More

    ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ; ಭಾರತದ ಮೊದಲ ಎದುರಾಳಿ ಯಾರು ಗೊತ್ತೇ?

    ಢಾಕಾ: ಹಾಲಿ ವರ್ಷ ಅಕ್ಟೋಬರ್​ 3ರಿಂದ 20ರವರೆಗೆ ಬಾಂಗ್ಲಾದೇಶದಲ್ಲಿ ನಡೆಯಲಿರುವ 9ನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್​ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಭಾನುವಾರ ಬಿಡುಗಡೆಗೊಳಿಸಿದೆ. ಭಾರತ ತಂಡ ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ, ನ್ಯೂಜಿಲೆಂಡ್​ ಮತ್ತು ಪಾಕಿಸ್ತಾನ ತಂಡಗಳನ್ನು ಒಳಗೊಂಡ ಎ ಗುಂಪಿನಲ್ಲಿ ಸ್ಥಾನ ಸಂಪಾದಿಸಿದೆ. ಅಕ್ಟೋಬರ್​ 4ರಂದು ನ್ಯೂಜಿಲೆಂಡ್​ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿರುವ ಭಾರತ ತಂಡ, ಅಕ್ಟೋಬರ್​ 6ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

    ಅಕ್ಟೋಬರ್​ 13ರಂದು 6 ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ವಿರುದ್ದ ಆಡಲಿದೆ. ಅಕ್ಟೋಬರ್​ 9ರಂದು ಮೊದಲ ಅರ್ಹತಾ ತಂಡವನ್ನು ಎದುರಿಸಲಿದೆ. ಭಾರತದ ಎಲ್ಲ 4 ಲೀಗ್​ ಪಂದ್ಯಗಳು ಸೈಲೆಟ್​ನಲ್ಲೇ ನಡೆಯಲಿವೆ. ಇಂಗ್ಲೆಂಡ್​-ದ. ಆಫ್ರಿಕಾ ಮತ್ತು ಬಾಂಗ್ಲಾದೇಶ&ಮೊದಲ ಅರ್ಹತಾ ತಂಡಗಳು ಟೂರ್ನಿಯ ಮೊದಲ ದಿನ ಮುಖಾಮುಖಿ ಆಗಲಿವೆ.

    ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳನ್ನು ತಲಾ 5ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ ರಾಬಿನ್​ ಲೀಗ್​ ಹಂತದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಅಕ್ಟೋಬರ್​ 17 ಮತ್ತು 18ರಂದು ಕ್ರಮವಾಗಿ ಸೈಲೆಟ್​ ಮತ್ತು ಢಾಕಾದಲ್ಲಿ ಸೆಮೀಸ್​ ನಡೆಯಲಿವೆ. ಅಕ್ಟೋಬರ್​ 20ರಂದು ಢಾಕಾದಲ್ಲಿ ಫೈನಲ್​ ಪಂದ್ಯ ನಿಗದಿಯಾಗಿದೆ.

    ಆತಿಥೇಯ ಬಾಂಗ್ಲಾದೇಶ, ದ. ಆಫ್ರಿಕಾ, ಇಂಗ್ಲೆಂಡ್​, ವೆಸ್ಟ್​ ಇಂಡೀಸ್​ ಬಿ ಗುಂಪಿನಲ್ಲಿವೆ.

    ಟೂರ್ನಿಯಲ್ಲಿ 19 ದಿನಗಳ ಅವಧಿಯಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಢಾಕಾ, ಸೈಲೆಟ್​ನಲ್ಲೇ ನಿಗದಿಯಾಗಿವೆ. ನಾಕೌಟ್​ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಪಡಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ ಕೊನೇ 2 ತಂಡಗಳ ಅರ್ಹತಾ ಪ್ರಕ್ರಿಯೆ ಸದ್ಯ ಅಬುಧಾಬಿಯಲ್ಲಿ ನಡೆಯುತ್ತಿದೆ. ಐರ್ಲೆಂಡ್​, ಯುಎಇ, ಶ್ರೀಲಂಕಾ, ಸ್ಕಾಟ್ಲೆಂಡ್​ ರೇಸ್​ನಲ್ಲಿವೆ.

    ಗುಂಪುಗಳು:
    ಎ: ಆಸ್ಟ್ರೆಲಿಯಾ, ಭಾರತ, ನ್ಯೂಜಿಲೆಂಡ್​, ಪಾಕಿಸ್ತಾನ, ಅರ್ಹತಾ ತಂಡ-1.
    ಬಿ: ದಣ ಆಫ್ರಿಕಾ, ಇಂಗ್ಲೆಂಡ್​, ವೆಸ್ಟ್​ ಇಂಡೀಸ್​, ಬಾಂಗ್ಲಾದೇಶ, ಅರ್ಹತಾ ತಂಡ-2.

    ಭಾರತದ ಪಂದ್ಯಗಳು
    ದಿನಾಂಕ: ಎದುರಾಳಿ
    ಅ. 4: ನ್ಯೂಜಿಲೆಂಡ್​
    ಅ. 6: ಪಾಕಿಸ್ತಾನ
    ಅ. 9: ಅರ್ಹತಾ-1
    ಅ. 13: ಆಸ್ಟ್ರೆಲಿಯಾ

    ಟಿ20 ವಿಶ್ವಕಪ್​ಗೆ ಆಯ್ಕೆಯನ್ನು ಟೀಕಿಸುತ್ತಿದ್ದವರಿಗೆ ದಿಟ್ಟ ಉತ್ತರ ನೀಡಿದ ಮೊಹಮದ್​ ಸಿರಾಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts