More

    ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ: ಮಂಡ್ಯ ಪಿಡಬ್ಯ್ಲುಡಿ ಇಂಜಿನಿಯರ್ ಹರ್ಷ ಅಮಾನತು…!

    ಮಂಡ್ಯ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ‌‌ ಹಿನ್ನೆಲೆಯಲ್ಲಿ ಮಂಡ್ಯ ಲೋಕೋಪಯೋಗಿ‌ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಎಚ್.ಆರ್.ಹರ್ಷ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
    ಲೋಕಾಯುಕ್ತ ಪೊಲೀಸರು ಕಳೆದ ಜ.30ರಂದು ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಯ ಪ್ರಾಥಮಿಕ‌ ವರದಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಸಾಬೀತಾಗಿದೆ.

    ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ: ಮಂಡ್ಯ ಪಿಡಬ್ಯ್ಲುಡಿ ಇಂಜಿನಿಯರ್ ಹರ್ಷ ಅಮಾನತು…!

    ಇವರು 1.40 ಕೋಟಿ ರೂ ಆದಾಯ ಹೊಂದಿದ್ದು, 1,25,50,336 ರೂ ಖರ್ಚಿನ ಲೆಕ್ಕವಿದೆ. ಜತೆಗೆ 14,49,664 ರೂ ಉಳಿತಾಯ ಹೊಂದಿದ್ದಾರೆ. ಆದರೆ ಪರಿಶೀಲನಾ ಅವಧಿಯಲ್ಲಿ 3,32,87,997 ರೂ ಆಸ್ತಿಯಲ್ಲಿ 3,18,38,333 ರೂ ಅಂದರೆ ಆದಾಯಕ್ಕಿಂತ ಶೇ.227.416ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿದ್ದಾರೆಂದು ಲೋಕಾಯುಕ್ತ ಆರೋಪಿಸಿದೆ.
    ಈ ಹಿನ್ನಲೆಯಲ್ಲಿ ಹರ್ಷ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 13(1)(ಬಿ) ರಡಿ ಕ್ರಿಮಿನಲ್ ಮೊಕದ್ದಮೆ/ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 10(1) (ಎಎ)ರನ್ವಯ ತಕ್ಷಣವೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಮಾ.26ರಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುರುಳೀಧರ ಎಸ್.ತಳ್ಳಿಕೇರಿ ಆದೇಶ ಹೊರಡಿಸಿದ್ದಾರೆ.

    ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ: ಮಂಡ್ಯ ಪಿಡಬ್ಯ್ಲುಡಿ ಇಂಜಿನಿಯರ್ ಹರ್ಷ ಅಮಾನತು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts