More

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಬೆಂಗಳೂರು: ‘ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ’ ಎಂದು ನಟ-ನಿರ್ದೇಶಕ ಉಪೇಂದ್ರ ಹೇಳಿದ್ದಾರೆ. ನಿನ್ನೆ ಪ್ರಜಾಕೀಯ ಕುರಿತಾಗಿ ಫೇಸ್​ಬುಕ್ ಲೈವ್​ ಬಂದಿದ್ದ ಅವರು, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸುತ್ತ ಈ ಮಾತನ್ನು ಹೇಳಿದರು.

    ವ್ಯವಸ್ಥೆಯನ್ನು ಸಂಪೂರ್ಣ ಬದಲಿಸುವಲ್ಲಿ ‘ನಾನು’ ಎಷ್ಟು ಮುಖ್ಯ ಎಂಬುದನ್ನು ವಿವರಿಸುವ ನಿಟ್ಟಿನಲ್ಲಿ ‘ನಾನು! ನಾನೊಬ್ಬ ಎಲ್ಲಾ ಸರಿ ಮಾಡಬಹುದಾ!?’ ಎಂಬ ಶೀರ್ಷಿಕೆಯೊಂದಿಗೆ ಲೈವ್ ಬಂದು ಮಾತನಾಡಿದ್ದರು. ರಾಜಕೀಯ ವ್ಯವಸ್ಥೆ ಬದಲಾವಣೆಯಲ್ಲಿ ‘ನಾನು’ ಎಷ್ಟು ಮುಖ್ಯ ಎಂದು ಪ್ರತಿಯೊಬ್ಬನೂ ತನ್ನನ್ನು ತಾನೇ ಕೇಳಿಕೊಳ್ಳಬೇಕು ಎಂದು ಹಲವಾರು ವಿಷಯಗಳನ್ನು ಹಂಚಿಕೊಂಡ ಅವರು ಕೊನೆಯಲ್ಲಿ ವೀಕ್ಷಕರ ಕಮೆಂಟ್​ಗೆ ಉತ್ತರಿಸಿದರು.

    ಇದನ್ನೂ ಓದಿ: ‘ಲಾಲ್ ಸಲಾಂ’ ಸಲುವಾಗಿ ‘ಮೊಯಿದೀನ್ ಭಾಯ್’ ಆದ ರಜನಿಕಾಂತ್: ಹೇಗಿದೆ ನೋಡಿ ಸೂಪರ್​ಸ್ಟಾರ್​ ​ಲುಕ್!​

    ಆ ಪೈಕಿ ಒಬ್ಬರು, ‘ನನಗೆ 70 ವರ್ಷ, ನಾನು ನಿವೃತ್ತ ಸರ್ಕಾರಿ ನೌಕರ. ಉಪೇಂದ್ರ ಅವರೇ.. ನೀವು ಹಚ್ಚಿದ ಜ್ಯೋತಿ ನಿಮ್ಮ ಸಾವಿನ ನಂತರ ಕಾಡ್ಗಿಚ್ಚಾಗಿ ಹರಡುತ್ತದೆ, ಶುಭವಾಗಲಿ..’ ಎಂದಿದ್ದರು. ಇದಕ್ಕೆ ಕೂಲ್ ಆಗಿಯೇ ಉತ್ತರಿಸಿದ ಉಪೇಂದ್ರ, ‘ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ’ ಎಂದರು.

    ಇದನ್ನೂ ಓದಿ: 85ರ ವೃದ್ಧರ ಆರೈಕೆಗೆಂದು ವಾರದ ಹಿಂದೆ ಬಂದಿದ್ದವ ಕೊಂದು ಪರಾರಿಯಾದ!

    ‘ಸತ್ತ ಮೇಲೆ ಮನುಷ್ಯನಿಗೆ ಬೆಲೆ ಕೊಡುವುದು ನನಗೆ ಅರ್ಥ ಆಗುತ್ತಿಲ್ಲ. ನಾನು ಬದುಕೋದು ಸಾಯೋದು ಸೆಕೆಂಡರಿ, ಅದು ಬಿಟ್ಟುಬಿಡಿ. ನೀವು ಸತ್ತ ಮೇಲೆ ಜಾಸ್ತಿ ಫೇಮಸ್ ಆಗುತ್ತೆ, ಸತ್ತ ಮೇಲೆ ನಿಮ್ಮನ್ನು ಜಾಸ್ತಿ ನಂಬೋಕೆ ಶುರು ಮಾಡ್ತಾರೆ ಅಂತೆಲ್ಲ ಅಂದ್ಕೊಂಡು ನೀವು ಬೆಂಬಲ ಕೊಡುವುದನ್ನು ಪೋಸ್ಟ್​ಪೋನ್ ಮಾಡಬೇಡಿ. ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ ಈ ಒಂದು ಕೆಲಸಕ್ಕೋಸ್ಕರ’ ಎಂದು ಉಪ್ಪಿ ಉತ್ತರಿಸಿದರು.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ‘ಅದಕ್ಕೋಸ್ಕರ ಹೆಸರು ಬೇಡ, ಪೋಸ್ಟ್ ಬೇಡ, ಏನೂ ಬೇಡ ಅಂತ ಹೇಳ್ತಿದ್ದೇನೆ. ಮತ್ತೆ ನನ್ನಲ್ಲೇನೋ ಸ್ವಾರ್ಥ ಇದೆ, ಅದಕ್ಕೆ ಇಲ್ಲಿ ಬಂದಿದ್ದಾನೆ ಅನ್ನೋ ಅಭಿಪ್ರಾಯ ಬರಬಾರದು ಅಂತ ನಾನು ಬದುಕಿದ್ದಾಗಲೇ ಸತ್ತು ಪ್ರಜಾಕೀಯ ಮಾಡಲು ಆಸೆ ಪಡುತ್ತೇನೆ’ ಎಂದು ಉಪೇಂದ್ರ ಹೇಳಿದರು.

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts