ಸಿನಿಮಾ

ಬಡತನದಲ್ಲೇ ಓದಿ UPSC ಪರೀಕ್ಷೆ ಪಾಸ್; ಮಗ ಏನು ಓದಿದ್ದ ಎನ್ನುವುದೇ ಗೊತ್ತಿರಲಿಲ್ಲವೆಂದ ತಾಯಿ!

ಹುಬ್ಬಳ್ಳಿ: ಕೆಸ್​ಆರ್​ಟಿಸಿ ಬಸ್​ ಡ್ರೈವರ್​​ನ ಮಗ ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಗೇರಿ ಪಟ್ಟಣದ ಯುವಕ ಸಿದ್ದಲಿಂಗಪ್ಪ ಕೆ ಪೂಜಾರ್ 589 ರ್ಯಾಂಕ್ ಪಡೆದು ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿ ಶಿಕ್ಷಣ ಪೂರೈಸಿರುವ ಸಿದ್ದಲಿಂಗಪ್ಪ, ಬಡತನದಲ್ಲಿ ಓದಿ ದೇಶದ ಅತ್ಯುನ್ನತ ಪರೀಕ್ಷೆ ಪಾಸ್ ಮಾಡಿದ್ದಾರೆ. ಇದೀಗ ಇವರಿಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: SUCCESS STORY: ಕಾರ್ಪೊರೇಟ್​ ಕೆಲಸ ಬಿಟ್ಟು ಐಎಎಸ್ ಅಧಿಕಾರಿಯಾದ ಸಾಧಕ!

ಮಗನ ಸಾಧನೆಯೆ ಬಗ್ಗೆ ತಾಯಿ ಶಾಂತವ್ವ ಮಾತನಾಡಿ, ಮಗ ಏನು ಕಲಿತಿದ್ದಾ ಎನ್ನುವುದೇ ನನಗೆ ಗೊತ್ತಿಲ್ಲ. ಮಗ ಯುಪಿಎಸ್​ಸಿ ಪರೀಕ್ಷೆ ಎದುರಿಸಿದ್ದೂ ಗೊತ್ತಿರಲಿಲ್ಲ. ಇಷ್ಟು ಮುಂದೆ ಆತ ಬಂದು ನಮಗೆ ಹಾಗೂ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ. ಆತ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ ಎಂಬ ಭರವಸೆ ಇರಲಿಲ್ಲ. ನಮ್ಮಿಂದ ಮಗನಿಗೆ ಸಹಾಯ ಸಹಕಾರ‌ ಇರಲಿಲ್ಲ. ಹಣಕಾಸಿನ ಸೌಕರ್ಯ ಆತನೇ ಮಾಡಿಕೊಂಡು ಸಾಧನೆ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: SUCCESS STORY: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) 2022ನೇ ಸಾಲಿನ ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶವನ್ನು ಇಂದು ಬಿಡುಗಡೆಯಾಗಿದ್ದು, 933 ಮಂದಿ ಉತೀರ್ಣರಾಗಿದ್ದಾರೆ. ಇಶಿತಾ ಕಿಶೋರ್ ಮೊದಲ ಸ್ಥಾನ ಪಡೆದಿದ್ದು, ಗರಿಮಾ ಲೋಹಿಯಾ 2ನೇ ಸ್ಥಾನ ಹಾಗೂ ಉಮಾ ಹರತಿ 3ನೇ ಸ್ಥಾನ ಗಳಿಸಿದ್ದಾರೆ. ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

Latest Posts

ಲೈಫ್‌ಸ್ಟೈಲ್