More

    ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

    ಬೆಂಗಳೂರು: ‘ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ಮಾತಿದೆ. ಅಂದರೆ ಗಂಡ-ಹೆಂಡತಿಯ ಮಧ್ಯೆ ಅದೆಂಥದ್ದೇ ಭಿನ್ನಾಭಿಪ್ರಾಯ-ಜಗಳವಿದ್ದರೂ ಅದು ರಾತ್ರಿ ನಿದ್ರಿಸಲು ಹೊರಟಾಗ ಮುಗಿದು ಹೋಗಿರುತ್ತದೆ. ಆದರೆ ಹಿಂದಿನ ಕಾಲದ ದಂಪತಿಗಳು ಹೀಗೆ ಯಾವುದನ್ನು ಪರಿಹಾರ ಎಂದುಕೊಂಡಿದ್ದರೋ ಈಗಿನ ಆಧುನಿಕ ದಂಪತಿಗಳು ಅದನ್ನೇ ಸಮಸ್ಯೆ ಎಂದು ಭಾವಿಸಿದಂತಿದೆ.

    ಅಂದರೆ ಈಗಿನ ದಂಪತಿಯ ಮಧ್ಯೆ ‘ಸ್ಲೀಪ್ ಡೈವೋರ್ಸ್’ ಎಂಬ ಟ್ರೆಂಡ್ ಆರಂಭಗೊಂಡಿದೆ. ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಮಲಗಲು ಹೋದಾಗಲೂ ಅದೇ ವಿಚಾರ ಕಾಡಿ ನಿದ್ರೆಯೂ ಹಾಳಾಗಿ, ಅದೇ ಕಾರಣಕ್ಕೆ ಹಗಲಿನ ಮೂಡೂ ಕೆಟ್ಟು ತೊಂದರೆ ಉಂಟಾಗುತ್ತಿರುವುದನ್ನು ತಪ್ಪಿಸಲು ಸ್ಲೀಪ್ ಡೈವೋರ್ಸ್ ತೆಗೆದುಕೊಳ್ಳಲು ಆರಂಭಿಸಿದ್ದಾರಂತೆ. ಅರ್ಥಾತ್, ಗಂಡ-ಹೆಂಡತಿ ರಾತ್ರಿ ಜೊತೆಗೇ ಮಲಗುವ ಬದಲು ಪ್ರತ್ಯೇಕವಾಗಿ ಮಲಗುವುದು.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಈ ಸ್ಲೀಪ್ ಡೈವೋರ್ಸ್​ನಲ್ಲೂ ವೈವಿಧ್ಯವಿದೆ. ಕೆಲವರ ಸ್ಲೀಪ್ ಡೈವೋರ್ಸ್ ಪ್ರತ್ಯೇಕ ಹಾಸಿಗೆಯಲ್ಲಿ ಮಲಗುವುದಿದ್ದರೆ, ಇನ್ನು ಕೆಲವರದ್ದು ಪ್ರತ್ಯೇಕ ಕೋಣೆಯಲ್ಲಿ ಮಲಗುವುದು. ಮತ್ತೆ ಕೆಲವರು ಬೇರೆ ಬೇರೆ ಮನೆಗಳನ್ನೇ ಸ್ಲೀಪ್ ಡೈವೋರ್ಸ್​ಗೆ ಬಳಸುವುದುಂಟಂತೆ!

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಮನುಷ್ಯನ ಬದುಕಿನಲ್ಲಿ ನಿದ್ರೆ ಮಹತ್ವದ್ದಾದ್ದರಿಂದ ರಾತ್ರಿ ನಿರಾಳವಾಗಿ ಮಲಗುವುದು ಕೂಡ ಮುಖ್ಯವಾಗಿರುತ್ತದೆ. ಭಿನ್ನಾಭಿಪ್ರಾಯ ಇರುವ, ಆಗಾಗ ಜಗಳಕ್ಕೆ ಒಳಗಾಗುವ ದಂಪತಿ ಈ ಸ್ಲೀಪ್ ಡೈವೋರ್ಸ್ ಮೊರೆ ಹೋಗುತ್ತಿರುವುದರಿಂದ ನಿದ್ರೆ ಕೆಡುವುದು ತಪ್ಪುತ್ತಿರುವುದಲ್ಲದೆ, ದಾಂಪತ್ಯ ಮುರಿದುಹೋಗುವುದು ಕೂಡ ತಪ್ಪುತ್ತಿದೆ ಎನ್ನಲಾಗಿದೆ.

    ಇದನ್ನೂ ಓದಿ: ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ

    ಜಗಳ, ಭಿನ್ನಾಭಿಪ್ರಾಯ ಮಾತ್ರವಲ್ಲದೆ, ಮಲಗುವ ಸಮಯ/ಅಭ್ಯಾಸದಲ್ಲಿ ವ್ಯತ್ಯಾಸ, ಗೊರಕೆ ಮುಂತಾದ ಕಾರಣಕ್ಕೂ ಕೆಲವರು ಈ ಸ್ಲೀಪ್ ಡೈವೋರ್ಸ್ ಮೊರೆ ಹೋಗುತ್ತಿರುವುದಿದೆ. ಅಲ್ಲದೆ ಕೆಲವರು ತಾತ್ಕಾಲಿಕವಾಗಿ, ಇನ್ನು ಕೆಲವರು ದೀರ್ಘಕಾಲಿಕವಾಗಿ ಈ ಸ್ಲೀಪ್ ಡೈವೋರ್ಸ್ ಪಾಲಿಸುತ್ತಿದ್ದಾರೆ. ಒಟ್ಟಿನಲ್ಲಿ ದಾಂಪತ್ಯವನ್ನೇ ಮುರಿದುಕೊಳ್ಳುವುದಕ್ಕಿಂತ ರಾತ್ರಿ ಬೇರೆಯಾಗಿ ಮಲಗಿ ಒಳ್ಳೆಯ ನಿದ್ರೆ ಪಡೆಯುವ ಜತೆಗೆ ದಾಂಪತ್ಯ ಉಳಿಸಿಕೊಳ್ಳುವುದಕ್ಕೆ ಇದು ಸೂಕ್ತ ಎಂದು ಕೆಲವು ದಂಪತಿಗಳು ಇದನ್ನು ಅನುಸರಿಸುತ್ತಿರುವುದು ಬಹಿರಂಗಗೊಂಡಿದೆ. ನಿದ್ರೆಯ ಸಮಯದಲ್ಲಿ ಹೊರತಾಗಿ ಬೇರೆ ಸಮಯದಲ್ಲಿ ಪರಸ್ಪರ ಪ್ರೀತಿ ಹಾಗೂ ಮುದ್ದು ಇದ್ದರೆ ಇದು ಒಳ್ಳೆಯದೇ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts