ಸಿನಿಮಾ

‘ನೀವು ನನ್ನ ಮಾಲೀಕರು, ನೀವೇನು ಹೇಳ್ತೀರೋ ಅದನ್ನೇ ಮಾಡುವೆ’: ಪ್ರಧಾನಿ ಮೋದಿ

ತುಮಕೂರು: ನೀವು ನನ್ನ ಮಾಲೀಕರು, ನೀವೇನು ಹೇಳ್ತೀರೋ ಅದನ್ನೇ ಮಾಡುವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜನರನ್ನು ಉದ್ದೇಶಿಸಿ ಹೇಳಿದರು. ಕಲ್ಪತರು ನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ಮೋದಿ ಇಂದಿಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು.

ಇದನ್ನೂ ಓದಿ: ಜನಸಂಖ್ಯೆ ಸಂಪತ್ತೋ ಆಪತ್ತೋ?; ಭಾರತ ಈಗ ಅತ್ಯಧಿಕ ಜನಸಂಖ್ಯೆಯ ದೇಶ

ಹಿಂದಿಯಲ್ಲೇ ಭಾಷಣವನ್ನು ಆರಂಭಿಸಿದ ಮೋದಿ, ‘ಜೈ ಬಜರಂಗ ಬಲಿ’ ಎಂಬ ಘೋಷಣೆಯೊಂದಿಗೇ ಮಾತನ್ನು ಆರಂಭಿಸಿದರು. ‘ಓ ಲಂಕಾ ಭಯಂಕರ’ ಎಂದು ಕುವೆಂಪು ಅವರು ಆಂಜನೇಯನ ಕುರಿತು ಬರೆದಿದ್ದ ಸಾಲನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್​ಗೆ ಜೈಬಜರಂಗಿ ಬಲಿ ಎಂದು ಹೇಳುವುದೂ ಆಪತ್ತಾಗಲಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

ತುಷ್ಟೀಕರಣದ, ವೋಟ್ ಬ್ಯಾಂಕ್ ರಾಜಕಾರಣದ ಗುಲಾಮರಾಗಿರುವ ಕಾಂಗ್ರೆಸ್​​ನಿಂದ ಕರ್ನಾಟಕದ ವಿಕಾಸ ಅಸಾಧ್ಯ. ಕಾಂಗ್ರೆಸ್ ಜೆಡಿಎಸ್​ ಎರಡರ ಆಟವನ್ನೂ ಕರ್ನಾಟಕದ ಜನರು ಅರ್ಥ ಮಾಡಿಕೊಂಡಿದ್ದಾರೆ. ಜೆಡಿಎಸ್​ಗೆ ಮತ ನೀಡಿದರೆ ಅದರಿಂದ ಸಮ್ಮಿಶ್ರ ಸರ್ಕಾರವೇ ಬರುವುದು ವಿನಃ ಸಮರ್ಥ ಸರ್ಕಾರ ಅಸಾಧ್ಯ. ಹೀಗಾಗಿ ಈ ಸಲ ಬಿಜೆಪಿಗೇ ಪೂರ್ಣ ಬಹುಮತ ನೀಡಿ ಎಂದು ಮೋದಿ ಕೇಳಿಕೊಂಡರು.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

ಪ್ರಧಾನಿ ಮೋದಿ ಇಷ್ಟನ್ನು ಹಿಂದಿಯಲ್ಲಿ ಹೇಳಿದ ಬಳಿಕ, ‘ಕನ್ನಡ ಅನುವಾದ ಬೇಕಿದೆಯೇ?’ ಎಂದು ಅನುವಾದಕರು ಕೇಳಿದರು. ಆಗ ಬೇಡ ಎಂಬ ದನಿ ಸಭೆಯಿಂದ ಕೇಳಿಸಿತು. ಅದರ ಬೆನ್ನಿಗೇ ಮೋದಿ ಕೂಡ ಹಿಂದಿಯಲ್ಲೇ ಮುಂದುವರಿಯಲು ಅನುಮತಿ ಇದೆಯೇ ಎಂದು ಮತ್ತೆ ಮತ್ತೆ ಸಭೆಯನ್ನು ಉದ್ದೇಶಿಸಿ ಕೇಳಿದರು. ಆಗ ಜನತೆ ಬೇಡ ಎಂದರು. ನಂತರ ಮಾತು ಮುಂದುವರಿಸಿದ ಪ್ರಧಾನಿ ಮೋದಿ, ‘ನೀವು ನನ್ನ ಮಾಲೀಕರು, ನೀವೇನು ಹೇಳ್ತೀರೋ ಅದನ್ನೇ ಮಾಡುವೆ’ ಎಂದು ಜನರಿಗೆ ಹೇಳಿದರು. ನಡುನಡುವೆ ‘ಬಂಧು-ಭಗಿನಿಯರೇ’, ‘ಸ್ನೇಹಿತರೇ’ ಎಂದು ಮೋದಿ ಕನ್ನಡ ಸೊಗಡನ್ನೂ ತೋರಿದರು.

ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

Latest Posts

ಲೈಫ್‌ಸ್ಟೈಲ್