More

    ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಳೇ ಬಸ್​ನ ನೋಂದಣಿ ಸಂಖ್ಯೆಯೊಂದು ಅಮೆರಿಕದಲ್ಲಿನ ಟೆಸ್ಲಾ ಕಾರಿನ ನೋಂದಣಿ ಸಂಖ್ಯೆ ಆಗಿದೆ. ಮಾತ್ರವಲ್ಲ, ಈ ವಿಚಾರ ಕನ್ನಡಿಗರ ಗಮನ ಸೆಳೆದಿದ್ದು, ಬಸ್​ ಚಾಲಕ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಹೀಗೆ ಅಮೆರಿಕ ಮಟ್ಟದಲ್ಲಿ ಮಾತುಕತೆಗೆ ಒಳಗಾಗಿರುವ ಬಿಎಂಟಿಸಿ ಬಸ್​ ಚಾಲಕರ ಹೆಸರು ಧನಪಾಲ್ ಮಂಚೇನಹಳ್ಳಿ. ಇದಕ್ಕೆ ಕಾರಣವಾಗಿರುವುದು ಸುಮಾರು 30 ವರ್ಷಗಳ ಹಿಂದಿನ ವಿದ್ಯಾರ್ಥಿ ಹಾಗೂ ಪ್ರಯಾಣ. ಅರ್ಥಾತ್, 1992ರಲ್ಲಿ ಕೆಎ 01 ಎಫ್ 232 ನಂಬರ್​ನ ಈ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ, ಈ ಚಾಲಕರ ಕುರಿತ ಪ್ರೀತಿ-ವಿಶ್ವಾಸ, ಈ ಬಸ್​ ಬಗ್ಗೆ ಇರುವ ಅಭಿಮಾನದಿಂದ ತಮ್ಮ ಟೆಸ್ಲಾ ಕಾರಿಗೆ ಇದೇ ಬಸ್​ನ ನಂಬರ್ (ಕೆಎ1 ಎಫ್ 232 ) ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಕುರಿತು ಚಾಲಕ ಧನಪಾಲ್ ಅವರೇ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ರೀತಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ‘ನೀವು ನನ್ನ ಮಾಲೀಕರು, ನೀವೇನು ಹೇಳ್ತೀರೋ ಅದನ್ನೇ ಮಾಡುವೆ’: ಪ್ರಧಾನಿ ಮೋದಿ

    “ನಾನು 1992ರಲ್ಲಿ ಬಿಎಂಟಿಸಿ ಘಟಕ 11ರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುವಾಗ ಅನೇಕ ಶಾಲಾ ಮಕ್ಕಳಿಗೆ ನನ್ನ ಬಸ್ಸೆOದರೆ ತುಂಬಾ ಅಚ್ಚುಮೆಚ್ಚಾಗಿತ್ತು. ಆ ಮಕ್ಕಳಲ್ಲಿ ಚೆಂಗಪ್ಪ ಮತ್ತು ಆದಿತ್ಯ ಎಂಬ ಹುಡುಗರು ನನ್ನ ವಾಹನದ ಬಾನೆಟ್ ಮೇಲೆ ಕುಳಿತು ಅನೇಕ ವರ್ಷ ಶಾಲೆಗೆ ಪ್ರಯಾಣ ಮಾಡಿದ್ದಾರೆ. ಅದರಲ್ಲಿ ಆದಿತ್ಯ ಈಗ ಜರ್ಮನಿಯಲ್ಲಿದ್ದಾನೆ ಚೆಂಗಪ್ಪ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿದ್ದಾನೆ. ಇತ್ತೀಚೆಗೆ ಅವನು ಒಂದು ಕಾರನ್ನು ಖರೀದಿಸಿದ್ದಾನೆ. ಅದರ ನಂಬರ್ ಆಗ ನಾನು ಚಲಾಯಿಸುತ್ತಿದ್ದ ಬಿಎಂಟಿಸಿ ಬಸ್ಸಿನ ನಂಬರನ್ನೇ ತೆಗೆದುಕೊಂಡಿದ್ದಾನೆ. ಈಗಲೂ ಅವನು ನನ್ನ ಸಂಪರ್ಕದಲ್ಲಿದ್ದಾನೆ. ಅವನ ಅಭಿಮಾನಕ್ಕೆ ನಾನು ಚಿರಋಣಿ.
    – ಕೆ. ಧನಪಾಲ್”

    ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?
    ಬಿಎಂಟಿಸಿ ಬಸ್ ಜತೆ ಧನಪಾಲ್
    ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?
    ಅಮೆರಿಕದಲ್ಲಿ ತನ್ನ ಕಾರಿಗೆ ಬಿಎಂಟಿಸಿ ನಂಬರ್ ನೋಂದಣಿ ಮಾಡಿಸಿಕೊಂಡಿರುವ ಚೆಂಗಪ್ಪ.

    ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts