More

  ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

  ಆಂಧ್ರಪ್ರದೇಶ: ಭಾರತೀಯ ಚಿತ್ರರಂಗದಲ್ಲಿ ಒಂದು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಆಯಾ ಕಲಾವಿದರು ಪಡುವ ಹರಸಾಹಸ ಹೇಳತೀರದು. ಕೇವಲ ನೋಡಲು ಆಕರ್ಷಕವಾಗಿ ಇದ್ದರೆ ಸಾಲದು, ಒಳ್ಳೆಯ ಅಭಿನಯ, ಯಾವುದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ನಟಿಸುವ ಕೌಶಲ್ಯ, ಡೈಲಾಗ್ ಡೆಲಿವರಿ ಹೀಗೆ ಹತ್ತು ಹಲವು ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ ಮಾತ್ರ ಅವರಿಗೆ ಹೆಚ್ಚು ಅವಕಾಶಗಳು ಒಲಿದುಬರುತ್ತವೆ.

  ಇದನ್ನೂ ಓದಿ: ಆಗಲಿ ಏನಾಗುತ್ತೆ ನೋಡೇ ಬಿಡೋಣ…! ಚುನಾವಣೆ ಕಣದಲ್ಲಿರುವುದಂತೂ ಪಕ್ಕಾ: ವೀಣಾ ಕಾಶಪ್ಪನವರ್

  ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದಾದರೆ ಸಾಕಷ್ಟು ಪ್ರಯತ್ನಗಳು ನಿರಂತರವಾಗಿ ಇರಬೇಕು. ಒಂದು ಸಿನಿಮಾದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಳ್ಳಲು ಅಸಾಧ್ಯವಾದರೆ, ಮುಂದಿನ ಚಿತ್ರಗಳಲ್ಲಿ ಸಾಬೀತುಪಡಿಸಿಕೊಳ್ಳಲು ಅವಕಾಶಗಳು ಕುಠಿತಗೊಳ್ಳುವುದು ಸಾಮಾನ್ಯ. ಕೆಲವರಿಗೆ ಸುವರ್ಣವಕಾಶ ಸಿಕ್ಕರೂ ಸಹ ನಟಿಸಿ, ಸೈಎನಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ.

  ಪ್ರತಿಯೊಬ್ಬ ಕಲಾವಿದನಿಗೂ ಎಲ್ಲಾ ಪಾತ್ರ ಮಾಡುವ ಬಯಕೆ ಇದ್ದೇ ಇರುತ್ತದೆ. ಹೆಚ್ಚಿನ ಅವಕಾಶಗಳು ಸಿಕ್ಕಷ್ಟು ಹೆಚ್ಚೆಚ್ಚು ಸಿನಿಮಾ ಮಾಡುವ ಬಯಕೆ ಇರುತ್ತದೆ. ಅದರಲ್ಲೂ ನಟಿಮಣಿಯರಿಗಂತು ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸುವುದು ಬಹಳ ಚಾಲೆಂಜಿಂಗ್. ಸಿನಿಮಾದಲ್ಲಿ ಹೀರೋ ಜತೆಗೆ ನಟಿಸುವ ಅವಕಾಶ ಪಡೆಯಲು ಟಾಪ್ ನಟಿಯರ ಹೆಸರಲ್ಲಿ ತಮ್ಮ ಹೆಸರು ಕೂಡ ಮುಂಚೂಣಿಯಲ್ಲಿರಬೇಕು. ಆಗ ಮಾತ್ರ ಇದು ಸಾಧ್ಯ ಎಂದು ನಿರೀಕ್ಷಿಸಬಹುದು.

  ಇದನ್ನೂ ಓದಿ: ನಿಮಗೆ ನೋವಾದ್ರೆ ಏನ್​​ ಮಾಡ್ತೀರಿ ಎಂದ ಪುಟ್ಟ ಫ್ಯಾನ್​​​ ಪ್ರಶ್ನೆಗೆ ಶ್ರೇಯಾಂಕಾ ಏನಂದ್ರು ನೋಡಿ!

  ಬಾಲಿವುಡ್​, ಸ್ಯಾಂಡಲ್​ವುಡ್​, ಕಾಲಿವುಡ್​, ಟಾಲಿವುಡ್​ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲಿ ಇದು ಸಾಮಾನ್ಯವೇ. ನಟಿಯರಾಗಿ ಮುಖ್ಯಭೂಮಿಕೆಯಲ್ಲಿ ಮಿಂಚಬೇಕು ಎಂಬ ಮಹಾದಾಸೆಯಿಂದ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಕೆಲವರು, ಒಮ್ಮೊಮ್ಮೆ ಹೀರೋಯಿನ್ ಸ್ಥಾನ ಸಿಗಲಿಲ್ಲ ಅಥವಾ ಅವಕಾಶಗಳು ಸಿಗುತ್ತಿಲ್ಲ ಎಂದಾಗ ಪೋಷಕ ಪಾತ್ರ, ನಾಯಕಿಯ ತಂಗಿಯ ರೋಲ್ ಮಾಡಲು ಒಪ್ಪುತ್ತಾರೆ. ಈ ನಟಿಗೂ ಕೂಡ ಅದೇ ರೀತಿಯ ಅನುಭವವಾಗಿದ್ದು, ತಾನು ಆಯ್ಕೆ ಮಾಡಿದ ಪಾತ್ರದಿಂದ ಲೀಡ್ ನಾಯಕಿಯಾಗುವ ಅವಕಾಶವನ್ನೇ ಕಳೆದುಕೊಂಡೆ ಎಂದು ಹೇಳಿದ್ದಾರೆ.

  ಅದು ಬೇರಾರು ಅಲ್ಲ ತೆಲುಗು ನಟಿ ಅರ್ಚನಾ ಶಾಸ್ತ್ರಿ. 2006ರಲ್ಲಿ ನಟ ಸಿದ್ಧಾರ್ಥ್​ ಮತ್ತು ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ನುವ್ವೋಸ್ತಾನಂಟೆ ನೆನೊಡ್ಡಂತಾನಾ’ ಚಿತ್ರದಲ್ಲಿ ಗೆಳತಿ ಪಾತ್ರದಲ್ಲಿ ಕಾಣಿಸಿಕೊಂಡ ಅರ್ಚನಾ, ಈ ಸಿನಿಮಾದಿಂದ ತನಗೆ ಬ್ಲಾಕ್​ಬಸ್ಟರ್​ ಚಿತ್ರದಲ್ಲಿ ಲೀಡ್ ನಾಯಕಿಯಾಗುವ ಅವಕಾಶವೇ ಕಳೆದುಹೋಯಿತು. ನಾಯಕಿ ವೃತ್ತಿಯೇ ನಿಂತು ಹೋಯಿತು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: ನಿಮಗೆ ನೋವಾದ್ರೆ ಏನ್​​ ಮಾಡ್ತೀರಿ ಎಂದ ಪುಟ್ಟ ಫ್ಯಾನ್​​​ ಪ್ರಶ್ನೆಗೆ ಶ್ರೇಯಾಂಕಾ ಏನಂದ್ರು ನೋಡಿ!

  ‘ನುವುವೊಸ್ತಾನಂತೇ ನೆನೆದಾಂತಾನ’ ಚಿತ್ರದಲ್ಲಿ ಆ ಪಾತ್ರ ಆಯ್ಕೆ ಮಾಡಿಕೊಂಡಿದ್ದು ನನ್ನ ತಪ್ಪು. ಅದೊಂದು ತಪ್ಪು ನಾನು ಮಾಡದೇ ಇದ್ದಿದ್ದರೆ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಸಿಗುತ್ತಿತ್ತು. ಅದರಲ್ಲೂ ಈ ಸಿನಿಮಾ ಓಕೆ ಅಂದಿದ್ದಕ್ಕೆ.. ನಾಯಕಿಯಾಗಿ ಆಯ್ಕೆ ಮಾಡಿದ ನಿರ್ದೇಶಕನೊಬ್ಬ ತನ್ನ ಸಿನಿಮಾದಿಂದ ನನ್ನನ್ನು ತೆಗೆದು ಹಾಕಿದ್ದರು ಎಂದು ಅರ್ಚನಾ ಬೇಸರದಿಂದ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್). 

  ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ

  ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts