

ರಾಯಚೂರು/ಮೈಸೂರು: ಭೀಕರ ಅಪಘಾತವೊಂದು ಸೇರಿ ಎರಡು ಕೆಎಸ್ಆರ್ಟಿಸಿ ಬಸ್ಗಳಿಗೆ ಒಟ್ಟು ಮೂವರು ಬಲಿಯಾಗಿದ್ದಾರೆ. ಪರಿಣಾಮವಾಗಿ ಒಂದು ಅಪಘಾತದಲ್ಲಿ 7 ವರ್ಷದ ಬಾಲಕ, ಆತನ ಅಪ್ಪ ಇನ್ನೊಂದು ಅಪಘಾತದಲ್ಲಿ 17 ವರ್ಷದ ಅಂಗವಿಕಲೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಎರಡು ಅಪಘಾತದಲ್ಲಿ ಒಂದು ರಾಯಚೂರಿನಲ್ಲಿ ಮತ್ತೊಂದು ಮೈಸೂರಿನಲ್ಲಿ ಸಂಭವಿಸಿದೆ.
ರಾಯಚೂರಿನ ಗಬ್ಬೂರ್ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಅಲ್ಲಿನ ಅತ್ತನೂರು ಗ್ರಾಮದ ನಿವಾಸಿ ವಿಜಯಾನಂದ (28) ಹಾಗೂ ಅವರ ಪುತ್ರ ಮಲ್ಲಿಕಾರ್ಜುನ (7) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯಾನಂದ ಅವರು ಮಗನನ್ನು ಬೈಕ್ನಲ್ಲಿ ಕೂರಿಸಿಕೊಂಡು ರಾಯಚೂರಿನಿಂದ ಅತ್ತನೂರು ಕಡೆಗೆ ಹೋಗುತ್ತಿದ್ದಾಗ, ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ತಂದೆ-ಮಗ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಕೆಎಸ್ಆರ್ಟಿಸಿ ಬಸ್ ಚಾಲಕನನ್ನು ರಾಯಚೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರಿನಲ್ಲಿ ನಡೆದ ಇನ್ನೊಂದು ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ಗೆ ಅಂಗವಿಕಲ ಯುವತಿ ಬಲಿಯಾಗಿದ್ದಾಳೆ. ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದ ಮಹೇಶ ಎಂಬುವರ ಪುತ್ರಿ ಚಂದನಾ (17) ಸಾವಿಗೀಡಾದ ಯುವತಿ.
ಈಕೆ ನಂಜನಗೂಡು ತಾಲೂಕಿನ ವಳಗೆರೆ ಗ್ರಾಮದಿಂದ ಸ್ವಗ್ರಾಮ ಹುಸ್ಕೂರಿಗೆ ತೆರಳುತ್ತಿದ್ದು, ಬಸ್ನಿಂದ ಇಳಿಯುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಅದಾಗ್ಯೂ ಚಾಲಕ ಬಸ್ ನಿಲ್ಲಿಸದೆ ಮುಂದಕ್ಕೆ ಹೋಗಿದ್ದು, ಗ್ರಾಮಸ್ಥರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಸಮೀಪದ ಹಲ್ಲರೆ ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ ಬಸ್ಗೆ ತಡೆಯೊಡಿದ್ದಾರೆ. ಹುಸ್ಕೂರು ಗ್ರಾಮಸ್ಥರು ಮತ್ತು ನೊಂದ ಕುಟುಂಬಸ್ಥರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದ್ದು, ಸ್ಥಳಕ್ಕೆ ನಂಜನಗೂಡು ಸಂಚಾರ ಠಾಣೆ ಎಎಸ್ಐ ವೆಂಕಟಾಚಲ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.