ಬೆಂಗಳೂರು: ದೇಶದಲ್ಲಿ ಈಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಜಮಾನಾ ಶುರುವಾಗಿದ್ದು, ಎಲ್ಲೆಡೆ ಅವೇ ಕಾಣಿಸಲಾರಂಭಿಸಿವೆ. ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ದುಬಾರಿಯಾದರೂ ಹೊಸದಾಗಿ ವಾಹನ ಖರೀದಿಸುತ್ತಿರುವ ಬಹಳಷ್ಟು ಮಂದಿ ಎಲೆಕ್ಟ್ರಿಕ್ ವಾಹನಳಿಗೇ ಆದ್ಯತೆ ನೀಡುತ್ತಿದ್ದಾರೆ. ಈ ಮಧ್ಯೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ.
ಇಂಥದ್ದೊಂದು ಬೆಲೆ ಇಳಿಕೆಗೆ ಓಲಾ ಎಲೆಕ್ಟ್ರಿಕ್ ಮುನ್ನುಡಿ ಬರೆದಿದೆ. ಹೀರೋ ವಿಡಾ ಕೂಡ ಇದನ್ನೇ ಅನುಸರಿಸಿದ್ದು, ಮುಂದೆ ಟಿವಿಎಸ್, ಏಥರ್ ಮುಂತಾದವೂ ಇದನ್ನು ಪಾಲಿಸುವ ಅಗತ್ಯ ಬೀಳಲಿದೆ. ಬೆಲೆ ಇಳಿಕೆಯ ಜತೆಗೆ ಈಗಾಗಲೇ ವಾಹನ ಖರೀದಿಸಿರುವವರಿಗೆ ಇಳಿಕೆಯ ಮೊತ್ತವನ್ನು ಕೊಡಲು ಕೂಡ ಓಲಾ ಮುಂದಾಗಿದೆ. ಈ ಬಾಬ್ತು 130 ಕೋಟಿ ರೂ. ಹಿಂದಿರುಗಿಸುವುದಾಗಿಯೂ ಅದು ಹೇಳಿದೆ.
ಇದನ್ನೂ ಓದಿ: ಜೊತೆಗಿದ್ದವನ ಹೆಣವನ್ನೇ 2 ವರ್ಷ ಫ್ರಿಡ್ಜ್ನಲ್ಲಿಟ್ಟ; ಸತ್ತವನ ಹಣವನ್ನೇ ದಿನಗಟ್ಟಲೆ ಬಳಸಿಬಿಟ್ಟ!
ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ಚಾರ್ಜರ್ಗಳನ್ನು ಆ್ಯಕ್ಸೆಸ್ಸರಿ ಎಂದು ಪರಿಗಣಿಸಿ ಅದಕ್ಕೆ ಪ್ರತ್ಯೇಕ ಹಣ ಪಡೆಯುತ್ತಿವೆ. ಇಂದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇದು ಫೇಮ್ (ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್-FAME) ಯೋಜನೆಗಳಿಗೆ ವಿರುದ್ಧ ಎಂದು ಹೇಳಿದೆ. ಮಾತ್ರವಲ್ಲ, ಇದು ಕಾನೂನು ಉಲ್ಲಂಘಿಸಿದಂತೆ ಎಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ವಾಹನ ಖರೀದಿಸಿರುವ ಗ್ರಾಹಕರಿಂದ ಹೆಚ್ಚುವರಿಯಾಗಿ ಚಾರ್ಜರ್ಗೆಂದು ಪಡೆದಿರುವ ಹಣವನ್ನು ಹಿಂದಿರುಗಿಸುವುದಾಗಿ ಓಲಾ ಹೇಳಿದೆ. 2019-20ರಿಂದ 2023ರ ಮಾ. 30ರ ವರೆಗೆ ಟೂವ್ಹೀಲರ್ ಖರೀದಿಸಿರುವ ಗ್ರಾಹಕರಿಗೆ ಓಲಾ 9ರಿಂದ 19 ಸಾವಿರ ರೂ. ವರೆಗೆ ಹಿಂದಿರುಗಿಸಲಿದೆ.
ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಮಾತ್ರವಲ್ಲ, ಇನ್ನು ಮುಂದೆ ಮಾರಾಟವಾಗಲಿರುವ ವಾಹನಗಳಲ್ಲಿ ಚಾರ್ಜರ್ಗೆ ಪ್ರತ್ಯೇಕವಾಗಿ ಹಣ ಪಡೆಯದೇ ಇರುವುದರಿಂದ ಓಲಾ ದ್ವಿಚಕ್ರವಾಹನಗಳ ಬೆಲೆಯಲ್ಲಿ 9ರಿಂದ 19 ಸಾವಿರ ರೂ. ವರೆಗೆ ಇಳಿಕೆ ಆಗಿರಲಿದೆ. ಓಲಾದ ಈ ನಿರ್ಧಾರದ ಬೆನ್ನಿಗೆ ಹೀರೋ ಮೋಟರ್ ಕಾರ್ಪ್ ಕಂಪನಿ ಮುನ್ನೆಚ್ಚರಿಕೆ ವಹಿಸಿದ್ದು, ಹೀರೋ ವಿಡಾ ಚಾರ್ಜರ್ಗೆಂದು ವಿಧಿಸಲಾಗಿದ್ದ 20 ಸಾವಿರ ರೂ. ರದ್ದುಗೊಳಿಸಿದೆ. ಅರ್ಥಾತ್, ಹೀರೋ ವಿಡಾ ಬೆಲೆಯಲ್ಲಿ 20 ಸಾವಿರ ರೂ. ಇಳಿಕೆ ಆಗಿದೆ.
ಇದನ್ನೂ ಓದಿ: ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ
ಓಲಾ, ಹಿರೋ ಮೋಟೋ ಕಾರ್ಪ್ ಮಾತ್ರವಲ್ಲದೆ ಎಥರ್ ಎನರ್ಜಿ, ಟಿವಿಎಸ್ ಮೋಟಾರ್ ಕಂಪನಿಗಳು ಕೂಡ ಈ ನಿಯಮ ಉಲ್ಲಂಘನೆ ಮಾಡಿದ್ದು, ಅವು ಕೂಡ ಚಾರ್ಜರ್ ಬಾಬ್ತು ಪಡೆದ ಹಣ ಹಿಂದಿರುಗಿಸಬೇಕಾಗಿದೆ. ಮಾತ್ರವಲ್ಲ, ಇನ್ನು ಮಾರಾಟವಾಗಲಿರುವ ಈ ವಾಹನಗಳ ಬೆಲೆಯಲ್ಲೂ ಚಾರ್ಜರ್ ಬೆಲೆಯಷ್ಟು ಹಣ ಕಳೆಯಲಿರುವುದರಿಂದ ವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ ಆಗಿರಲಿದೆ.
Important Update. pic.twitter.com/G0GM46UApM
— Ola Electric (@OlaElectric) May 4, 2023
ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್ನ ನಂಬರ್; ಏನಿದರ ಹಿನ್ನೆಲೆ?