More

    ಹೆಂಡತಿಗೆ ಹೈ-ಡೋಸ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ ವೈದ್ಯ!; ಮದ್ಯಪಾನ, ಜೂಜು, ವಾಮಾಚಾರಗಳಲ್ಲೂ ತೊಡಗಿದ್ದ ಡಾಕ್ಟರ್​

    ದಾವಣಗೆರೆ: ಚುಚ್ಚುಮದ್ದು ನೀಡಿ ಜೀವ ಉಳಿಸುವಂಥ ಪವಿತ್ರ ವೃತ್ತಿಯಲ್ಲಿರುವ ವೈದ್ಯನೊಬ್ಬ ತನ್ನ ಪತ್ನಿಗೇ ಹೈಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ. 45 ವರ್ಷದ ಡಾ.ಚನ್ನೇಶಪ್ಪ ಎಂಬಾತನೇ ಈ ಪ್ರಕರಣದ ಆರೋಪಿ. ಈತನ ಪತ್ನಿ ಶಿಲ್ಪಾ (36) ಕೊಲೆಗೀಡಾದವರು.

    ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಇಂಥದ್ದೊಂದು ಕೊಲೆ ನಡೆದಿದೆ. 9 ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶಿಲ್ಪಾ ಪ್ರಕರಣವನ್ನು ಇದೀಗ ಭೇದಿಸಿರುವ ಪೊಲೀಸರು, ಪತಿ ಡಾ.ಚನ್ನೇಶಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

    ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿ ಇರುವ ಡಾ.ಚನ್ನೇಶಪ್ಪ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಶಿಲ್ಪಾ ಅವರ ವಿವಾಹ 2005ರಲ್ಲಿ ನೆರವೇರಿತ್ತು. ಈ ದಂಪತಿಗೆ ಒಬ್ಬ ಮಗಳು ಹಾಗೂ ಒಬ್ಬ ಮಗ ಇದ್ದಾರೆ.

    ಇದನ್ನೂ ಓದಿ: ವಿಮಾನದಲ್ಲೇ ಬಂದಿಳಿಯುತ್ತಿದ್ದರು, ಲಾಡ್ಜ್​​ನಲ್ಲೇ ತಂಗಿರುತ್ತಿದ್ದರು; ಆಮೇಲೆ ಈ ಇಬ್ಬರು ಮಾಡುತ್ತಿದ್ದುದು ಏನು ಗೊತ್ತಾ?

    ಮದ್ಯ, ಜೂಜು, ವಾಮಾಚಾರಗಳ ಜತೆಗೆ ಮೂಢನಂಬಿಕೆಗಳಲ್ಲಿ ತೊಡಗಿದ್ದ ಡಾ.ಚನ್ನೇಶಪ್ಪ ಅವರ ಪತ್ನಿ ಶಿಲ್ಪಾಗೆ ಫೆ. 11ರಂದು ರಕ್ತದೊತ್ತಡದಲ್ಲಿ ತೀವ್ರ ಇಳಿಕೆ ಕಂಡುಬಂದಿತ್ತು. ಪತ್ನಿಗೆ ಹೆಕ್ಸಾಮೆಟಜೋನ್ ಸ್ಟಿರಾಯಡ್ ಹೈಡೋಸ್ ನೀಡಿದ್ದ ಪತಿ, ಅಸ್ವಸ್ಥ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಳು ಎಂದು ತಿಳಿಸಿದ್ದ.

    ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದ ವೈದ್ಯ, ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗದೆ ಮನೆಗೆ ತಂದಿದ್ದ. ಶಿಲ್ಪಾಳ ಎಡ ಭುಜದ ಮೇಲೆ ಚುಚ್ಚುಮದ್ದಿನ ಗುರುತು‌ ಪತ್ತೆಯಾಗಿದ್ದು, ಬಾಯಿಂದ ರಕ್ತಮಿಶ್ರಿತ ನೊರೆ ಬಂದಿದ್ದರಿಂದ ಶಿಲ್ಪಾ ಪಾಲಕರಿಗೆ ಅನುಮಾನ ಮೂಡಿತ್ತು. ಹೀಗಾಗಿ ನ್ಯಾಮತಿ ಠಾಣೆಯಲ್ಲಿ ಡಾ.ಚನ್ನೇಶಪ್ಪ ವಿರುದ್ಧ ಶಿಲ್ಪಾ ತಂದೆ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಮನೆಯವರು ಒಳಗಿರುವಾಗಲೇ ಹೊರಗಿನಿಂದ ಬೀಗ ಹಾಕಿದ ಕಳ್ಳರು; ರಾತ್ರಿ ಬೆಳಗಾಗುವುದರೊಳಗೆ ದುಬಾರಿ ಬೈಕ್​ ಕಳವು!

    ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‌ಎಲ್‌ ತನಿಖೆ ವರದಿ ಎರಡೂ ಹೊಂದಿಕೆಯಾದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ಖಚಿತ ಪಡಿಸಿಕೊಂಡ ಪೊಲೀಸರು ಚನ್ನೇಶಪ್ಪ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಸದ್ಯ ಡಾ.ಚನ್ನೇಶಪ್ಪ ನ್ಯಾಯಾಂಗ ಬಂಧನಲ್ಲಿದ್ದು, ಕೊಲೆಗೆ ಕಾರಣ ಇತ್ಯಾದಿ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

    ಲಸಿಕೆ ಪಡೆದು ಮನೆಗೆ ಮರಳುವಷ್ಟರಲ್ಲೇ ಮೃತಪಟ್ಟ ಮಹಿಳೆ!; ಮಾರುಕಟ್ಟೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts