ಜೊತೆಗಿದ್ದವನ ಹೆಣವನ್ನೇ 2 ವರ್ಷ ಫ್ರಿಡ್ಜ್​ನಲ್ಲಿಟ್ಟ; ಸತ್ತವನ ಹಣವನ್ನೇ ದಿನಗಟ್ಟಲೆ ಬಳಸಿಬಿಟ್ಟ!

Crime
Published on

ನವದೆಹಲಿ: ಇತ್ತೀಚೆಗೆ ಶವಕ್ಕೂ ಫ್ರಿಡ್ಜ್​ಗೂ ಅದೇನೋ ಸಂಬಂಧ ಇರಬೇಕು ಎನ್ನುವಂತೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೊಲೆ ಮಾಡಿ ಶವವನ್ನು ಫ್ರಿಡ್ಜ್​ನಲ್ಲಿಟ್ಟ ಕೆಲವು ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಇದೀಗ ಇನ್ನೊಂದು ಅಂಥದ್ದೇ ಪ್ರಕರಣ ಬಹಿರಂಗಗೊಂಡಿದೆ.

ಡೇಮಿಯಾನ್ ಜಾನ್ಸನ್ ಎಂಬ 52 ವರ್ಷದ ವ್ಯಕ್ತಿ ಫ್ಲ್ಯಾಟ್​​ನಲ್ಲಿ ಜೊತೆಗಿದ್ದ ಜಾನ್​ ವೇನ್​ರೈಟ್​ (71) ಎಂಬಾತನ ಶವವನ್ನು ಎರಡು ವರ್ಷಗಳ ಕಾಲ ಫ್ರಿಡ್ಜ್​ನಲ್ಲಿ ಇರಿಸಿದ್ದ. 2018ರ ಸೆಪ್ಟೆಂಬರ್​ನಲ್ಲಿ ಜಾನ್ ಸಾವಿಗೀಡಾಗಿದ್ದು, 2022ರ ಆಗಸ್ಟ್​ನಲ್ಲಿ ಈತನ ಶವ ಪತ್ತೆಯಾಗಿತ್ತು.

ಯುಕೆಯಲ್ಲಿನ ಬಿರ್ಮಿಂಗ್ಹಂ ಎಂಬಲ್ಲಿ ಇಬ್ಬರು ಒಂದೇ ಫ್ಲ್ಯಾಟ್​ನಲ್ಲಿದ್ದರು. ಜಾನ್ ಸತ್ತಿದ್ದು ಹೇಗೆ ಎಂಬುದರ ಬಗ್ಗೆ ಇನ್ನೂ ಗೊತ್ತಾಗದಿದ್ದರೂ, ಈತನ ಶವವನ್ನು ಡೇಮಿಯಾನ್ ಎರಡು ವರ್ಷಗಳ ಕಾಲ ಫ್ರಿಡ್ಜ್​ನಲ್ಲಿ ಇರಿಸಿದ್ದು ತಿಳಿದುಬಂದಿದೆ. ಅಲ್ಲದೆ ಜಾನ್ ಖಾತೆಯಿಂದ ಹಣವನ್ನು ಡ್ರಾ ಮಾಡಿ ಬಳಸಿದ್ದೂ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರ ಡರ್ಬಿ ಕ್ರೌನ್​ ಕೋರ್ಟ್​ನಲ್ಲಿ ವಿಚಾರಣೆ ನಡೆದಿದ್ದು, ಆರೋಪಿ ಡೇಮಿಯಾನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net