More

    ರೈಲ್ವೆ ಟಿಸಿಯಂತೆ ನಟಿಸಿ ಅಕ್ರಮವಾಗಿ ದಂಡ ವಸೂಲಿ ಮಾಡುತ್ತಿದ್ದ ಯುವಕ ಅಂದರ್​​..

    ಥಾಣೆ: ದಿವಾ ಮತ್ತು ಡೊಂಬಿವಿಲಿ ನಿಲ್ದಾಣಗಳ ನಡುವೆ ಲೋಕಲ್ ರೈಲುಗಳಲ್ಲಿ ಪ್ರಯಾಣಿಕರಿಗೆ ಗುರುತಿನ ಚೀಟಿ ತೋರಿಸಿ ರೈಲ್ವೆ ಟಿಸಿಯಂತೆ ನಟಿಸಿ ಅಕ್ರಮವಾಗಿ ದಂಡ ವಸೂಲಿ ಮಾಡುತ್ತಿದ್ದ ದುಷ್ಕರ್ಮಿಯೊಬ್ಬನನ್ನು ರೈಲ್ವೆ ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಬಳಿ ನಡೆದಿದೆ.

    ಪ್ರಯಾಣಿಕರಿಂದ ಹಲವಾರು ದೂರುಗಳು ಬಂದ ನಂತರವೇ ಈತ ನಕಲಿ ಟಿಸಿ ಎಂಬುದು ಬೆಳಕಿಗೆ ಬಂದಿದ್ದು, ವಿಜಯ್ ಬಹದ್ದೂರ್ ಸಿಂಗ್ (21) ಎಂಬಾತನೇ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ದಿವಾ, ಕೋಪರ್, ಡೊಂಬಿವಿಲಿ ನಿಲ್ದಾಣಗಳ ನಡುವೆ ಸ್ಥಳೀಯರು ಸಂಚರಿಸುವ ಪ್ರಯಾಣಿಕರಿಂದ ನಕಲಿ ಟಿಸಿ ಅಕ್ರಮವಾಗಿ ದಂಡ ವಸೂಲಿ ಮಾಡುತ್ತಿರುವ ಬಗ್ಗೆ ನಿಲ್ದಾಣ ವ್ಯವಸ್ಥಾಪಕರ ಕಚೇರಿಗೆ ಗುರುವಾರ ದೂರು ಬಂದಿತ್ತು.

    ಇದನ್ನೂ ಓದಿ: ತಾಯಿಗಾಗಿ ಚಂದ್ರನ ಮೇಲೆ ನಿವೇಶನ ಖರೀದಿಸಿ ಅಪರೂಪದ ಉಡುಗೊರೆ ನೀಡಿದ ಮಗಳು..!

    ಈ ದೂರಿನ ಮೇರೆಗೆ ದಿವಾ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದು, ಮುಂಬೈ ಮುಖ್ಯ ಟಿಕೆಟ್ ಇನ್ಸ್​​​ಪೆಕ್ಟರ್ ಬಳಿ ಈ ಬಗ್ಗೆ ಪರಿಶೀಲನೆ ನಡೆಸಿದಾಗ ವಿಜಯ್ ಸಿಂಗ್ ಹೆಸರಿನ ಟಿಸಿ ಇಲ್ಲವೇ ಇಲ್ಲ ಜತೆಗೆ ಆತನ ಬಳಿ ಪತ್ತೆಯಾದ ಗುರುತಿನ ಚೀಟಿಯೂ ನಕಲಿ ಎಂದು ತಿಳಿದುಬಂದಿದೆ.

    ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಡೊಂಬಿವಿಲಿ ಲೋಹ್ಮಾರ್ಗ್ ಪೊಲೀಸರಿಗೆ ಹಸ್ತಾಂತರಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬೋಗಸ್ ಟಿಸಿಯಿಂದ ಈವರೆಗೆ ಎಷ್ಟು ಪ್ರಯಾಣಿಕರು ಸುಲಿಗೆ ಮಾಡಿದ್ದಾನೆ? ಅವನು ಈ ರೀತಿ ಬೇರೆಡೆ ಅಪರಾಧಗಳನ್ನು ಮಾಡಿದ್ದಾನೆಯೇ? ಆತನಿಗೆ ಗುರುತಿನ ಚೀಟಿ ಎಲ್ಲಿಂದ ಬಂತು? ಈ ಬಗ್ಗೆ ಕೂಲಂಕಷ ತನಿಖೆಯನ್ನು ಪ್ರಾರಂಭಿಸಲಾಗಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts