಅಸಲಿಗೆ ಈ ಪವಿತ್ರ ರುದ್ರಾಕ್ಷಿ ಒಮ್ಮೆ ಕೆಳಗೆ ಬಿದ್ದರೆ ಅದನ್ನು ಮತ್ತೆ ಧರಿಸಬಹುದೇ? ಎಂಬ ಹತ್ತು ಹಲವು ಪ್ರಶ್ನೆಗಳು ಇಂದಿಗೂ ಹಲವರಲ್ಲಿ ಕಾಡುತ್ತಿದೆ.
ಅಷ್ಟಕ್ಕೂ ನೀವು ಯಾವಾಗ ರುದ್ರಾಕ್ಷಿಯನ್ನು ಧರಿಸಬೇಕು? ಧರಿಸಬಾರದು ಎಂಬುದು ನಿಮಗೆ ತಿಳಿದಿದೆಯೇ? ರುದ್ರಾಕ್ಷಿಯನ್ನು ಧರಿಸುವ ಮೊದಲು, ಈ 9 ವಿಷಯಗಳನ್ನು ತಪ್ಪದೇ ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು. ರುದ್ರಾಕ್ಷಿಯನ್ನು ಧರಿಸುವ ಮೊದಲು ನೀವು ಏನು ಮಾಡಬೇಕು? ಏನನ್ನು ಮಾಡಬಾರದು ಎಂಬುದು ಕೂಡ ಅತೀ ಮುಖ್ಯ. ಇದರ ಬಗ್ಗೆ ಒಂದಷ್ಟು ವಿವರವಾದ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಧರಿಸುವ ಮೊದಲು ಶುದ್ಧೀಕರಿಸಿ
ರುದ್ರಾಕ್ಷಿ ಮಣಿಗಳನ್ನು ನೀರು ಅಥವಾ ಹಾಲಿನಿಂದ ಮೊದಲು ಶುದ್ಧೀಕರಿಸಬೇಕು. ಇದು ಮಾಲೆಯನ್ನು ಧರಿಸುವ ಮೊದಲು ಅವುಗಳನ್ನು ಬಲಪಡಿಸುತ್ತದೆ. ಹೀಗೆ ಮಾಡುವುದರಿಂದ ಅವುಗಳಲ್ಲಿ ದೈವಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ನಂಬಿಕೆ.
ಶುಭ ದಿನದಂದು ಧರಿಸಿ
ರುದ್ರಾಕ್ಷಿಯನ್ನು ಶುಭ ದಿನದಂದು ಮಾತ್ರ ಧರಿಸಬೇಕು. ಸೋಮವಾರ ಅಥವಾ ಯಾವುದೇ ಪವಿತ್ರ ಹಬ್ಬದ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸುವುದು ವಿಶೇಷವಾಗಿ ಒಳಿತನ್ನು ತರುತ್ತದೆ.
ಮಂತ್ರಗಳ ಪಠನೆ
ರುದ್ರಾಕ್ಷಿಯನ್ನು ಧರಿಸುವಾಗ, ಅದರಲ್ಲಿ ದೈವಿಕ ಶಕ್ತಿಯನ್ನು ಹೆಚ್ಚಿಸಲು ‘ಓಂ ನಮಃ ಶಿವಾಯ’ ಮಂತ್ರ ಅಥವಾ ಇತರ ದೇವರಿಗೆ ಸಂಬಂಧಿತ ಪ್ರಾರ್ಥನೆಗಳನ್ನು ಪಠಿಸಿದರೆ ಉತ್ತಮ.
ಇದನ್ನೂ ಓದಿ: Jagdeep Dhankhar | ಸಚಿವ ಮಂಕಾಳ ವೈದ್ಯನ ಕೈ ಹಿಡಿದು ನಡೆದ ಉಪರಾಷ್ಟ್ರಪತಿ ಜಗದೀಪ್ ಧನಕರ್
ಸ್ವಚ್ಛವಾಗಿಡಿ
ರುದ್ರಾಕ್ಷಿಯನ್ನು ನಿಯಮಿತವಾಗಿ ನೀರು ಮತ್ತು ಮೃದುವಾದ ಬ್ರಷ್‌ನಿಂದ ಸ್ವಚ್ಛಗೊಳಿಸಿ. ರುದ್ರಾಕ್ಷಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಅಪರೂಪಕ್ಕೆ ಸ್ವಲ್ಪ ಪ್ರಮಾಣದ ಎಣ್ಣೆಯನ್ನು ಹಚ್ಚುವುದು ಒಳಿತು.
ಚರ್ಮಕ್ಕೆ ಸ್ಪರ್ಶಿಸುವಂತೆ ಇರಲಿ
ರುದ್ರಾಕ್ಷಿ ಮಾಲೆಯನ್ನು ಚರ್ಮದ ಹತ್ತಿರ ಧರಿಸುವುದರಿಂದ ದೇಹದಲ್ಲಿ ಪರಿಣಾಮಕಾರಿಯಾಗಿ ಶಕ್ತಿಯನ್ನು ಹರಡುತ್ತದೆ ಎಂಬುದು ಒಂದು ನಂಬಿಕೆ.
ಇದನ್ನೂ ಓದಿ: ಈ ವಾರ ಒಟಿಟಿ ಪ್ರವೇಶಿಸಿದ ಸಿನಿಮಾಗಳಿವು! ಇಲ್ಲಿದೆ ನೋಡಿ ಚಿತ್ರಗಳ ಪಟ್ಟಿ | OTT Films
ಯಾವುದನ್ನು ಮಾಡಬಾರದು?
ರುದ್ರಾಕ್ಷಿಯನ್ನು ಧರಿಸುವ ಮೊದಲು, ಮದ್ಯಪಾನ ಮಾಡುವುದು, ಮಾಂಸದೂಟ ಸೇವಿಸುವುದು ಅಥವಾ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತಹ ಅಶುದ್ಧ ಕೆಲಸಗಳನ್ನು ಮಾಡಬಾರದು.
ಇತರರಿಗೆ ಕೊಡಬೇಡಿ
ಯಾವುದೇ ಸಂದರ್ಭದಲ್ಲೂ ನೀವು ಧರಿಸಿರುವ ರುದ್ರಾಕ್ಷಿಯನ್ನು ಅನ್ಯರಿಗೆ ಧರಿಸಲು ನೀಡಬೇಡಿ. ಇದಲ್ಲದೆ, ನಿಮ್ಮ ರುದ್ರಾಕ್ಷಿಯನ್ನು ಇತರರು ಮುಟ್ಟದಂತೆ ನೋಡಿಕೊಳ್ಳಿ.
ಹಾನಿಗೊಳಗಾದ ರುದ್ರಾಕ್ಷಿ ಮಣಿಗಳನ್ನು ಧರಿಸಬೇಡಿ
ರುದ್ರಾಕ್ಷಿ ಮಣಿಗಳು ಯಾವುದೇ ರೀತಿಯಲ್ಲಿ ಹಾನಿಗೊಳಗಾಗಿದ್ದರೆ ಅವುಗಳನ್ನು ಧರಿಸಬಾರದು. ಈ ರೀತಿ ಆದಲ್ಲಿ ಅವುಗಳನ್ನು ನಿಷ್ಪ್ರಯೋಜಕವೆಂದು ಪರಿಗಣಿಸಬೇಕು,(ಏಜೆನ್ಸೀಸ್).