ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

Heart
Published on

ಲಂಡನ್​: ಪವರ್ ಸ್ಟಾರ್​ ಪುನೀತ್ ರಾಜಕುಮಾರ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಬಳಿಕ ಜನರು ಹೃದಯದ ಆರೋಗ್ಯದ ಕುರಿತು ಹೆಚ್ಚು ಜಾಗೃತಗೊಂಡಿದ್ದಾರೆ. ಹೃದಯದ ಕುರಿತು ಹೆಚ್ಚು ಹೆಚ್ಚು ಯೋಚನೆ ಮಾಡಲಾರಂಭಿಸಿದ್ದಾರೆ. ಈ ನಡುವೆ ಮತ್ತೊಂದಷ್ಟು ಜನರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದು ಬಹುತೇಕ ಎಲ್ಲರೂ ಹೃದಯದ ಬಗ್ಗೆ ಒಂದಷ್ಟು ಹೆಚ್ಚಿನ ಕಾಳಜಿ ವಹಿಸುವಂಥ ವಾತಾವರಣ ಸೃಷ್ಟಿಯಾಗಿದೆ.

ಈ ಮಧ್ಯೆ ನಿದ್ರೆಯ ಕುರಿತಾಗಿ ನಡೆದ ಅಧ್ಯಯನವೊಂದು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವನ್ನೂ ಕೂಡ ಹೊರಹಾಕಿದೆ. ಯುರೋಪಿಯನ್​ ಹಾರ್ಟ್​ ಜರ್ನಲ್​ನಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದರಲ್ಲಿ ಈ ಅಂಶ ಬಹಿರಂಗಗೊಂಡಿದೆ. ಯುಕೆ ಬಯೋಬ್ಯಾಂಕ್​ನ 88 ಸಾವಿರ ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿದ ಪರಿಣತರು ಈ ಅಂಶವನ್ನು ಕಂಡುಕೊಂಡಿದ್ದಾರೆ. ನಿದ್ರೆಯ ಸಮಯ ಕೂಡ ಹೃದಯಾಘಾತದ ಸಾಧ್ಯತೆ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂದಿದೆ.

ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳ ಪ್ರಕಾರ, ರಾತ್ರಿ 10ರಿಂದ 11 ಗಂಟೆ ಅವಧಿಯಲ್ಲಿ ಮಲಗಿ ನಿದ್ರಿಸುವವರ ಹೃದಯ ಹೆಚ್ಚು ಆರೋಗ್ಯವಂತವಾಗಿರುತ್ತದೆ. ಮಾತ್ರವಲ್ಲ ಹೃದ್ರೋಗದ ಸಮಸ್ಯೆ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ರಾತ್ರಿ ಹತ್ತು ಗಂಟೆಗೂ ಮುನ್ನ ಮಲಗಿದವರಲ್ಲಿ ಹೃದ್ರೋಗದ ಸಮಸ್ಯೆಗಳ ಸಾಧ್ಯತೆ ಶೇ. 24 ಅಧಿಕ ಎಂಬ ಅಂಶವೂ ಇದರಲ್ಲಿ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net