More

    ಅವಳಿಲ್ಲದ ಪ್ರಪಂಚದಲ್ಲಿ ನಾನಿರಲಾರೆ..ಪತ್ನಿಯ ಸಾವನ್ನು ಸಹಿಸಲಾರದೆ ಪ್ರಾಣ ಬಿಟ್ಟ ಅಧ್ಯಾಪಕ

    ಹೈದರಾಬಾದ್​: ಪತ್ನಿಯ ಸಾವು ತಾಳಲಾರದೆ ಮನನೊಂದ ಅಧ್ಯಾಪಕರೊಬ್ಬರು ಆತ್ಮಹತ್ಯೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್‌ನ ಚಂದಾನಗರದಲ್ಲಿ ನಡೆದಿದೆ.

    ಓಲ್ಡ್ ಎಂಐಜಿ ಕಾಲೋನಿಯ ತಲ್ಲೂರಿ ರಾಧಾ ಫಣಿ ಮುಖರ್ಜಿ(47) ಎಂಬುವರೇ ಮೃತ ದುರ್ದೈವಿಯಾಗಿದ್ದು, ಸ್ಥಳೀಯ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಅಧ್ಯಾಪಕರಾಗಿದ್ದಾರೆ. ಇವರ ಪತ್ನಿ ಒಂದು ವರ್ಷದ ಹಿಂದೆ ತೀರಿಕೊಂಡಿದ್ದು, ಅವಳ ಸಾವನ್ನು ಪತಿಗೆ ಸಹಿಸಲಾಗಲಿಲ್ಲ. ಪತ್ನಿಯ ಮರಣದ ನಂತರ ಒಂಟಿಯಾಗಿ ಉಳಿದು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು.

    ಇದನ್ನೂ ಓದಿ: ಕ್ರೀಡಾಂಗಣದ ಪ್ರವೇಶದ್ವಾರದ ಬಳಿ ಭೀಕರ ಕಾಲ್ತುಳಿತ: 12 ಜನರ ಸಾವು, ಹಲವರಿಗೆ ಗಾಯ

    ಅಂದಿನಿಂದ ತನ್ನ ಹೆಂಡತಿಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಅಧ್ಯಾಪಕ, ಗುರುವಾರದಂದು ತಾನು ಇನ್ನು ಮುಂದೆ ಕಾಲೇಜಿಗೆ ಬರುವುದಿಲ್ಲ ಎಂದು ಆಡಳಿತ ಮಂಡಳಿಗೆ ತಿಳಿಸಿದ್ದರು. ಅದೇ ದಿನ ಸಂಜೆಯಿಂದ ಮನೆಯೊಳಗೆ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದು, ಹೊರ ಬಂದಿರಲೇ ಇಲ್ಲ. ಬಳಿಕ ಸಹೋದರಿ ಹಾಗೂ ಇಬ್ಬರು ಸಹೋದರರ ದೂರವಾಣಿ ಕರೆಗಳಿಗೂ ಆತ ಸ್ಪಂದಿಸಿರಲಿಲ್ಲ.

    ಕೊನೆಗೆ ಅವರ ಸಹೋದರಿ ಮತ್ತು ಸಹೋದರ ಶುಕ್ರವಾರ ಬಾಗಿಲು ತೆರೆದು ನೋಡಿದಾಗ, ಮನೆಯಲ್ಲಿ ಫ್ಯಾನ್‌ಗೆ ಹಗ್ಗದಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಇದನ್ನು ನೋಡಿದ ಕುಟುಂಬಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ಮನೆಯಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದ್ದು ಅದರಲ್ಲಿ ಪುತ್ರ ರೇವಂತ್‌ಗೆ ಆಸ್ತಿ ನೀಡುವಂತೆ ಕೋರಿದ್ದಾರೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ. ಪತ್ನಿಯ ಸಾವಿನಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತನ ಸಹೋದರಿ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿಸಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts