ಮನೆಯಲ್ಲೇ ವ್ಯಾಪಾರ ಮಾಡುವ ಮಹಿಳೆಯರೇ ಎಚ್ಚರ ಎಚ್ಚರ; ರಾಣಿಪೇಟೆಯಲ್ಲಿ ಭೀಕರ ಕೊಲೆ!

ಹೊಸಪೇಟೆ: ಇದು ಮನೆಯಲ್ಲೇ ವ್ಯಾಪಾರ ಮಾಡುವ ಮಹಿಳೆಯರಿಗೆ ಒಂದು ಎಚ್ಚರಿಕೆಯ ಸಂದೇಶ ಎಂದರೂ ತಪ್ಪಾಗಲಾರದು. ಮನೆಯಿಂದಲೇ ಏನಾದರೂ ಒಂದಷ್ಟು ದುಡಿಯೋಣ ಎಂದುಕೊಂಡು ಯಾವುದಾದರೂ ವ್ಯಾಪಾರ ಮಾಡುತ್ತಿದ್ದರೆ, ಖರೀದಿಗೆಂದು ಬರುವವರ ಬಗ್ಗೆ ಒಂದು ಜಾಗರೂಕತೆಯಿಂದಲೇ ವ್ಯವಹರಿಸಿ. ಇಲ್ಲೊಂದು ಕಡೆ ಮನೆಯಲ್ಲೇ ಸೀರೆ ವ್ಯಾಪಾರ ಮಾಡುತ್ತಿದ್ದಲ್ಲಿಗೆ ಖರೀದಿಗೆಂದು ಬಂದವರು, ಮನೆಯಲ್ಲಿ ದರೋಡೆ ಮಾಡಿಕೊಂಡು ಹೋಗಿದ್ದಲ್ಲದೆ ವೃದ್ಧೆಯೊಬ್ಬರನ್ನು ಕೊಲೆ ಕೂಡ ಮಾಡಿ ಹೋಗಿದ್ದಾರೆ. ಖರೀದಿದಾರರ ಸೋಗಿನಲ್ಲಿ ಬಂದಿದ್ದ ಆಗಂತುಕರು ಮನೆಯಲ್ಲಿದ್ದ ವೃದ್ಧೆಯ ಕೈಕಾಲು ಕಟ್ಟಿ ಕೂಡಿ ಹಾಕಿ ಹೊಡೆದಿದ್ದಲ್ಲದೆ ಕೊಲೆಯನ್ನೂ ಮಾಡಿದ್ದಾರೆ. … Continue reading ಮನೆಯಲ್ಲೇ ವ್ಯಾಪಾರ ಮಾಡುವ ಮಹಿಳೆಯರೇ ಎಚ್ಚರ ಎಚ್ಚರ; ರಾಣಿಪೇಟೆಯಲ್ಲಿ ಭೀಕರ ಕೊಲೆ!