More

  ಟೀಮ್​ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಸ್ಟಾರ್​ ನಟನಿಗೆ ಕಾದಿತ್ತು ಸರ್ಪ್ರೈಸ್​​!​

  ನವದೆಹಲಿ: ಸದ್ಯ ಐಪಿಎಲ್ ಫೀವರ್​ ತುತ್ತ ತುದಿಯಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ 17ನೇ ಐಪಿಎಲ್​ ಆವೃತ್ತಿ ಮುಗಿಯಲಿದ್ದು, ಅದರ ಬೆನ್ನಲ್ಲೇ ಜೂನ್ 2ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಈಗಾಗಲೇ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡಿರುವುದು ಗೊತ್ತೇ ಇದೆ. ಈ ಟಿ20 ವಿಶ್ವಕಪ್​ ಮುಗಿದ ನಂತರ ಟೀಮ್​ ಇಂಡಿಯಾಗೆ ಹೊಸ ಕೋಚ್ ಸಿಗಲಿದ್ದಾರೆ.

  ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಬಿಸಿಸಿಐ ಹೊಸ ಕೋಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಬಿಸಿಸಿಐ ಈ ಅಪ್ಲಿಕೇಶನ್‌ಗಳನ್ನು ಗೂಗಲ್ ಫಾರ್ಮ್‌ಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಅನೇಕ ಜನರು ಮೋಜಿಗಾಗಿಯೂ ಅರ್ಜಿ ಸಲ್ಲಿಸುತ್ತಿದ್ದಾರೆ. ನೂರಾರು ಅರ್ಜಿಗಳು ಬರುತ್ತಿರುವುದು ಬಿಸಿಸಿಐಗೆ ಹೊಸ ತಲೆನೋವಾಗಿದೆ. ಇದರ ನಡುವೆ ಟಾಲಿವುಡ್ ಹೀರೋ ಕಮ್ ಡೈರೆಕ್ಟರ್ ಕೂಡ ಟೀಮ್​ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

  ಟೀಮ್​ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಹಲವು ಮಂದಿ ಗೂಗಲ್ ಫಾರ್ಮ್‌ಗಳನ್ನು ಭರ್ತಿ ಮಾಡಿದಂತೆಯೇ, ಈ ಹೀರೋ ಕೂಡ ಅರ್ಜಿ ಸಲ್ಲಿಸಿದ್ದಾರೆ. ಆ ಸ್ಟಾರ್ ನಟ ಬೇರೆ ಯಾರೂ ಅಲ್ಲ ಅವರೇ ರಾಹುಲ್ ರವೀಂದ್ರನ್. ತಾವು ಅರ್ಜಿ ಸಲ್ಲಿಸಿರುವ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆ ಫಾರ್ಮ್ ಅನ್ನು ಭರ್ತಿ ಮಾಡಿದ ಕೆಲವೇ ಸಮಯದಲ್ಲಿ ಈ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನನಗೆ ಬಿಸಿಸಿಐನಿಂದ ಸಂದೇಶ ಬಂದಿದೆ ಎಂದು ರಾಹುಲ್​ ತಿಳಿಸಿದ್ದಾರೆ.

  Rahulಬಿಸಿಸಿಐ ಕೋಚ್​ ಹುದ್ದೆಗೆ ಫಾರ್ಮ್ ತುಂಬಲು ಖುಷಿಯಾಗುತ್ತದೆ. ನಾನು ಕೂಡ ಅರ್ಜಿ ಸಲ್ಲಿಸಿದ್ದೆ. ಆದರೆ, ತಿರಸ್ಕೃತವಾಗಿದೆ. ನಾನು ಕೂಡ ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಬೇಕೆಂದು ಬಯಸಿದ್ದೆ ಅಂತ ಮುಂದೊಂದು ದಿನ ನನ್ನ ಮಕ್ಕಳಿಗೆ ಹೇಳುತ್ತೇನೆ ಎಂದು ರಾಹುಲ್​ ರವೀಂದ್ರನ್​ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟುಗರುಯ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

  ಅಂದಹಾಗೆ ರಾಹುಲ್​ ರವೀಂದ್ರನ್​ ಅವರರು ಅಂದಾಲಾ ರಾಕ್ಷಸಿ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿನ ತಮ್ಮ ನಟನೆಗೆ ಎಲ್ಲರಿಂದ ಮೆಚ್ಚುಗೆ ಗಳಿಸಿದರು. ರಾಹುಲ್​ ರವೀಂದ್ರನ್​ ಅವರು ಕಾಲಿವುಡ್​ ಖ್ಯಾತ ಗಾಯಕಿ ಹಾಗೂ ಮಹಿಳಾ ಪರ ಹೋರಾಟಗಾರ್ತಿ ಚಿನ್ಮಯಿ ಅವರನ್ನು ವಿವಾಹವಾಗಿದ್ದಾರೆ. ಪೆಳ್ಳಿ ಪಟ್ಕಾ, ನೇನು ಚಿನ್ನಾ ಪಿಳ್ಳಾ, ಗಾಳಿ ಪಟಂ, ಅಲಾ ಇಳಾ, ಟೈಗರ್, ಶ್ರೀಮಂತುಡು, ಹೈದರಾಬಾದ್ ಲವ್ ಸ್ಟೋರಿ, ಹೌರಾ ಬ್ರಿಡ್ಜ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  2018ರಲ್ಲಿ ಬಿಡುಗಡೆಯಾದ ಚಿಲಸೌ ಚಿತ್ರದ ಮೂಲಕ ರಾಹುಲ್​ ರವೀಂದ್ರನ್​ ನಿರ್ದೇಶಕರಾದರು. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ಮೂಲ ಚಿತ್ರಕಥೆ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದರು. ಅವರು ಮನ್ಮಧುಡು 2 ಅನ್ನು ಸಹ ನಿರ್ದೇಶಿಸಿದರು. ಆದರೆ, ಇದು ಸದ್ದು ಮಾಡಲಿಲ್ಲ. ಸದ್ಯ ರಾಹುಲ್​ ಅವರು ಗರ್ಲ್ ಫ್ರೆಂಡ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)

  ಹಸಿದ ಸಿಂಹದಂತೆ ಬೇಟೆಯಾಡುವ ರಣಬೇಟೆಗಾರನಿಗೆ ಹೆದರುತ್ತಿದೆ ಸಿಎಸ್​ಕೆ! ಈ ಬೀಸ್ಟ್​ ತಡೆಯುವವರು ಯಾರು?

  ಮೇ 18ರಂದು ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲುವು ನಿಶ್ಚಿತ ಪ್ಲೇಆಫ್ ಪ್ರವೇಶ​ ಖಚಿತ! ಇದಕ್ಕೆ ಕೊಹ್ಲಿಯೇ ಸಾಕ್ಷಿ

  ಅದನ್ನು ನಂಗೆ ಕೊಟ್ಟಿದ್ದು ತ್ರಿಷಾನೇ, ಜಿವಿ ಪ್ರಕಾಶ್​ ಕೂಡ ಸಲಿಂಗಕಾಮಿ! ಕಾಲಿವುಡ್​ನಲ್ಲಿ​ ಸದ್ದು ಮಾಡ್ತಿದೆ ಸುಚಿ ಟಾಕ್ಸ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts