More

    Success Story | ಸ್ಪರ್ಧಾತ್ಮಕ ಪರೀಕ್ಷೆಗೆ ಪಯತ್ನ ಪಡುವ ಮುಂಚೆಯೇ ಹೆದರಬೇಡಿ…

    ಮೊದಲಿಗೆ ಹೋಲಿಸಿದರೆ ಕೆಲವು ವರ್ಷಗಳಿಂದ ಯುಪಿಎಸ್​ಸಿ ಪರೀಕ್ಷೆಯ ಬಗ್ಗೆ ಒಂದು ರೀತಿ ಜಾಗೃತಿ ಬಂದಿದೆ. ನಾವು ಓದವ ಸಮಯದಲ್ಲಿ ದೊಡ್ಡವರು ಇದೆಲ್ಲಾ ನಮ್ಮ ಕೈಯ್ಯಲ್ಲಿ ಆಗುವಂತದ್ದಲ್ಲ, ಯುಪಿ, ಬಿಹಾರ್​ನವರಿಗೆ ಮಾತ್ರ ಸಿಮೀತವೆಂದು ಪರೀಕ್ಷೆಯ ಬಗ್ಗೆ ನಿರುತ್ಸಾಹ ಬರುವಂತೆ ಮಾಡುತ್ತಿದ್ದರು. ಏಕೆಂದರೆ ಅವರು ಇದರಲ್ಲಿ ವಿಲವಾಗಿದ್ದರು. ಆದರೆ ಕ್ರಮೇಣ ಯುಪಿಎಸ್​ಸಿಗೆ ಆಯ್ಕೆಯಾಗುವವರ ಸಂಖ್ಯೆ ಹೆಚ್ಚಾಯ್ತು. ಅಲ್ಲಿಂದ ಕನ್ನಡಿಗರಿಗೂ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಬಂತು ಎಂದು ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಐಎಎಸ್​ ಅಧಿಕಾರಿ ತೇಜಸ್ವಿ ನಾಯಕ್​.

    | ಅಶ್ವಿನಿ ಎಚ್​.ಆರ್​.

    ಐಎಎಸ್​ ಆಗಲು ಸಹಕಾರಿಯಾಯ್ತು ರಸಪ್ರಶ್ನೆ

    “ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ತಂದೆ ಕರ್ನಾಟಕ ಮೀಸಲು ಪಡೆಯಲ್ಲಿ ಆಫೀಸರ್​ ಆಗಿದ್ದರಿಂದ ಕರ್ನಾಟಕದಾದ್ಯಂತ ವಿದ್ಯಾಭ್ಯಾಸ ಮಾಡಬೇಕಾಯಿತು. ಗುಲ್ಬರ್ಗದಲ್ಲಿ ಹೈಸ್ಕೂಲ್​, ಶಿರಸಿಯಲ್ಲಿ ಪಿಯುಸಿ, ಬೆಳಗಾವಿಯಲ್ಲಿ ಪದವಿ ವ್ಯಾಸಂಗ ಮಾಡಿದೆ. ಬಿಡಿಎಸ್​ ವ್ಯಾಸಂಗ ಮಾಡಿದ ನಂತರ ಇದೇ ಸಮಯದಲ್ಲಿ ಸಿವಿಲ್​ ಸರ್ವೀಸ್​ ಕಡೆಗೆ ಒಲವು ಮೂಡಿತು. ಆಗೆಲ್ಲಾ ನಮಗೆ ಈ ಬಗ್ಗೆ ಗೈಡ್​ ಮಾಡುವವರು ಇರಲಿಲ್ಲ. ಚಿಕ್ಕಂದಿನಿಂದಲೂ ರಸಪ್ರಶ್ನೆಗಳಿಗೆಲ್ಲಾ ಚೆನ್ನಾಗಿ ಉತ್ತರಿಸುತ್ತಿದ್ದೆ. ಇದನ್ನೆಲ್ಲಾ ಗಮನಿಸಿದ ಕೆಲವರು ಯುಪಿಎಸ್​ಸಿ ಪರೀಕ್ಷೆ ಬರೆಯಲು ಹೇಳಿದರು. ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ತಂದೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಅದರಲ್ಲಿ ಕೆಲವೆಡೆ ಯುಪಿಎಸ್​ಸಿಗೆ ಸಂಬಂಧಿಸಿದ ಪ್ರಶ್ನೆಗಳು ಎಂದು ಬರೆಯಲಾಗಿತ್ತು. ಈ ರೀತಿಯಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಎಲ್ಲೋ ಒಂದು ಕಡೆ ಲಿಂಕ್​ ಆಗಿತ್ತು’.

    ಇದನ್ನೂ ಓದಿ: SUCCESS STORY | ಮೊದಲ ಪ್ರಯತ್ನದಲ್ಲೇ ಯಶಸ್ಸು; ತಂದೆಯ ಕೆಲಸದ ಸ್ಫೂರ್ತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ರು ಈ ಅಧಿಕಾರಿ…

    ಯುಪಿಎಸ್​ಸಿ ಪರೀಕ್ಷೆ ನನ್ನ ಗುರಿ

    “ಡಿಗ್ರಿ ಮುಗಿಸುವ ಹೊತ್ತಿಗೆ ಎಲ್ಲ ಮಧ್ಯಮ ವರ್ಗ ಕುಟುಂಬದವರು ಯೋಚನೆ ಮಾಡುವ ಹಾಗೆ ಸಾಧನೆಗೆ ಒಂದು ದಾರಿ ಬೇಕಾಗಿರುತ್ತದೆ. ಬಿಡಿಎಸ್​ ಮುಗಿಸಿದ್ದರೂ, ಆ ನಂತರ ಸ್ನಾತಕೋತ್ತರ ಪದವಿ ಮಾಡಬೇಕೋ ಬೇಡವೋ ಎಂಬ ಅನುಮಾನವಿತ್ತು. ಆಗ ನಾನು ಯುಪಿಎಸ್​ಸಿ ಮಾಡುವ ನಿರ್ಧಾರಕ್ಕೆ ಬಂದೆ. ಬರೆದರೆ ಯುಪಿಎಸ್​ಸಿ ಪರೀಕ್ಷೆ ಬರೆಯಬೇಕೆಂಬುದು ನನ್ನ ಗುರಿಯಾಗಿತ್ತು. ಹಾಗಾಗಿ ನಾನು ಬೇರೆ ಪರೀಕ್ಷೆ ಬರೆಯುವ ಬಗ್ಗೆ ಯೋಚನೆಯೂ ಮಾಡಲಿಲ್ಲ. ಎರಡು ದೋಣಿ ಮೇಲೆ ನಡೆಯಬಾರದು ಎಂಬುದು ನನ್ನ ಅನಿಸಿಕೆ. ಒಮ್ಮೆ ನೋಡೋಣವೆಂದು ಮೊದಲ ಬಾರಿಗೆ ಯುಪಿಎಸ್​ಸಿ ಪರೀಕ್ಷೆ ಬರೆದೆ. ಆಗ ನನಗನಿಸಿದ್ದು ಸಿದ್ಧತೆ ಎಲ್ಲಿ ನಡೆಸಬೇಕೋ, ಅಲ್ಲಿಯೇ ನಡೆಸಬೇಕು. ಎಲ್ಲಿ ಬೆಸ್ಟ್​ ಸ್ಪರ್ಧೆ ಇದೆಯೋ ಅಲ್ಲಿಯೇ ಹೋಗಿ ಮಾಡೋಣವೆಂದು ಆಲೋಚಿಸಿದೆ. ಹಾಗಾಗಿ ನಾನು ದೆಹಲಿಗೆ ಹೋದೆ.

    ದೆಹಲಿಯಲ್ಲಿ ಸಿದ್ಧತೆ ನಡೆಸಿದೆ. ತಾಂತ್ರಿಕವಾಗಿ ನನ್ನದು ಎರಡನೇ ಪ್ರಯತ್ನವೆನ್ನಬಹುದು. 132ನೇ ರ್ಯಾಂಕ್​. ಐಎಎಸ್​ ಹಂಚಿಕೆಯಾಗುವುದು ಸ್ವಲ್ಪ ಸಮಯವಾಗುತ್ತದೆ. ಹಾಗಾಗಿ ನಾನು ರ್ಯಾಂಕ್​ ಬಂದ ಮೇಲೂ ಮತ್ತೆ ಪರೀಕ್ಷೆ ಬರೆದೆ. ಪರೀಕ್ಷೆ ಬರೆದು ಪ್ರಿಲಿಮ್ಸ್​ ರಿಸಲ್ಟ್​ ಬರುವ ವೇಳೆಯೇ ಐಎಎಸ್​ ಹುದ್ದೆಗೆ ಹಂಚಿಕೆಯಾಯಿತು. ಹಾಗಾಗಿ ನಾನು ಮೂರನೇ ಬಾರಿ ಪರೀಕ್ಷೆ ಬರೆಯುವ ಯೋಚನೆ ನಿಲ್ಲಿಸಿದೆ. ಮಧ್ಯಪ್ರದೇಶದಲ್ಲಿ ಕೆಲಸ ಮಾಡಿದೆ. ಇಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದೆ. ಈ ಕ್ಷೇತ್ರಕ್ಕೆ ಬಂದು 14 ವರ್ಷವಾಯಿತು’.

    ಇದನ್ನೂ ಓದಿ: SUCCESS STORY | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!

    ಐಎಎಸ್​ ಅಧಿಕಾರಿಯಾಗುವ ಮುನ್ನ

    1. ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಲು ತಯಾರಿರಬೇಕು.
    2. ಯುಪಿಎಸ್​ಸಿ ಬರೆದ ನಂತರ ಕರ್ನಾಟಕದಲ್ಲಿ ಪೋಸ್ಟಿಂಗ್​ ಬೇಕೆಂದರೆ ಆಗುವುದಿಲ್ಲ.
    3. ಯಾವುದೇ ವಿಭಾಗದಲ್ಲಿ ಕೆಲಸ ಮಾಡಲು ತಯಾರಿರಬೇಕು.
    4. ಎಲ್ಲಿಯಾದರೂ ಕೊಟ್ಟ ಕೆಲಸ ಮಾಡುತ್ತೇವೆಂಬ ಭಾವವಿದ್ದರೆ ಹೆದರಿಕೆ ಇರುವುದಿಲ್ಲ.
    5. ಮೊದಲೇ ತಲೆಯಲ್ಲಿ ಆಯ್ಕೆಗಳಿಟ್ಟುಕೊಂಡರೆ ಒತ್ತಡ ಸೃಷ್ಟಿಯಾಗುತ್ತದೆ.
    6. ಹೆದರದೆ ಚಟಟ್ಟಟಚ್ಚಜ ಮಾಡುವ ಗುಣವಿರಬೇಕು.
    7. ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವ ಮನಸ್ಥಿತಿ ಇರಬೇಕು.
    8. ಪಯತ್ನಪಡುವ ಮುಂಚೆಯೇ ಹೆದರಬಾರದು.

    ತ್ಯಾಗ ಮಾಡದೆ ಏನೂ ಸಿಗುವುದಿಲ್ಲ.

    ಒಂದೇ ವರ್ಷಕ್ಕೆ ಆಗುವುದಿಲ್ಲ, 2&3 ವರ್ಷದ ಪ್ಲಾನ್​ ಬೇಕಾಗುತ್ತದೆ. ಒಂದು ಸಾರಿ ಪರೀಕ್ಷೆ ಬರೆದೂ ಸುಮ್ಮನಿರದೆ, ನಿರಂತರವಾಗಿ ಪ್ರಯತ್ನಿಸಿ. ತುಂಬಾ ಶಿಸ್ತು ಬೇಕಾಗುತ್ತದೆ. ಆರೋಗ್ಯ, ನಿದ್ದೆ ಎಲ್ಲದರ ಕಡೆ ಗಮನವಿರಬೇಕು.

    ಬೇರೆಯವರನ್ನು ನೋಡಿ ಹೆದರಬೇಡಿ

    “ಬೇರೆಯವರನ್ನು ಪರೀಕ್ಷೆಗೆ ತಯಾರಾಗುವುದು ನೋಡಿ ಹೆದರಬೇಡಿ. ನಾನು ಕೂಡ ದೆಹಲಿಯಲ್ಲಿದ್ದಾಗ ಘಟಾನುಟಿಗಳು ಉತ್ತರಿಸುವುದನ್ನು ನೋಡಿ ಹೆದರುತ್ತಿದ್ದೆ. ಆದರೆ ಒಬ್ಬರೂ ಕೂಡ ಆಯ್ಕೆಯಾಗುವುದನ್ನು ನಾನು ನೋಡಲಿಲ್ಲ. ಪರೀಕ್ಷೆಯೇ ಬೇರೆ, ತಯಾರಿಯೇ ಬೇರೆ. ಆದ್ದರಿಂದ ನಮ್ಮ ಸ್ಪರ್ಧೆ ನಮ್ಮ ಜತೆಯಲ್ಲಿರಬೇಕು. ಫೋಕಸ್​ ಕೂಡ ಮುಖ್ಯವಾಗುತ್ತದೆ. ಅದು ನಮ್ಮನ್ನು ಹೆಚ್ಚು ಸ್ಟ್ರಾಂಗ್​ ಮಾಡುತ್ತದೆ. ಇತ್ತೀಚೆಗೆ ಆನ್​ಲೈನ್​ ಮೂಲಕ ತಯಾರಿ ನಡೆಸುವವರ ಸಂಖ್ಯೆ ಹೆಚ್ಚಿದೆ. ಆದರೆ ನಮ್ಮ ಸಮಯದಲ್ಲಿ ನಾವು ಅದರಿಂದ ದೂರವಿರುತ್ತಿದ್ದೆವು. ಒಂದು ಸಾರಿ ಆನ್​ಲೈನ್​ನಲ್ಲಿ ನುಗ್ಗಿದ್ದರೆ ನಾವೆಲ್ಲಿ ಮುಟ್ಟುತ್ತೇವೆ ಎಂಬ ಅಂದಾಜು ಇರುತ್ತಿರಲಿಲ್ಲ. ಪುಸ್ತಕಗಳಲ್ಲಿ ಒಂದು ಸೀಮೆಯಿದೆ’.

    ಇದನ್ನೂ ಓದಿ: SUCCESS STORY: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?

    ಲಿಖಿತ ಪರೀಕ್ಷೆ ಬಹಳ ಮುಖ್ಯ

    ನಾವು ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಎರಡು ದಿನಪತ್ರಿಕೆಗಳನ್ನು ಓದುತ್ತಿದ್ದೆವು. ಅದನ್ನೇ ನೋಟ್ಸ್​ ಮಾಡಿಕೊಳ್ಳುತ್ತಿದ್ದೆವು. ಇದು ಸಂದರ್ಶನದವರೆಗೂ ಕೆಲಸಕ್ಕೆ ಬರುತ್ತದೆ. ವಿಷಯವಾರು ವಿಭಾಗ ಮಾಡಿ ಬರೆದಿಟ್ಟುಕೊಳ್ಳುತ್ತಿದ್ದೆವು. ಈ ರೀತಿ ಮಾಡುವುದರಿಂದ ಪ್ರಚಲಿತ ಘಟನೆಗಳ ಬಗ್ಗೆ ಕೂಡ ಐಡಿಯಾ ಬರುತ್ತದೆ. ಮೊದಲಿನಿಂದ ಬರವಣಿಗೆಯ ಅಭ್ಯಾಸವಿರಬೇಕು. ಪರೀಕ್ಷೆಯ ದಿನವೇ ಅಲ್ಲಿಗೆ ಹೋಗಿ ಬರೆಯುತ್ತೇವೆ ಎನ್ನುವುದು ಮೂರ್ಖತನವಾಗುತ್ತದೆ. ಇದರಿಂದ ನಮ್ಮ ತಲೆ ಚೆನ್ನಾಗಿ ಓಡುತ್ತದೆ. ಲಿಖಿತ ಪರೀಕ್ಷೆ ಬಹಳ ಮುಖ್ಯ ಎಂಬುದು ಗಮನದಲ್ಲಿರಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts