More

    ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?

    ಬೆಂಗಳೂರು: ಈ ಸಲದ ಚುನಾವಣೆಯಲ್ಲಿ ಇಂಥ ಪಕ್ಷದವರೇ ಗೆದ್ದು ಅಧಿಕಾರಕ್ಕೆ ಬರುತ್ತಾರೆ ಎಂದು ಈಗಾಗಲೇ ಕೆಲವು ಸಮೀಕ್ಷೆಗಳು ಭವಿಷ್ಯವನ್ನೇ ಹೇಳಿಬಿಟ್ಟಿವೆ. ಆದರೆ ಈ ಎಲ್ಲವನ್ನೂ ತಲೆಕೆಳಗಾಗಿಸುವಂತೆ ಮಾಡುವ, ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುವಂಥ ಶಕ್ತಿ ಇರುವವರೂ ಇದ್ದಾರೆ ಎಂದರೂ ತಪ್ಪೇನಲ್ಲ.

    ಹೌದು.. ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುವಂಥ ಅಥವಾ ಚುನಾವಣಾ ಫಲಿತಾಂಶದ ಮೇಲೆ ಮಹತ್ವದ ಪರಿಣಾಮ ಬೀರುವಂಥ ಶಕ್ತಿ ಇವರಿಗಿದೆ. ಇವರು ಯಾವುದೇ ಪಕ್ಷಕ್ಕೆ ಸೇರಿರುವವರಲ್ಲ. ಒಂದು ಕಾಲದಲ್ಲಿ ಇವರು ಯಾವುದಾದರೂ ಪಕ್ಷಕ್ಕೆ ಸೇರಿದ್ದರೂ, ಆಮೇಲೆ ‘ಎಲ್ಲರೂ ಒಂದೇ, ಯಾರ್ ಗೆದ್ರೂ ಅಷ್ಟೇʼ ಎಂದುಕೊಂಡು ರಾಜಕೀಯದ ಸಹವಾಸವೇ ಬೇಡ ಎಂದು ಸುಮ್ಮನಾದವರು. ಅದಾಗ್ಯೂ ಈ ಸಲ ಇವರು ಮನಸು ಮಾಡಿದರೆ ಚುನಾವಣೆಯ ಫಲಿತಾಂಶವನ್ನೇ ಬದಲಿಸಿಬಿಡಬಹುದು. ಅಂದಹಾಗೆ ಇವರು ಪ್ರತಿಸಲ ಮತ ಚಲಾಯಿಸದೇ ಸುಮ್ಮನಿರುವವರು. ರಾಜ್ಯದಲ್ಲಿ ಇಂಥವರ ಪ್ರಮಾಣವೇ ಸುಮಾರು ಶೇ.25ರಷ್ಟಿದೆ.

    ಇದನ್ನೂ ಓದಿ: ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ

    ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆ ಅಂದರೆ 2018ರಲ್ಲಿ ಇಂಥವರ ಪ್ರಮಾಣ ಶೇ.28.09 ಇತ್ತು. ಅಂದರೆ ಆ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪ್ರಮಾಣ ಶೇ. 71.91. ಅದರಲ್ಲಿ ಬಿಜೆಪಿಯವರು ಗಳಿಸಿದ್ದ ಮತ ಪ್ರಮಾಣ ಶೇ.36.20, ಕಾಂಗ್ರೆಸ್​ನವರು ಗಳಿಸಿದ್ದ ಮತ ಪ್ರಮಾಣ ಶೇ.38 ಮತ್ತು ಜೆಡಿಎಸ್​ನವರು ಗಳಿಸಿದ್ದ ಮತ ಪ್ರಮಾಣ ಶೇ.18.3. ಅಂದಹಾಗೆ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದುವರೆಗೆ ಶೇ.75ಕ್ಕಿಂತ ಹೆಚ್ಚು ಮತ ಚಲಾವಣೆಯಾಗಿಲ್ಲ. 1952ರಲ್ಲಿ ಮಾತ್ರ ಒಮ್ಮೆ ಶೇ.77 ಮತ ಚಲಾವಣೆ ಆಗಿತ್ತು. ಅಂದರೆ ಪ್ರತಿ ಚುನಾವಣೆಯಲ್ಲೂ ಸುಮಾರು ಶೇ. 25ರಷ್ಟು ಅಥವಾ ಅದಕ್ಕೂ ಹೆಚ್ಚು ಮಂದಿ ಮತ ಚಲಾಯಿಸದೇ ಸುಮ್ಮನಿರುತ್ತಾರೆ.

    ಇದನ್ನೂ ಓದಿ: ವರ್ಷ ನೂರು ದಾಟಿದ್ರೂ ಕುಂದಿಲ್ಲ ಉತ್ಸಾಹ; ಮತ ಚಲಾಯಿಸುವಂತೆ ಶತಾಯುಷಿ ಅಜ್ಜಿಯರ ಕರೆ

    ‘ಯಾರ್ ಗೆದ್ರೂ ಅಷ್ಟೇ’ ಎಂಬ ನಿರಾಸಕ್ತಿಯಿಂದ ಮತ ಚಲಾಯಿಸದೇ ಸುಮ್ಮನಿರುವವರು ಸರಿಯಾಗಿ ಮತ ಚಲಾಯಿಸಿದರೆ ಈ ಚುನಾವಣೆಯ ಫಲಿತಾಂಶವನ್ನೇ ಬದಲಿಸಬಲ್ಲರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನೇ ಉದಾಹರಣೆಯಾಗಿ ಇರಿಸಿಕೊಂಡು ಇದನ್ನು ಹೀಗೆ ವಿಶ್ಲೇಷಿಸಬಹುದು.

    2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಾದ ಒಟ್ಟು ಮತ ಚಲಾವಣೆ ಶೇ.71.91

    ಬಿಜೆಪಿ ಗಳಿಸಿದ್ದ ಮತ: ಶೇ.36.20
    ಕಾಂಗ್ರೆಸ್ ಗಳಿಸಿದ್ದ ಮತ: ಶೇ.38
    ಜೆಡಿಎಸ್ ಗಳಿಸಿದ್ದ ಮತ: ಶೇ. 18.3

    ಈ ಸಲದ ಒಟ್ಟು ಮತದಾರರು: 5.31 ಕೋಟಿ.
    ಕಳೆದ ವರ್ಷ ಆದಷ್ಟೇ ಮತದಾನ ಈ ಸಲ ಆಗುತ್ತೆ ಅಂದರೂ ಈ ಸಲದ ಮತದಾನ: ಶೇ.71.91
    ಮತ ಚಲಾಯಿಸದವರ ಪ್ರಮಾಣ: 28.09

    ಅಂದರೆ ಇದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ದೊಡ್ಡ ಪಕ್ಷವಾಗಿದ್ದ ಜೆಡಿಎಸ್ ಗಳಿಸಿದ್ದಕ್ಕಿಂತಲೂ ಅಧಿಕ ಮತ. ಹೀಗೆ ‘ಯಾರ್ ಗೆದ್ರೂ ಅಷ್ಟೇ’ ಎಂದು ಮತ ಚಲಾಯಿಸದೆ ಸುಮ್ಮನಿರುವವರಲ್ಲಿ ನೀವೂ ಒಬ್ಬರಾಗಿದ್ದರೆ, ನಿಮಗೆ ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುವ ಇಲ್ಲವೇ ಅದರ ಮೇಲೆ ಮಹತ್ವದ ಪರಿಣಾಮ ಬೀರುವ ಶಕ್ತಿ ಇದೆ. ಸುಮ್ಮನಿರಬೇಡಿ.. ದಯವಿಟ್ಟು ತಪ್ಪದೇ ಹೋಗಿ ಮತ ಚಲಾಯಿಸಿ.

    ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts