More

    ಬ್ಯಾಂಕ್​​ನಲ್ಲಿಯೇ 40,000 ರೂ ಎಗರಿಸಿ ಪರಾರಿಯಾದ ಖತರ್ನಾಕ್​ ಕಳ್ಳಿಯರು..

    ಖಾರ್ಗೋನ್​: ಬ್ಯಾಂಕ್‌ನಿಂದ ಹಣ ಡ್ರಾ ಮಾಡಲು ಬಂದಿದ್ದ ವ್ಯಕ್ತಿಯಿಂದ 4000ರೂ.ಯನ್ನು ಮಹಿಳೆಯರು ಎಗರಿಸಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಬರ್ವಾದಲ್ಲಿ ನಡೆದಿದೆ.

    ಬ್ಯಾಂಕ್ ಆಫ್ ಇಂಡಿಯಾದ ಕಿಯೋಸ್ಟ್ ಆಪರೇಟರ್ ಮಹೇಶ್ ಭಾಲೇಕರ್ ಎಂಬುವರೇ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಗುರುವಾರ ಮಧ್ಯಾಹ್ನ ಬ್ಯಾಂಕ್‌ನಿಂದ ಹಣವನ್ನು ಡ್ರಾ ಮಾಡಿ ಬ್ಯಾಗ್‌ನಲ್ಲಿಟ್ಟುಕೊಂಡು ಬ್ಯಾಂಕ್ ಉದ್ಯೋಗಿಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಆತನ ಸುತ್ತಲೂ ಮೂವರು ಮಹಿಳೆಯರು ನಿಂತಿದ್ದು, ಸರಿಯಾದ ಅವಕಾಶ ನೋಡಿಕೊಂಡು ನಿರ್ವಾಹಕನ ಹೆಗಲಿಗೆ ನೇತು ಹಾಕಿದ್ದ ಚೀಲದ ಚೈನ್ ತೆರೆದು ಹಣ ಕದ್ದಿದ್ದಾರೆ.

    ಇದನ್ನೂ ಓದಿ: ಅವಳಿಲ್ಲದ ಪ್ರಪಂಚದಲ್ಲಿ ನಾನಿರಲಾರೆ..ಪತ್ನಿಯ ಸಾವನ್ನು ಸಹಿಸಲಾರದೆ ಪ್ರಾಣ ಬಿಟ್ಟ ಅಧ್ಯಾಪಕ

    ಮೂವರು ಮಹಿಳೆಯರು ಬ್ಯಾಂಕ್‌ನಿಂದ ಹೊರಬರುತ್ತಿರುವ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಹೊರಗೆ ಬಂದ ತಕ್ಷಣ ಕಳ್ಳಿಯರು ಸಾನವಾಡ ಕಡೆಗೆ ಹೋಗುತ್ತಿದ್ದ ಬಸ್ಸಿನಲ್ಲಿ ಕುಳಿತು ಪರಾರಿಯಾಗಿದ್ದಾರೆ. ವ್ಯಕ್ತಿಯು ತನ್ನ ಆಫೀಸ್​ಗೆ ಬಂದು ಬ್ಯಾಗ್ ತೆರೆದು ಹಣ ಎಣಿಕೆ ಮಾಡಿದಾಗ ಲೂಟಿಯ ವಿಷಯ ತಿಳಿದಿದೆ.

    ಬಳಿಕ ಬ್ಯಾಂಕ್‌ಗೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಈ ವೇಳೆ ಮೂವರ ಮಹಿಳೆಯರ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಆತ ಸಮೀಪದ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮಹಿಳೆಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts