

ತುಮಕೂರು: ಹಾಡಹಗಲೇ ಗನ್ ಹಿಡಿದು ತೋಟದ ಮನೆಗೆ ನುಗ್ಗಿದ ದರೋಡೆಕೋರರು, ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ 3 ಲಕ್ಷ ರೂ. ಹಣ ದೋಚಿ ಸ್ಥಳದಿಂದ ಕಾಲ್ಕಿತ್ತ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಉರ್ಕಿಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಉರ್ಕೆಹಳ್ಳಿ ಗ್ರಾಮದ ಗಂಗಣ್ಣ (56) ಎಂಬುವರಿಗೆ ಗುಂಡು ತಗುಲಿ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಗಂಗಣ್ಣ ಹಾಗೂ ಅವರ ಕುಟುಂಬ ತೋಟದ ಮನೆಯಲ್ಲಿ ವಾಸವಿದ್ದಾರೆ. ಕುಡಿಯುವ ನೀರು ಕೇಳುವ ನೆಪದಲ್ಲಿ ಏಕಾಏಕಿ ಮನೆಗೆ ನುಗ್ಗಿ, ಹಣ ದೋಚಿರುವ ದರೋಡೆಕೋರರು. ಬೈಕ್ನಲ್ಲಿ ಬಂದಿದ್ದ ಇಬ್ಬರು ಕಳ್ಳರು, ನಿನ್ನೆ ಸಂಜೆ ಕುಡಿಯುವ ನೀರು ಕೇಳುವ ನೆಪದಲ್ಲಿ ಏಕಾಏಕಿ ಮನೆಗೆ ನುಗ್ಗಿದ್ದಾರೆ.
ಕಳ್ಳರು ಅಂತಾ ತಿಳಿದ ಕೂಡಲೇ ಮನೆಯವರು ಕೂಗಾಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಖದೀಮರು, ಗನ್ ತೋರಿಸಿ ಗುಂಡು ಹೊಡೆಯುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ. ಕಡೆಗೆ ಮನೆಯಲ್ಲಿದ್ದ ಹಣ ದೋಚಿ ಓಡಿಹೋಗುವಾಗ ಮನೆಯ ಮಾಲೀಕ ಗಂಗಣ್ಣ ಕಳ್ಳರನ್ನು ಸೆರೆಹಿಡಿಯಲು ಮುಂದಾದಾಗ ಗುಂಡು ಹಾರಿಸಿದ್ದಾರೆ.
ಈ ವೇಳೆ ಮೂರು ಬಾರಿ ಫೈರಿಂಗ್ ಮಾಡಿದ ಖದೀಮರು. ಎರಡು ಗುಂಡು ಮಿಸ್ ಆಗಿ ಗೋಡೆಗೆ ಬಿದ್ದಿದ್ದು, ಮೂರನೆಯದು ಗಂಗಣ್ಣನ ಕಾಲಿಗೆ ಬಿದಿದ್ದೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಗಂಗಣ್ಣ, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಎಸ್.ಪಿ. ಅಶೋಕ್ ಕೆವಿ, ಹಾಗೂ ಎ.ಎಸ್.ಪಿ. ಮರಿಯಪ್ಪ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.