More

  ಧೋನಿ ಯಾಕಿಂತ ತಪ್ಪು ಮಾಡಿದ್ರು? ಅಭಿಮಾನಿಗಳು ಸಹ ಇದನ್ನು ನಿರೀಕ್ಷೆ ಮಾಡಿರಲಿಲ್ಲ!

  ನವದೆಹಲಿ: ಐಪಿಎಲ್​ 2024ರ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಇದೀಗ ಈ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡದೆ ಹೋದರು, ಒಂದು ಪಂದ್ಯ ಸೋತರು ಮತ್ತೊಂದು ಮ್ಯಾಚ್​ನಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗುತ್ತಿದೆ. ಸದ್ಯ ಈ ಸ್ಥಾನವನ್ನು ಭದ್ರವಾಗಿ ಉಳಿಸಿಕೊಳ್ಳುವಲ್ಲಿ ಸಿಎಸ್​ಕೆ ಹರಸಾಹಸ ಪಡುತ್ತಿರುವುದು ಇತ್ತೀಚಿನ ಪಂದ್ಯಗಳಲ್ಲಿ ಕಂಡುಬಂದಿದೆ. ಈ ವೇಳೆ ನಿನ್ನೆ (ಮೇ.05) ಧರ್ಮಶಾಲದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ಎದುರು ಸಿಎಸ್​ಕೆ 28 ರನ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

  ಇದನ್ನೂ ಓದಿ: ಅನಾರೋಗ್ಯದ ನಡುವೆಯೂ ಆಡಿ ಆರ್​ಸಿಬಿ ಗೆಲುವಿನ ರೂವಾರಿ ಎನಿಸಿದ ಮೊಹಮದ್​ ಸಿರಾಜ್!​

  ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್​ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಮೂಲಕ ಸಿಎಸ್​ಕೆಗೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆಯೇ ಮೊದಲು ಬ್ಯಾಟ್​ಗೆ ಬಂದ ಚೆನ್ನೈಗೆ ಆರಂಭಿಕ ಹಂತದಲ್ಲೇ ಭಾರೀ ಆಘಾತ ಎದುರಾಯಿತು. ಒಂದು ಹಂತದಲ್ಲಿ ಸಿಎಸ್​ಕೆಯ ಬಲಿಷ್ಠ ಬ್ಯಾಟ್ಸ್​ಮನ್​ಗಳು ಬ್ಯಾಕ್​ ಟು ಬ್ಯಾಕ್​ ತಮ್ಮ ವಿಕೆಟ್​ಗಳನ್ನು ಒಪ್ಪಿಸಿ, ಪೆವಿಲಿಯನ್​ ಹಾದಿ ಹಿಡಿದದ್ದು ಅಭಿಮಾನಿಗಳನ್ನು ತೀವ್ರ ಅಚ್ಚರಿಗೆ ದೂಡಿತು. 4-5 ವಿಕೆಟ್​ಗಳು ಉರುಳಿದಂತೆ ಎಲ್ಲರ ಚಿತ್ತ ಮಾಜಿ ಕ್ಯಾಪ್ಟನ್, ಮಹೇಂದ್ರ ಸಿಂಗ್​ ಧೋನಿಯತ್ತ ಮೂಡಿದ್ದೇ ಆದರೂ ಮಾಹಿ ಮಾತ್ರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿಲ್ಲ.

  ಧೋನಿ ತಮ್ಮ ಬದಲಿಗೆ ದುಬೆ, ಶಾರ್ದೂಲ್​ ಠಾಕೂರ್, ಜಡೇಜಾರನ್ನು ಕಣಕ್ಕೆ ಇಳಿಸಿದರು. ವಿಕೆಟ್​ಗಳು ಪತನವಾದರೂ ಕ್ರೀಸ್​ಗೆ ಯಾಕಿನ್ನು ಧೋನಿ ಬರುತ್ತಿಲ್ಲ ಎಂದು ತಲೆಕೆಡಿಸಿಕೊಂಡ ಕ್ರಿಕೆಟ್ ಅಭಿಮಾನಿಗಳು, 9ನೇ ಕ್ರಮಾಂಕದಲ್ಲಿ ಧೋನಿ ಕಣಕ್ಕಿಳಿದದ್ದು ಕಂಡು, ಭಾರೀ ಶಾಕ್​ಗೆ ಒಳಗಾದರು. ತಡವಾಗಿ ಬಂದರೂ ಪರವಾಗಿಲ್ಲ, ಹೆಚ್ಚಿನ ರನ್​ ಗಳಿಸುವಲ್ಲಿ ಸಹಾಯ ಮಾಡ್ತಾರೆ ಎಂದು ನಿರೀಕ್ಷಿಸಿದ್ದ ಅಪಾರ ಎಂ.ಎಸ್​ಡಿ ಫ್ಯಾನ್ಸ್​ಗೆ ಆಗಿದ್ದು ಮಾತ್ರ ಭಾರೀ ನಿರಾಸೆ. ಇದಕ್ಕೆ ಕಾರಣ, ಎದುರಿಸಿದ ಮೊದಲ ಬಾಲ್​ನಲ್ಲೇ ಮಾಹಿ ಗೋಲ್ಡನ್​ ಡಕ್​ ಔಟ್​ ಆಗಿ ಪೆವಿಲಿಯನ್ ಹಾದಿ ಹಿಡಿದರು.

  See also  20 ಕೋಟಿ ರೂ. ಬಹುಮಾನಕ್ಕೆ 200 ಕೋಟಿ ಖರ್ಚು! ತಂಡದ ಮಾಲೀಕರು IPLನಲ್ಲಿ ಹೇಗೆ ಆದಾಯ ಗಳಿಸ್ತಾರೆ?

  ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಬಹುಕಾಲದ ಅನಾರೋಗ್ಯ ಸಮಸ್ಯೆಯಿಂದ ಬಿಡುಗಡೆ

  ಇದೇ ಪ್ರಥಮ ಬಾರಿಗೆ ತಮ್ಮ ಟಿ-20 ವೃತ್ತಿಯಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದದ್ದು. ಅದರಲ್ಲೂ ಹರ್ಷಲ್​ ಪಟೇಲ್​ನಿಂದ ಬಂದ ಮಂದಗತಿಯ ಯಾರ್ಕರ್​​ಗೆ ವಿಕೆಟ್​ ಕಳೆದುಕೊಂಡ ಎಂ.ಎಸ್​. ಧೋನಿ, ಶಾಕಿಂಗ್ ರೀತಿಯಲ್ಲಿ ಗೋಲ್ಡನ್​ ಡಕ್​ ಔಟ್​ ಆದರು. ಇದು ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಧೋನಿ ಅಭಿಮಾನಿಗಳನ್ನು ಒಂದು ನಿಮಿಷ ಮೌನದಿಂದ ಕುಳಿತುಕೊಳ್ಳುವಂತೆ ಮಾಡಿತು. ಈ ಕುರಿತು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್​ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

  5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

  ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts