More

    ತಾಯಿಗಾಗಿ ಚಂದ್ರನ ಮೇಲೆ ನಿವೇಶನ ಖರೀದಿಸಿ ಅಪರೂಪದ ಉಡುಗೊರೆ ನೀಡಿದ ಮಗಳು..!

    ಕರಿಂನಗರ: ಯಾರಾದರೂ ಅಮ್ಮನಿಗೆ ಗಿಫ್ಟ್ ಕೊಡಬೇಕೆಂದರೆ ಯಾವುದೋ ಐಷಾರಾಮಿ ಕಾರು, ದುಬಾರಿ ಸೀರೆ, ಚಿನ್ನ, ಮೊಬೈಲ್​ ಮತ್ತಿತರ ವಸ್ತುಗಳನ್ನು ನೀಡುತ್ತಾರೆ. ಆದರೆ ಇಲ್ಲೊಬ್ಬ ಮಗಳು ತನ್ನ ತಾಯಿಗಾಗಿ ಚಂದ್ರನ ಮೇಲೆ ನಿವೇಶನ ಖರೀದಿಸಿ, ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದಾಳೆ.

    ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖಾನಿಯ ಸುದ್ದಲ ರಾಮಚಂದ್ರ ಮತ್ತು ವಕುಲಾದೇವಿ ದಂಪತಿಯ ಹಿರಿಯ ಪುತ್ರಿ ಸಾಯಿ ವಿಜನಾಥ ಎಂಬುವರು USAಯ ಅಯೋವಾದಲ್ಲಿ ಗವರ್ನರ್ ಕಿಮ್ ರೆನಾಲ್ಡ್ಸ್ ಅವರ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಅಮ್ಮನಿಗೆ ಕೊಂಚ ವೆರೈಟಿಯಾಗಿರುವ ಬೆಲೆಬಾಳುವ ಉಡುಗೊರೆ ಕೊಡುವ ಐಡಿಯಾ ಬಂದಿದೆ.

    ಇದನ್ನೂ ಓದಿ: ಮೊಬೈಲ್​ ನೋಡುತ್ತಿದ್ದ ಮಗಳಿಗೆ ನಿಂದಿಸಿ, ಕಪಾಳಮೋಕ್ಷ ಮಾಡಿದ ತಾಯಿ: ಮುಂದೆ ನಡೆದಿದ್ದು ದುರಂತ..

    ನಿರೀಕ್ಷೆಯಂತೆ, ತಾಯಿ ವಕುಲಾದೇವಿ ಹೆಸರಿನಲ್ಲಿ ಮಗಳು 2022ರಲ್ಲಿ ನೋಂದಣಿ ಮೂಲಕ ಚಂದ್ರನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕಾಕತಾಳೀಯವೆಂಬಂತೆ ಭಾರತದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಭೂಸ್ಪರ್ಶ ಮಾಡಿ ಇತಿಹಾಸ ಸೃಷ್ಟಿಸಿದ ಆಗಸ್ಟ್ 23ರಂದೇ ಈ ನಿವೇಶನವು ಅವರ ಹೆಸರಿನಲ್ಲಿ ನೋಂದಣಿಯಾಗಿದೆ. ಅದೇ ದಿನ ತಾಯಿಯ ಹೆಸರಿಗೆ ಪ್ಲಾಟ್ ನೋಂದಣಿಯಾಗಿದ್ದರಿಂದ ಮಗಳ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಇದರೊಂದಿಗೆ ಆಕೆಯ ಅಪರೂಪದ ಉಡುಗೊರೆಯಾಗಿ ಇತಿಹಾಸದಲ್ಲಿ ಉಳಿಯಲಿದೆ.


    ಆದರೆ, ಅಲ್ಲಿ ಆಕೆ ಖರೀದಿಸಿದ ಭೂಮಿ ಎಷ್ಟು? ಅದರ ಬೆಲೆ ಎಷ್ಟು ಎಂಬುದು ತಿಳಿಯಬೇಕಿದ್ದು, ಅನೇಕರು ತಮ್ಮ ಪ್ರತಿಷ್ಠೆಗಾಗಿ ಅಲ್ಲಿ ನಿವೇಶನ ಖರೀದಿಸುತ್ತಿದ್ದಾರೆ. ಬಾಲಿವುಡ್​ನ ಹಲವು ನಟರು ಈಗಾಗಲೇ ಚಂದಮಾಮದಲ್ಲಿ ನಿವೇಶನ ಖರೀದಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts