More

    ಸಿಎಸ್​ಕೆ ವಿರುದ್ಧ ಸೋಲಿನ ಬೆನ್ನಲ್ಲೇ ಗುಜಾರತ್​ಗೆ ಶಾಕ್​; ನಾಯಕನಿಗೆ 12 ಲಕ್ಷ ರೂ. ದಂಡ

    ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕಳೆದ ಸೀಸನ್​ ರನ್ನರ್​ ಅಪ್​ ಗುಜರಾತ್​ ಟೈಟಾನ್ಸ್​ ನಡುವೆ ನಡೆದ 17ನೇ ಆವೃತ್ತಿಯ 7ನೇ ಐಪಿಎಲ್​ ಪಂದ್ಯದಲ್ಲಿ ಋತುರಾಜ್​ ಪಡೆ 63 ರನ್​ಗಳ ಜಯ ಸಾಧಿಸಿದೆ. ಇತ್ತ 63 ರನ್​ಗಳ ಸೋಲಿನ ಬೆನ್ನಲ್ಲೇ ಗುಜರಾತ್​ ಜೈಂಟ್ಸ್​ಗೆ ಶಾಕ್ ಒಂದು ಎದುರಾಗಿದ್ದು, 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್​ಗೆ 12 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಶುಭಮನ್​ ಈ ಶಿಕ್ಷೆಗೆ ಗುರಿಯಾಗಿದ್ದಾರೆ.

    Shubman Gill

    ಇದನ್ನೂ ಓದಿ: ಸುದೀಪ್​ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕ ಸುರೇಶ್‌ಗೆ ಹಿನ್ನಡೆ; ಕೇಸ್ ರದ್ದತಿಗೆ ಕೋರ್ಟ್ ನಕಾರ

    ಅದರಂತೆ ಶುಭ್​ಮನ್ ಗಿಲ್ 12 ಲಕ್ಷ ರೂ. ದಂಡದ ಮೊತ್ತ ಪಾವತಿಸಬೇಕಿದೆ. ಐಪಿಎಲ್​ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್​ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನನ್ನು ಕಡಿತ ಮಾಡಲಾಗುತ್ತದೆ. ಇನ್ನು ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್​ನ 10 ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ.

    ಇನ್ನು ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಾಯಕ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್​ನ 10 ಆಟಗಾರರಿಗೆ 12 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ 50% ದಂಡವನ್ನು ವಿಧಿಸಲಾಗುತ್ತದೆ. ಇದೀಗ ನಾಯಕನಾಗಿ ತಮ್ಮ 2ನೇ ಪಂದ್ಯದಲ್ಲೇ ಶುಭ್​ಮನ್ ಗಿಲ್ ಸ್ಲೋ ಓವರ್​ ರೇಟ್​ ಶಿಕ್ಷೆಗೆ ಗುರಿಯಾಗಿದ್ದು, ಹೀಗಾಗಿ ಮುಂದಿನ ಪಂದ್ಯದಲ್ಲಿ ಎಚ್ಚರಿಕೆವಹಿಸುವ ಸಾಧ್ಯತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts