More

    ಕಲಾ ಪ್ರಕಾರಗಳಿಂದ ಹೃದಯ ಸಂಸ್ಕಾರ ‘ತಿರುವು’ ಕಥಾ ಸಂಕಲನ ಬಿಡುಗಡೆಗೊಳಿಸಿ ನಿವೃತ್ತ ಶಿಕ್ಷಕ ಕೆ.ರವೀಂದ್ರ ರೈ ಅಭಿಮತ

    ಮಂಗಳೂರು: ಪುಸ್ತಕಗಳು, ಸಂಗೀತ, ಸಾಹಿತ್ಯ ಕಲಾ ಪ್ರಕಾರಗಳು ಮನುಷ್ಯನಿಗೆ ಹೃದಯ ಸಂಸ್ಕಾರ ನೀಡುತ್ತದೆ. ಮನುಷ್ಯನ ಜೀವನಕ್ಕೆ ‘ತಿರುವು’ ಎನ್ನುವುದು ಅತೀ ಮುಖ್ಯವಾದುದು. ಇದರಿಂದ ಜೀವನ ಉಜ್ಜೀವನದ ಕಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಕೆ.ರವೀಂದ್ರರೈ ಹೇಳಿದರು.
    ಪತ್ರಿಕಾ ಭವನದಲ್ಲಿ ಸೋಮವಾರ ಅಮೃತ ಪ್ರಕಾಶ ಪತ್ರಿಕೆ ಸಾರಥ್ಯದಲ್ಲಿ 40ನೇ ಸರಣಿ ಕೃತಿ ವೀಣಾ ರಾವ್ ವಿಟ್ಲ ಅವರ ‘ತಿರುವು’ ಕಥಾ ಸಂಕಲನ ಬಿಡುಗಡೆಗೊಳಿಸಿ, ಅವರು ಮಾತನಾಡಿದರು.


    ನಿವೃತ್ತ ಶಿಕ್ಷಕಿ ಡಾ.ಅರುಣಾ ನಾಗರಾಜ್ ಅವರು ಕೃತಿ ಪರಿಚಯ ಮಾಡಿದರು. ವೈವಿಧ್ಯಮಯ ಕಥಾ ವಸ್ತುಗಳಿಂದ ಕೂಡಿದ ಈ ಕೃತಿ ವಿವಿಧ ಮನೋಧರ್ಮದ ವಾಚಕರಿಗೆ ಇಷ್ಟವಾಗಲಿದೆ. ತಿರುವು ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿದ್ದು, ವಾಚಕರ ರುಚಿಗೆ ತಕ್ಕಂತೆ ಅವುಗಳನ್ನು ಪೋಣಿಸಿದ್ದಾರೆ. ಸೀಪರ ಕಾಳಜಿಯೂ ಕಾಣಿಸುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನೂ ಅನಾವರಣಗೊಳಿಸುತ್ತಿವೆ ಎಂದರು.


    ಕ.ಸಾ.ಪ. ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿ, ಮಾತನಾಡಿ, ನಮ್ಮ ಜೀವನದ ತಿರುವುಗಳು ಸಕಾರಾತ್ಮಕವಾಗಿರಬೇಕು. ಆಗ ಸಾಧನೆಗೆ ಅವಕಾಶ ಸಿಗುತ್ತದೆ. ಇನ್ನಷ್ಟು ಎತ್ತರಕ್ಕೆ ಏರಲು ದಾರಿ ತೋರಿಸುತ್ತದೆ. ‘ತಿರುವು’ ಕಥಾ ಸಂಕಲನದಲ್ಲಿಯೂ ಜೀವನಾನುಭವವನ್ನು ಕಾಣಬಹುದಾಗಿದ್ದು, ಅನುಭವಿಸಿ ಬರೆಯುವುದು ಮುಖ್ಯ ಎಂದರು.


    ಸಂಘಟಕ, ಅಗರಿ ಸಂಸ್ಥೆಗಳು ಮುಖ್ಯಸ್ಥ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಯಾಗಿದ್ದರು. ಲೇಖಕಿ ವೀಣಾ ರಾವ್ ಉಪಸ್ಥಿತರಿದ್ದರು.
    ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಶಿಕ್ಷಕಿ ಸುರೇಖಾ ಯಳವಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts