

ಗದಗ: ಚುನಾವಣೆ ದಿನ ರಜೆ ಸಿಕ್ಕಿದೆ ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಇಲ್ಲವೇ ಹಾಯಾಗಿ ಮನೆಯಲ್ಲೇ ಇರೋಣ ಎನ್ನುವವರ ಮಧ್ಯೆ ಇಲ್ಲಿ ಮೂವರು ಶತಾಯುಷಿ ಅಜ್ಜಿಯರು ಮತ ಚಲಾಯಿಸುವ ಉತ್ಸಾಹ ತೋರಿ ಗಮನ ಸೆಳೆದಿದ್ದಾರೆ.
ಮತ ಚಲಾಯಿಸುವ ಕುರಿತು ಗದಗ ಜಿಲ್ಲೆಯ ಈ ಶತಾಯುಷಿ ಅಜ್ಜಿಯರ ಉತ್ಸಾಹವನ್ನು ಗುರುತಿಸಿರುವ ಚುನಾವಣಾ ಆಯೋಗ, ಸಾರ್ವಜನಿಕರು ಮತ ಚಲಾಯಿಸುವಂತೆ ಈ ಮೂವರ ಮೂಲಕ ಕರೆ ಕೊಟ್ಟಿದ್ದಾರೆ.
ಅಷ್ಮಾ ಹುಲ್ಲೂರ, ಜನ್ಬಜೀ ಚಪ್ಪರಬಂದ್, ಫಾತಿಮಾ ಬಿಜಾಪುರ ಎಂಬ ಈ ಮೂವರು ಮಹಿಳೆಯರ ವಯಸ್ಸು ನೂರು ದಾಟಿದ್ದರೂ ಮತ ಚಲಾಯಿಸುವ ಉತ್ಸಾಹ ಕುಂದಿಲ್ಲ. ಶತಾಯುಷಿಗಳಾಗಿರುವ ಈ ಮೂವರು, ನಾನೂ ಮತ ಚಲಾಯಿಸುವೆ, ನೀವೂ ಮತ ಚಲಾಯಿಸಿ ಎಂದಿದ್ದಾರೆ.