More

    ಕ್ರೀಡಾಂಗಣದ ಪ್ರವೇಶದ್ವಾರದ ಬಳಿ ಭೀಕರ ಕಾಲ್ತುಳಿತ: 12 ಜನರ ಸಾವು, ಹಲವರಿಗೆ ಗಾಯ

    ಮಡಗಾಸ್ಕರ್: ಕಾಲ್ತುಳಿತವೊಂದರಲ್ಲಿ ಕನಿಷ್ಠ 12 ಜನರು ಮೃತಪಟ್ಟು, 80 ಜನರು ಗಾಯಗೊಂಡಿರುವ ಘಟನೆ ಮಡಗಾಸ್ಕರ್​ದ ಅಂಟಾನಾನರಿವೊ ಎಂಬಲ್ಲಿ ನಡೆದಿದೆ.

    ಇಂಡಿಯನ್ ಓಷನ್ ಐಲ್ಯಾಂಡ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕಾಗಿ ಕ್ರೀಡಾಭಿಮಾನಿಗಳು ರಾಷ್ಟ್ರೀಯ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದ್ದು, ಗಾಯಗೊಂಡವರಲ್ಲಿ 11 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಡಗಾಸ್ಕರ್​​ದ ಪ್ರಧಾನಿ ಕ್ರಿಶ್ಚಿಯನ್ ಎನ್ಟ್ಸೆ ಹೇಳಿದ್ದಾರೆ.

    ಇದನ್ನೂ ಓದಿ: ರೈಲ್ವೆ ಟಿಸಿಯಂತೆ ನಟಿಸಿ ಅಕ್ರಮವಾಗಿ ದಂಡ ವಸೂಲಿ ಮಾಡುತ್ತಿದ್ದ ಯವಕ ಅಂದರ್​​.. 

    ವಿದೇಶಿ ಮಾಧ್ಯಮ ಅಲ್ ಜಜೀರಾ, ಬರಿಯಾ ಸ್ಟೇಡಿಯಂನ ನಡೆದ ಹಿಂದೂ ಮಹಾಸಾಗರ ದ್ವೀಪದ ಕ್ರೀಡಾಕೂಟದ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಪಾರ ಜನರು ಸೇರಿದ್ದರು. ಈ ವೇಳೆ ಪ್ರವೇಶದ್ವಾರದ ಬಳಿ ದೊಡ್ಡ ಕಾಲ್ತುಳಿತ ನಡೆದಿದೆ ಎನ್ನಲಾಗಿದ್ದು, ಆದರ ಇದಕ್ಕೆ ನಿಖರ ಕಾರಣ ಸ್ಪಷ್ಟವಾಗಿಲ್ಲ ಎಂದು ವರದಿ ಮಾಡಿದೆ.

    ಈ ಮಾರಣಾಂತಿಕ ಘಟನೆಯಲ್ಲಿ ಜನರರು ಜನರು ತಮ್ಮ ಬೂಟುಗಳನ್ನು ಮತ್ತು ಕಳೆದುಹೋದ ವಸ್ತುಗಳನ್ನು ಹುಡುಕಲು ಪ್ರಯತ್ನಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಕ್ರೀಡಾಂಗಣದ ಒಳಗಿನ ಇತರ ಚಿತ್ರಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಈ ಹಿಂದೆ 2019ರಲ್ಲಿ ಮಹಾಮಸಿನಾ ಕ್ರೀಡಾಂಗಣದಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ಕನಿಷ್ಠ 15 ಜನರು ಮೃತಪಟ್ಟಿದ್ದರು.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts