'ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ' ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

Untitled-1
Published on

ಕಲಬುರಗಿ: ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಇದೆ. ಆದರೆ ಇಲ್ಲೊಂದು ಕಡೆ ಗಂಡ ಹೆಂಡಿರ ಜಗಳಕ್ಕೆ ಮಗುವಿನ ಪ್ರಾಣವೇ ಹೋಗಿದೆ. ಮಾತ್ರವಲ್ಲ, ಹೆಂಡತಿ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾಳೆ.

ಕಲಬುರಗಿಯ ಜಿಲ್ಲೆಯ ಶಹಬಾದ್ ಹೊರವಲಯದ ಕಾಗಿಣಾ ನದಿಯಲ್ಲಿ ಇಂಥದ್ದೊಂದು ಅವಘಡ ವರದಿಯಾಗಿದೆ. ಶಹಬಾದ್ ನಿವಾಸಿ ಶಾಂತಕುಮಾರಿ (32) ಎಂಬವರು ಆರು ತಿಂಗಳ ಮಗು ಸಹಿತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಶಾಂತಾಕುಮಾರಿಯನ್ನು ಚಿತಗತಾಪುರ ತಾಲೂಕಿನ ಮಾಡಬೂಳ ಗ್ರಾಮದ ಸಿದ್ದಲಿಂಗ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಇತ್ತೀಚೆಗೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು.

ದಂಪತಿ
ದಂಪತಿ

ಎರಡು ದಿನಗಳ ಹಿಂದೆ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದ ಶಾಂತಕುಮಾರಿ, ಗಂಡ ಮೋಸ ಮಾಡಿದ್ದಾನೆ ಎಂದು ವಾಟ್ಸ್ಆ್ಯಪ್​ ಸ್ಟೇಟಸ್​ ಹಾಕಿಕೊಂಡಿದ್ದಳು. 'ನೀನು ನನಗೆ ಚೀಟ್ ಮಾಡಿದ್ದಿ ಸಿದ್ದಲಿಂಗ, ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ' ಎಂದು ಆಕೆ ಗಂಡನನ್ನು ಉದ್ದೇಶಿಸಿ ವಾಟ್ಸ್​ಆ್ಯಪ್ ಸ್ಟೇಟಸ್​ ಅಪ್​ಲೋಡ್ ಮಾಡಿದ್ದಳು. ಶಹಬಾದ್ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿಯ ಶವ ಪತ್ತೆಯಾಗಿದ್ದು, ಮಗುವಿಗಾಗಿ ಹುಡುಕಾಟ ಮುಂದುವರಿದಿದೆ.

ವಾಟ್ಸ್​ಆ್ಯಪ್ ಸ್ಟೇಟಸ್​
ವಾಟ್ಸ್​ಆ್ಯಪ್ ಸ್ಟೇಟಸ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net