More

    Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!

    ಉನ್ನತ ಹುದ್ದೆಗಳು ಸುಲಭವಾಗಿ ಸಿಗುವಂತದ್ದಲ್ಲ. ಒಂದೊಂದೇ ಹಂತವನ್ನು ಪೂರೈಸುತ್ತಾ ಗುರಿ ತಲುಪಬೇಕು. ಈ ಹಂತದಲ್ಲಿ ಅನೇಕ ಏರಿಳಿತಗಳು ಎದುರಾಗಬಹುದು. ಅವುಗಳನ್ನೆಲ್ಲಾ ದಾಟಿ ಯಶಸ್ಸಿನ ಮೆಟ್ಟಿಲೇರುವುದೇ ಸಾಧನೆ ಎಂದು ಮಾತು ಆರಂಭಿಸಿದ ಐಎಎಸ್​ ಅಧಿಕಾರಿ ದಿವ್ಯಪ್ರಭು ಜಿ.ಆರ್​.ಜೆ ಯಶಸ್ಸಿನ ಸೂತ್ರಗಳನ್ನು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದಲ್ಲಿ ಹಂಚಿಕೊಂಡಿದ್ದಾರೆ.

    ಶ್ವೇತಾ ನಾಯ್ಕ್​, ಬೆಂಗಳೂರು

    ತಂದೆ ಮದ್ರಾಸ್​ ಹೈಕೋರ್ಟ್​ನಲ್ಲಿ ಅಡ್ವೊಕೇಟ್​ ಆಗಿದ್ದರು. ತಾಯಿಯೂ ಸರ್ಕಾರಿ ಉದ್ಯೋಗಿ. ಇದರಿಂದ ನನಗೆ ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ನಾಗರಿಕ ಸೇವೆ ಬಗ್ಗೆ ಒಲವು ಮೂಡಿತ್ತು. ಗುಜರಾತ್​ ನನ್ನ ಮೂಲ. ಆದರೆ ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಣ ತಮಿಳುನಾಡಿನಲ್ಲೇ ಆಯಿತು. ಪಿಯಸಿ ಮುಗಿಸಿ ತಮಿಳುನಾಡು ಅಗ್ರಿಕಲ್ಚರ್​ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದೆ. ಪದವಿ ಮುಗಿಯುತ್ತಿದ್ದಂತೆ ಮೆಡಿಕಲ್​ ಸೀಟು ಸಿಕ್ಕರೂ ಐಎಎಸ್​ ಕನಸು ಇದ್ದಿದ್ದರಿಂದ ಅದನ್ನು ಪಕ್ಕಕ್ಕಿಟ್ಟು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದೆ.

    ನಿಲ್ಲದ ಓದು, ನಿರಂತರ ಪರಿಶ್ರಮ

    6ನೇ ತರಗತಿಯಿಂದಲೇ ಐಎಎಸ್​ ಪರೀಕ್ಷೆ ಎದುರಿಸಿ ಸಿವಿಲ್​ ಸರ್ವಿಸ್​ ಸೇರಬೇಕು ಎನ್ನುವ ಆಸೆ ಇದ್ದಿದ್ದರಿಂದ ಓದು ಕಷ್ಟ ಎನಿಸಲಿಲ್ಲ. ಸ್ಕೂಲಿನಲ್ಲಿ ಓದುತ್ತಿದ್ದಾಗ ಶಾಲೆಯಲ್ಲಿ ಏನಾದರು ಪ್ರಶಸ್ತಿ ಗೆದ್ದರೆ ಉನ್ನತ ಹುದ್ದೆಯಲ್ಲಿದ್ದವರು ಪ್ರಶಸ್ತಿ ಕೊಡಲು ಬರುತ್ತಿದ್ದರು. ಅವರನ್ನು ನೋಡಿ ಮುಂದೊಂದು ದಿನ ನಾನೂ ಈ ಸ್ಥಾನ ಅಲಂಕರಿಸಬೇಕು ಎಂದು ನಿರ್ಧರಿಸಿದೆ. ಅಂದಿನಿಂದಲೇ ನನ್ನ ನಿರಂತರ ಓದು ಪ್ರಾರಂಭವಾಗಿತ್ತು. ಅವರು ಮಾತನಾಡುವಾಗ ನಾವು ಸರ್ಕಾರದೊಂದಿಗೆ ಕೈಜೋಡಿಸಿ ಎಷ್ಟೋ ವಿಷಯಗಳಲ್ಲಿ ಬದಲಾವಣೆ ತರಬಹುದು ಎನ್ನುತ್ತಿದ್ದರು. ಈ ಎಲ್ಲ ವಿಷಯಗಳನ್ನು ಕೇಳಿ ಪ್ರೇರಿತಳಾಗಿ ಓದಿನೆಡೆ ಇನ್ನಷ್ಟು ಆಸಕ್ತಿ ಬೆಳೆಸಿಕೊಂಡೆ.

    ಇದನ್ನೂ ಓದಿ: Success Story: ಕಾರ್ಪೊರೇಟ್​ ಕೆಲಸ ಬಿಟ್ಟು ಐಎಎಸ್ ಅಧಿಕಾರಿಯಾದ ಸಾಧಕ!

    ಪರೀಕ್ಷೆ ಬರೆದರೆ ಅಭ್ಯಾಸ

    ಪದವಿ ಮುಗಿಯುತ್ತಿದ್ದಂತೆ ಯಾವುದೇ ಹುದ್ದೆಗೆ ಸೇರದೆ ಬ್ಯಾಂಕಿಂಗ್​ ಪರೀೆಗಳನ್ನು ಎದುರಿಸುತ್ತಾ ಹೋದೆ. ಇದು ನನ್ನಲ್ಲಿನ ಆತ್ಮವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಮತ್ತು ಸ್ಪರ್ಧಾತ್ಮಕ ಪರೀೆ ಹೇಗೆ ಎದುರಿಸಬಹುದು ಎಂಬ ಕಲ್ಪನೆ ಬಂತು. ರಿಸಲ್ಟ್​ ಬಂದಾಗ ಸುಮಾರು 12 ಬ್ಯಾಂಕ್​ಗಳಿಗೆ ಆಯ್ಕೆ ಆಗಿದ್ದೆ. ಆದರೆ ಕೆಲಸಕ್ಕೆ ಹೋಗಲಿಲ್ಲ. ಈ ಮಧ್ಯೆ ಐಎಸ್​ಎಸ್​ ಪರೀೆ ಎದುರಿಸಿದೆ. ಅದರಲ್ಲೂ ಸೆಲೆಕ್ಟ್​ ಆದೆ. ಎರಡು ವರ್ಷ ಪ್ರೊಬೆಷನ್​ ಅವಧಿಯಲ್ಲಿ ಕೆಲಸ ಮಾಡಿ, ನಂತರ ಕರ್ನಾಟಕದವರನ್ನೇ ಮದುವೆಯಾಗಿ ಇಲ್ಲಿಗೆ ಟ್ರಾನ್ಸ್​ರ್​ ಪಡೆದು ಇಲ್ಲಿ ಎರಡು ವರ್ಷ ಕೆಲಸ ಮಾಡಿದೆ. 2013ರಲ್ಲಿ ಐಎಎಸ್​ ಎದುರಿಸಿ ತೇರ್ಗಡೆಯಾದೆ. ಮೊದಲ ಪ್ರಯತ್ನದಲ್ಲೇ ಯಶ ಸಿಕ್ಕಿತ್ತು.

    ಯೋಜನಾಬದ್ಧ ಓದು ಮುಖ್ಯ

    ಸ್ಪರ್ಧಾರ್ಥಿಗಳು 3,4 ವರ್ಷ ಓದಿದರೂ ಯಶಸ್ಸು ಸಿಗುತ್ತಿಲ್ಲ ಎಂಬ ಕೊರಗಿನಿಂದ ದೂರವಿರಬೇಕು. ಗ್ರಾಮೀಣರು ಎಂಬ ಕೀಳರಿಮೆ ತೆಗೆದು ಹಾಕಬೇಕು, ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ, ಬದ್ಧತೆಯಿಂದ ಯಶಸ್ಸು ಖಚಿತ. ದೊಡ್ಡ ಹುದ್ದೆಯ ಗುರಿಯೊಂದಿಗೆ ಬ್ಯಾಂಕಿಂಗ್​, ಪೊಲೀಸ್​, ಅಬಕಾರಿ, ಎಫ್​ಡಿಎ ಪರೀಕ್ಷೆಗಳನ್ನು ಎದುರಿಸಿ. ಉದ್ಯೋಗ ದೊರೆತರೆ ಸೇರಿಕೊಳ್ಳಿ. ನಂತರ ಉನ್ನತ ಹುದ್ದೆಯ ಗುರಿ ಸಾಕಾರಗೊಳಿಸಿಕೊಳ್ಳಬೇಕು. ಮೇಲಿಂದ ಮೇಲೆ ಸರ್ಕಾರಿ ನೇಮಕಾತಿಗಳು ನಡೆಯುತ್ತಿರುತ್ತವೆ. ಒಂದೇ ಬಾರಿ ಎಲ್ಲವನ್ನೂ ಓದಿ ಮುಗಿಸುತ್ತೇನೆ ಎಂಬ ನಿಲುವು ಬೇಡ. ನಾಗರಿಕ ಸೇವೆಯ ಕನಸು ಇದ್ದರೆ ಪ್ರಾರಂಭದಲ್ಲೇ ಇದಕ್ಕೆ ಸಿದ್ಧತೆ ನಡೆಸುತ್ತಾ ಬನ್ನಿ.

    ಕೆಲಸದೊಂದಿಗೇ ಓದು

    ಎಲ್ಲರೂ ಹೇಳುವ ಹಾಗೆ ನಾನು 8 ರಿಂದ 12 ಗಂಟೆ ಕಾಲ ಕೂತು ಓದುತ್ತಿರಲಿಲ್ಲ. ಕೆಲಸ ಮಾಡುತ್ತಲೇ ಉಳಿದ ಸಮಯವನ್ನು ಓದಿಗೆ ಮೀಸಲಿಡುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವವರು ಮೊದಲು ಪರೀಕ್ಷಾ ಭಯದಿಂದ ಮುಕ್ತರಾಗಬೇಕು. ನಮ್ಮ ಸುತ್ತಲಿನ ವಾತಾವರಣ, ನಾವು ಬೆಳೆದ ಪರಿಸರ, ಕೌಟುಂಬಿಕ ಹಿನ್ನೆಲೆಯೇ ನಾವೇನಾಗುತ್ತೇವೆ ಎಂಬುದನ್ನು ಕೆಲವೊಮ್ಮೆ ನಿರ್ಧರಿಸುತ್ತದೆ. ಓದು, ಜೀವನದ ಒಂದೊಂದು ಹಂತ ಪೂರೈಸಿದಾಗ ಅಂಥದ್ದೊಂದು ಹಂಬಲ ಗಟ್ಟಿಯಾಗುತ್ತಲೇ ಹೋಗುತ್ತದೆ. ನನಗೂ ಅದೇ ಆಗಿದ್ದು. ಪ್ರತಿ ಬಾರಿ ಪರೀಕ್ಷೆಗೆ ತಯಾರಿ ನಡೆಸುವಾಗ ನಿತ್ಯವೂ ಪತ್ರಿಕೆಗಳು, ಅಧ್ಯಯನ ಸಾಮಗ್ರಿ ಹಾಗೂ ಪೂರಕ ಪಠ್ಯಗಳನ್ನು ಓದುತ್ತಿದ್ದೆ. ಪರೀಕ್ಷೆಗೆ ಬೇಕಾಗುವ ಎಲ್ಲ ವಿಷಯ, ಜ್ಞಾನನವನ್ನು ಅರಿತುಕೊಂಡೆ.

    ಇದನ್ನೂ ಓದಿ: Success Story: ವೆಟರ್ನರಿ ವೈದ್ಯರಾಗಿದ್ದ ಡಾ.ರಾಮ್ ಪ್ರಸಾತ್ ಈಗ ಕರ್ನಾಟಕದಲ್ಲಿ ಐಎಎಸ್ ಆಫೀಸರ್!

    ಅಧ್ಯಯನ ಆಳವಾಗಿರಲಿ

    ಯುಪಿಎಸ್ಸಿಗೆ ತಯಾರಿ ನಡೆಸುವುದು ಒಂದೆರಡು ದಿನದ ಕೆಲಸವಲ್ಲ. ಎಲ್ಲ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು. ಎಷ್ಟು ತಿಳಿದುಕೊಂಡಿದ್ದೇವೆ ಎನ್ನುವುದಕ್ಕಿಂತ ಅದನ್ನು ಹೇಗೆ ಪ್ರಸ್ತುತ ಪಡಿಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ. ಉತ್ತರಗಳು ಯಾವಾಗಲೂ ವಿಶ್ಲೇಷಣಾತ್ಮಕವಾಗಿ ಇರಬೇಕು. ವಿಷಯದ ಬಗ್ಗೆ ಗೊತ್ತಿದ್ದರೂ ಅಲ್ಲಿ ಪ್ರಶ್ನೆ ಕೇಳಿರುವ ರೀತಿಯನ್ನು ಅರ್ಥ ಮಾಡಿಕೊಂಡು ಇರುವ ಸಮಯದೊಳಗೆ ಬೇಗೆ ಬರೆಯಬೇಕು ಎಂಬ ಜ್ಞಾನ ಅತ್ಯವಶ್ಯಕ.

    ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ

    ಈ ವಿಷಯ ಯಾಕೆ ಹೇಳುತ್ತಿದ್ದೇನೆ ಎಂದರೆ ಓದು ಆಳವಾಗಿದ್ದರೆ ಸಮಯ ಯಾವುದು ಎನ್ನುವುದು ಮುಖ್ಯವಲ್ಲ. ಕಲಿತದ್ದನ್ನು ಹೋಗಿ ಪ್ರಸ್ತುತಪಡಿಸಲು ಯಾವ ಸಮಯವಾದರೇನು? ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದೆ. ಮುಖ್ಯ ಪರೀಕ್ಷೆ ಎದುರಿಸಿದಾಗ ಬಾಣಂತಿ ನಾನು. ಅನೇಕರು ಟೀಕೆ ಮಾಡಿದ್ದೂ ಇದೆ, ಇನ್ನು ಹಲವರು ಹೊಗಳಿದ್ದೂ ಇದೆ. ಆದರೆ ಒಂದೇ ಪ್ರಯತ್ನದಲ್ಲಿ ತೇರ್ಗಡೆಯಾಗಿ ಅವರಿಗೆಲ್ಲ ಆ ಮೂಲಕ ಉತ್ತರ ನೀಡಿದ್ದೆ.

    ಇದನ್ನೂ ಓದಿ: Success Story | ಐಎಎಸ್ ಆಗಲು ‘ಪೃಥ್ವಿ’ ಸಿನಿಮಾ ಪ್ರೇರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts