More

    Success Story | ಇವರು 100ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದಾರೆ; ಅಂತಿಮವಾಗಿ ಆಯ್ಕೆ ಆಗಿದ್ದು ಕರ್ನಾಟಕ ಫಾರೆಸ್ಟ್​ ಸರ್ವಿಸ್​ಗೆ!

    ಅಶ್ವಿನಿ ಎಚ್​.ಆರ್​.

    ನಾವು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಬೇಕು, ಪದೆಪದೇ ಪರೀಕ್ಷೆಗೆ ಕೂರುವುದರಿಂದ ಕ್ರಮೇಣ ಆಸಕ್ತಿ ಕಡಿಮೆಯಾಗುತ್ತದೆ ಎನ್ನುವವರ ಮಧ್ಯೆ ನೂರಕ್ಕೂ ಹೆಚ್ಚು ಸರ್ಕಾರಿ ಪರೀಕ್ಷೆಗಳನ್ನು ಬರೆದು, ಕ್ಲಿಯರ್​ ಆಗದಿದ್ದಾಗ ಸ್ವಲ್ಪವೂ ಬೇಸರಿಸಿಕೊಳ್ಳದೆ, ಅಂತಿಮವಾಗಿ ಬಹಳ ಸುಲಭವಾಗಿ ಕರ್ನಾಟಕ ಫಾರೆಸ್ಟ್​ ಸರ್ವಿಸ್​ನಲ್ಲಿ ಆಯ್ಕೆಯಾದವರು ಸರೀನಾ ಸಿಕ್ಕಲಿಗರ್​. ಪ್ರಸ್ತುತ ಐಎ​ಎಸ್​ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸರೀನಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆಂಬ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ.

    ಅರಣ್ಯದ ಮೇಲಿದ್ದ ಒಲವೇ ಕಾರಣ

    “ತುಮಕೂರಿನಲ್ಲಿ ಪದವಿ, ಬೆಂಗಳೂರು ವಿವಿಯಲ್ಲಿ ಎಂಎಸ್​ಸಿ, ಮೈಸೂರು ದೂರ ಶಿಕ್ಷಣ ವಿಶ್ವವಿದ್ಯಾಲಯದಲ್ಲಿ ಎಂಎಡ್​ ಮುಗಿಸಿದೆ. ಆ ನಂತರ 2009ರಲ್ಲಿ ಪರೀಕ್ಷೆ ಬರೆದು ಅರಣ್ಯ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದೆ. ವೈಲ್ಡ್​ಲೈಫ್ ಟ್ರೇನಿಂಗ್​ ಡೆಹ್ರಾಡೂನ್​ ಸೇರಿದಂತೆ ಬೇರೆ ಬೇರೆ ಕಡೆಯಾಗಿದೆ. ಅರಣ್ಯ, ಪ್ರಕೃತಿ ಬಗ್ಗೆ ಮೊದಲಿನಿಂದಲೂ ಒಲವಿತ್ತು. ಓದಿರುವುದು ಕೂಡ ವಿಜ್ಞಾನ ವಿಷಯ. ವಿಜ್ಞಾನದಲ್ಲಿ ಐಚ್ಛಿಕವಾಗಿ ಸಸ್ಯಶಾಸ್ತ್ರ ಆಯ್ಕೆ ಮಾಡಿಕೊಂಡಿದ್ದರಿಂದ ಸ್ವಯಂಪ್ರೇರಿತವಾಗಿ ಅರಣ್ಯ, ಪ್ರಾಣಿಗಳ ಬಗ್ಗೆ ಪ್ರೀತಿ ಶುರುವಾಯಿತು’.

    ನನ್ನ ತಂದೆಯೇ ಸ್ಫೂರ್ತಿ

    “ಈ ಹುದ್ದೆಗೆ ಆಯ್ಕೆಯಾಗುವ ಮುನ್ನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೆ. ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಕೆಲಸ ಮಾಡುತ್ತಿದ್ದೆ. ನನಗೆ ನಮ್ಮ ತಂದೆಯೇ ಸ್ಫೂರ್ತಿ. ಅವರಿಗೆ ಹೆಣ್ಣು ಮಕ್ಕಳು ಮುಂದೆ ಬರಬೇಕು, ಓದಬೇಕು ಎನ್ನುವ ಆಸೆಯಿತ್ತು. ಇದುವರೆಗೂ ನಾನು ಮಿಲಿಟರಿ, ಪೊಲೀಸ್​ ಹೀಗೆ ಅನೇಕ ಇಲಾಖೆಗಳ ಪರೀಕ್ಷೆ ಬರೆದಿದ್ದೇನೆ. ಆದರೆ ಕ್ಲಿಯರ್​ ಆಗಿರಲಿಲ್ಲ. ಫಾರೆಸ್ಟ್​ ಸರ್ವೀಸ್​ ಎಕ್ಸಾಂ ಬರೆದ ತಕ್ಷಣವೇ ಕ್ಲಿಯರ್​ ಆಯಿತು. ಈ ಪರೀಕ್ಷೆ ಬರೆಯುವ ವೇಳೆಗೆ ನನಗೆ ಸಿದ್ಧತೆಯೇ ಬೇಕಿರಲಿಲ್ಲ. ಹಾಗಾಗಿ ಸುಲಭವಾಗಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದೆ. ಆಗ ನಾನು ಟಾಪರ್​. ಹಾಗೆ ನೋಡುವುದಾದರೆ ಆ ಅವಧಿಯಲ್ಲಿ ಕೆಪಿಎಸ್​ಸಿ, ಯುಪಿಎಸ್​ಸಿಯಿಂದ ವಿವಿಧ ಪರೀಕ್ಷೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ನಾನು ಇದೇ ಹುದ್ದೆ ಬೇಕೆಂದು ಪರೀಕ್ಷೆ ಬರೆಯಲಿಲ್ಲ. ಒಟ್ಟಿನಲ್ಲಿ ಎಲ್ಲ ಪರೀಕ್ಷೆಗಳನ್ನು ಕೂಡ ಬರೆಯುತ್ತಿದ್ದೆ. ಪರೀಕ್ಷೆ ಬರೆದು, ಬರೆದು ರೂಢಿಯಾಯಿತು. ಆಗ ಯಾವ ತರಹದ ಪ್ರಶ್ನೆ ಕೇಳುತ್ತಾರೆ?, ಸಮಯ ನಿರ್ವಹಣೆ ಮುಂತಾದವುಗಳ ಜ್ಞಾನ ಬೆಳೆಯುತ್ತಾ ಹೋಯಿತು’.

    ಇದನ್ನೂ ಓದಿ: Success Story | ಮೊದಲ ಪ್ರಯತ್ನದಲ್ಲೇ ಯಶಸ್ಸು; ತಂದೆಯ ಕೆಲಸದ ಸ್ಫೂರ್ತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ರು ಈ ಅಧಿಕಾರಿ…

    ಪರೀಕ್ಷೆ ಬರೆದಂತೆ ಅಭ್ಯಾಸ

    “ನಾನು ಅರಣ್ಯ ಇಲಾಖೆಗೆ ಸಂಬಂಧಿಸಿದ ಪರೀಕ್ಷೆ ಬರೆದಿದ್ದರಿಂದ ಪ್ರಾಣಿಗಳು ಮತ್ತು ಅದರ ವರ್ತನೆ, ಕಾಡು ಎಷ್ಟಿದೆ?, ಅದನ್ನು ಹೇಗೆ ಸಂರಕ್ಷಣೆ ಮಾಡಬೇಕು?, ಯಾವ ರೀತಿ ಅಭಿವೃದ್ಧಿಪಡಿಸುತ್ತೀರಿ ಸರ್ಕಾರದಲ್ಲಿ ಅರಣ್ಯ ಸಂರಕ್ಷಣೆಗೋಸ್ಕರ ಯಾವ ಯಾವ ಸ್ಕೀಮ್​ ನಡೆಯುತ್ತಿದೆ? ಎಂಬ ಪ್ರಶ್ನೆ ಕೇಳಲಾಗಿತ್ತು. ಯಾವುದೇ ಪರೀಕ್ಷೆ ಎದುರಿಸಬೇಕೆಂದರೆ ಕೋಚಿಂಗ್​ ಕಡ್ಡಾಯವೇನಲ್ಲ. ಇತ್ತೀಚಿನ ದಿನಗಳಲ್ಲಿ ಕೋಚಿಂಗ್​ ಸೆಂಟರ್​ಗಳು ಆರಂಭವಾಗಿವೆ. ನಾನು ಕೋಚಿಂಗ್​ ಹೋಗಲಿಲ್ಲ, ಈ ಮೊದಲೇ ಹೇಳಿದ ಹಾಗೆ ನನಗೆ ಪರೀಕ್ಷೆ ಬರೆದು ಬರೆದು ಅಭ್ಯಾಸವಾಯಿತು. ನಾವು ರ್ನಿಧಿಷ್ಟವಾಗಿ ಇದೇ ಪರೀಕ್ಷೆ ಬರೆಯಬೇಕು ಎಂದು ಯೋಜಿಸುವುದಕ್ಕಿಂತ ಎಲ್ಲ ಪರೀಕ್ಷೆಗಳನ್ನು ಬರೆಯುತ್ತಾ ಹೋಗಬೇಕು. ಆಗ ಬರವಣಿಗೆ, ಸಮಯ ನಿರ್ವಹಣೆ ಹೀಗೆ ಎಲ್ಲದರ ಬಗ್ಗೆಯೂ ಜ್ಞಾನ ಬೆಳೆಯುತ್ತಾ ಹೋಗುತ್ತದೆ’.

    1 ಗಂಟೆಯಲ್ಲಿ ಬರೆಯುವ ಸಾಮರ್ಥ್ಯ

    “ಸಾಮಾನ್ಯವಾಗಿ 100 ಅಂಕಗಳಿಗೆ 3 ಗಂಟೆ ಪರೀಕ್ಷೆ ಬರೆಯುತ್ತೇವೆ. ಮುಖ್ಯ ಪರೀಕ್ಷೆಯಲ್ಲಿ ಒಂದು ಗಂಟೆಗೆ 100 ಅಂಕಗಳ ಪ್ರಶ್ನೆ ಕೇಳಲಾಗುತ್ತದೆ. ಆದ್ದರಿಂದ ಒಂದು ಗಂಟೆಗೆ ಬರೆಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಹಾಗಾಗಿ ಸಮಯ ಕೌಶಲ, ವ್ಯಾಕರಣ, ಕಟೆಂಟ್​ ಬಹಳ ಮುಖ್ಯ. 3 ಗಂಟೆಗೆ ಬರೆಯುವ ಅಭ್ಯಾಸವನ್ನು ಬೆಳೆಸಿಕೊಂಡಂತೆ ಸಮಯ ಸಾಕಾಗುವುದಿಲ್ಲ. ಬಹಳಷ್ಟು ಸಾರಿ ಓದಿರುತ್ತೇವೆ. ಬರೆಯುವ ಜ್ಞಾನ ಇರುವುದಿಲ್ಲ, ಸಮಯ ಸಾಕಾಗುವುದಿಲ್ಲ. ಹಾಗಾಗಬಾರದು. ನಾವು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು. ಸಮಯ ನಿರ್ವಹಣೆ ಕಲಿಯಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಅಭ್ಯಾಸವಿಟ್ಟುಕೊಂಡರೆ ಇದೆಲ್ಲ ಸಾಧ್ಯ. ಡಿಗ್ರಿಯಾದ ತಕ್ಷಣ ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಪದವಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಬರೆಯುತ್ತಾ ಹೋಗಬೇಕು. ಕೆಲವು ದ್ವಿತೀಯ ಪಿಯುಸಿ ಆಧಾರದ ಮೇಲಿರುತ್ತೆ. ನಾನು ಕೂಡ ಅಂತಹವನ್ನು ಬರೆದಿದ್ದೇನೆ’.

    ಇದನ್ನೂ ಓದಿ: Success Story | ಯುಪಿಎಸ್​ಸಿ ಪಾಸ್ ಆಗಲು ತರಬೇತಿ ಮಹತ್ವದ್ದಲ್ಲ! ಸ್ವಯಂ ಅಧ್ಯಯನವೇ ಅಂತಿಮ

    ಕುಟುಂಬದ ಬೆಂಬಲವೂ ಬೇಕು

    “ಕೆಲವರು ಕೆಲಸ ಮಾಡಿಕೊಂಡು ಪರೀಕ್ಷೆ ಬರೆಯುತ್ತಾರೆ. ಬರೆಯಬಹುದು. ಆದರೆ ಅದಕ್ಕೆ ಹೆಚ್ಚು ಸಮಯ, ಶ್ರಮ ಬೇಕಾಗುತ್ತದೆ. ಯಾರೇ ಆಗಲಿ ಪರೀಕ್ಷೆ, ಓದು ಎರಡನ್ನೂ ಎಂಜಾಯ್​ ಮಾಡಿದಾಗ ಯಶಸ್ಸು ಸಿಗುವುದು. ಒತ್ತಡ ಮಾಡಿಕೊಂಡರೆ ಕಷ್ಟವಾಗುತ್ತದೆ. ಈಗಲೂ ನನಗೆ ಯಾವುದೇ ಪ್ರಶ್ನೆ ಪತ್ರಿಕೆ ನೋಡಿದರೆ ಖಷಿಯಾಗುತ್ತದೆ. ಅದಕ್ಕೆ ಉತ್ತರಿಸಬೇಕು ಅನಿಸುತ್ತದೆ. ನಾನಂತೂ ಪರೀಕ್ಷೆ ಮುಗಿಯುವುದಕ್ಕೆ ಅರ್ಧ ಗಂಟೆ ಇರುವಾಗಲೇ ಮುಗಿಸಿ ಕೂರುತ್ತಿದ್ದೆ. ನೆನಪಿಡಿ ಒತ್ತಡವಿದ್ದರೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಜತೆಗೆ ಕುಟುಂಬದ ಬೆಂಬಲವೂ ಬೇಕು. ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಮೈಂಡ್​ ವೀಕ್​ ಆಗಬಹುದು, ಬೇರೆಡೆ ಗಮನ ಹೋಗಬಹುದು. ಟಿವಿ ನೋಡಬೇಕು, ಹೊರಗಡೆ ಹೋಗಬೇಕು, ಸಿನಿಮಾ ನೋಡಬೇಕು ಅನಿಸುತ್ತದೆ. ನಾವುಗಳು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಓದಬೇಕೆಂದರೆ ಕುಟುಂಬದ ಪ್ರೇರಣೆ ಬಹಳ ಮುಖ್ಯವಾಗುತ್ತದೆ. ಕುಟುಂಬದವರು ಒತ್ತಡ ಹಾಕದೆ, ಪ್ರೇರಣೆಯಾದ್ರೆ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ. ಈಗಂತೂ ಇಂಟರ್​ನೆಟ್​ ಉಪಯೋಗಿಸಿಕೊಂಡು ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಗೂಗಲ್​ನಲ್ಲಿ ಫ್ರೀ ಕೋಚಿಂಗ್​ ತರಗತಿಗಳು ಕೂಡ ಇದ್ದು, ಉಪಯೋಗಿಸಿಕೊಳ್ಳಬಹುದು. ಎಲ್ಲಿಗೆ ಹೋದರೂ, ಯಾರೆ ಹೇಳಿಕೊಟ್ಟರೂ ಕೊನೆಗೆ ಅದನ್ನು ಓದುವವರು ನಾವೇ ಅಲ್ಲವೇ’.

    ಇದನ್ನೂ ಓದಿ: Success Story | ಐಎಎಸ್ ಆಗಲು ‘ಪೃಥ್ವಿ’ ಸಿನಿಮಾ ಪ್ರೇರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts