

ಗಂಡನಿಗಾಗಿ ಇಬ್ಬರು ಹೆಂಡತಿಯರು ಜಗಳ: ಕೊನೆಗೆ 'ಈ' ಸೂತ್ರದ ಮೂಲಕ ಸಂಧಾನ ಯಶಸ್ವಿ..!
ಉಜ್ಜಯಿನಿ: ಪತಿ ಪತ್ನಿಯರ 15 ವರ್ಷದ ವಿವಾದವನ್ನು ಕೌನ್ಸೆಲಿಂಗ್ ಸೆಂಟರ್ ಬಗೆಹರಿಸಿದ ರೀತಿಗೆ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸುತ್ತಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಇದನ್ನೂ ಓದಿ: ಶಾಲಾ ಬಾಲಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಮಾನಸಿಕ ಅಸ್ವಸ್ಥ..!
ದಂಪತಿಯಗಳ ಹೆಸರನ್ನು ಗೌಪ್ಯವಾಗಿಡಲಾಗಿದ್ದು, ಪತಿ ಮತ್ತು ಇಬ್ಬರು ಪತ್ನಿಯರ ವಿವಾದವನ್ನು ಅಂತ್ಯಗೊಳಿಸಲು 15-15 ದಿನಗಳ ಸೂತ್ರವನ್ನು ನೀಡಲಾಗಿದೆ. ಇದರ ಅಡಿಯಲ್ಲಿ ಪತಿ ತಿಂಗಳಿಗೆ 15 ದಿನ ಮೊದಲ ಹೆಂಡತಿಯೊಂದಿಗೆ ಮತ್ತು ನಂತರ ಮುಂದಿನ 15 ದಿನಗಳ ಕಾಲ ಎರಡನೇ ಹೆಂಡತಿಯೊಂದಿಗೆ ಇರಲು ತಿಳಿಸಲಾಗಿದೆ. ಪತಿಯು ಎರಡು ಕಡೆಯ ನಿರ್ವಹಣಾ ವೆಚ್ಚವನ್ನು ಭರಿಸುವುದರ ಜತೆಗೆ ಮುಂದೆ ಯಾವುದೇ ವಿವಾದಗಳನ್ನು ಮಾಡಿಕೊಳ್ಳದಂತೆ ಸಲಹೆ ನೀಡುವಾಗ ಒಟ್ಟಿಗೆ ಇರುವಂತೆ ನ್ಯಾಯಾಲಯವು ಹೇಳಿದೆ.
ಏನಿದು ಘಟನೆ?
ಉಜ್ಜಯಿನಿ ಜಿಲ್ಲೆಯ ಘಾಟಿಯಾ ತಹಸಿಲ್ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು 15 ವರ್ಷಗಳ ಹಿಂದೆ ಬಮೋರಾ ನಿವಾಸಿ ಮಹಿಳೆಯನ್ನು ವಿವಾಹವಾಗಿದ್ದರು. ಕೆಲವು ವರ್ಷಗಳ ನಂತರ ಇಬ್ಬರಿಗೂ ಒಂದು ಮಗುವಾಯಿತು. ಆದರೆ ನಂತರ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿ-ಪತ್ನಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ಪತಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ಎರಡನೆಯ ಹೆಂಡತಿಯಿಂದ ಅವನಿಗೆ ಇಬ್ಬರು ಮಕ್ಕಳಿದ್ದರು. 15 ವರ್ಷಗಳ ಬಳಿಕ ಕೋರ್ಟ್ ತೀರ್ಪು ನೀಡುವಾಗ ಮೊದಲ ಪತ್ನಿಯನ್ನು ಗಂಡನ ಮನೆಗೆ ಕಳುಹಿಸಿತ್ತು.
ಮೊದಲ ಹೆಂಡತಿ ಮನೆಗೆ ಬಂದಾಗ, ಎರಡನೆಯವಳು ಕೋಪಗೊಂಡು ತನ್ನ ತಾಯಿಯ ಮನೆಗೆ ಹೋದಳು. ಮೊದಲ ಹೆಂಡತಿಗೆ ತನ್ನ ಗಂಡನನ್ನು ಬಿಡಲು ಇಷ್ಟವಿಲ್ಲದಿದ್ದರಿಂದ ಇಂದೋರ್ನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಳು. ಆದರೆ ಕೆಲವು ವರ್ಷಗಳ ನಂತರ ಇಬ್ಬರೂ ಮತ್ತೆ ಜಗಳ ಆರಂಭಿಸಿದ್ದು, ಪತ್ನಿ ಸಾಮಾನುಗಳೊಂದಿಗೆ ಉಜ್ಜಯಿನಿ ತಲುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಇದನ್ನೂ ಓದಿ: ಬ್ಯಾಂಕ್ನಲ್ಲಿಯೇ 40,000 ರೂ ಎಗರಿಸಿ ಪರಾರಿಯಾದ ಖತರ್ನಾಕ್ ಕಳ್ಳಿಯರು..
ಉಜ್ಜಯಿನಿಯಲ್ಲಿ ಪತಿ-ಪತ್ನಿಯರ ನಡುವಿನ ಜಗಳ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮೊದಲ ಹೆಂಡತಿಗೆ ತನ್ನ ಗಂಡನನ್ನು ಬಿಡಲು ಇಷ್ಟವಿರಲಿಲ್ಲ. ಆದರೆ ಪತಿ ತನ್ನ ಎರಡನೇ ಹೆಂಡತಿಯೊಂದಿಗೆ ವಾಸಿಸಲು ಬಯಸಿದ್ದರು. ಪೊಲೀಸರು ಮೂವರನ್ನು ಸಾಕಷ್ಟು ಮನವೊಲಿಸಲು ಪ್ರಯತ್ನಿಸಿ ಕೊನೆಗೆ ಮೂವರನ್ನು ಉಜ್ಜಯಿನಿ ಜಿಲ್ಲಾ ಸಲಹಾ ಕೇಂದ್ರಕ್ಕೆ ಕಳುಹಿಸಿದ್ದರು. ಹಲವು ದಿನಗಳ ಕಾಲ ಈ ಸಮಸ್ಯೆಯ ಕುರಿತಾಗಿ ಕೌನ್ಸೆಲಿಂಗ್ ನಡೆಸಿ ಅಂತಿಮವಾಗಿ 15-15 ದಿನಗಳ ಪರಿಹಾರದ ಮೇಲೆ ಮೂವರ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿದೆ.
ವಿವಾದ ಬೇಡ ಎಂದು ಕೋರ್ಟ್ ಎಚ್ಚರಿಕೆ:
ಈ ಪ್ರಕರಣದಲ್ಲಿ ಪತ್ನಿಯರಿಬ್ಬರೂ ನ್ಯಾಯಾಲಯದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರು. ಕೌನ್ಸೆಲಿಂಗ್ ಸೆಂಟರ್ನಲ್ಲಿ ಇದನ್ನೂ ಇತ್ಯರ್ಥಪಡಿಸಲಾಗಿದ್ದರಿಂದ ಪತಿಯು ಇಬ್ಬರು ಹೆಂಡತಿ ಮತ್ತು ಮಕ್ಕಳು ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿದ್ದರಿಂದ ಪತ್ನಿಯರ ಒಪ್ಪಿಗೆ ಮೇರೆಗೆ ಕೌಟುಂಬಿಕ ನ್ಯಾಯಾಲಯ ಮುಂದೆ ವಿವಾದ ಮಾಡದಂತೆ ಸೂಚಿಸಿದೆ.(ಏಜೆನ್ಸೀಸ್)