More

    ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

    ಬೆಂಗಳೂರು: ಕೆಲವರಿಗೆ ಒಂದೊಂದು ಗೀಳು ಇರುತ್ತದೆ. ಅವುಗಳಲ್ಲಿ ಕೆಲವು ಅಂಥ ಅಪಾಯಕಾರಿ ಆಗಿರುವುದಿಲ್ಲ. ಆದರೆ ಕೆಲವು ಸ್ವಲ್ಪ ಎಡವಟ್ಟಾದರೂ ಅಪಾಯಕ್ಕೆ ತಳ್ಳಿಬಿಡುತ್ತವೆ. ಅಂಥದ್ದೇ ಒಂದು ಗೀಳಿನಿಂದ ಬಿಡಿಸುವಂತೆ ಉದ್ಯಮಿಯೊಬ್ಬರು ನಿಮ್ಹಾನ್ಸ್​ಗೆ ಹೋಗಿ ಮನವಿ ಮಾಡಿಕೊಂಡ ಪ್ರಸಂಗ ನಡೆದಿದೆ.

    ಇದನ್ನೂ ಓದಿ: ಮಧು ಮಾತ್ರವಲ್ಲ ಬೇಳೂರು ಪರವೂ ಶಿವರಾಜಕುಮಾರ್ ಚುನಾವಣಾ ಪ್ರಚಾರ

    39 ವರ್ಷದ ಉದ್ಯಮಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂಪಾಯಿ ಕಳೆದುಕೊಂಡ ಬಳಿಕ ನಿಮ್ಹಾನ್ಸ್​ಗೆ ಹೋಗಿದ್ದಾರೆ. ಮಾತ್ರವಲ್ಲ, ತಮ್ಮನ್ನು ಷೇರು ಮಾರುಕಟ್ಟೆ ಗೀಳಿನಿಂದ ಮುಕ್ತಗೊಳಿಸುವಂತೆ ಕೋರಿಕೊಂಡಿದ್ದಾರೆ. ನಿಮ್ಹಾನ್ಸ್​ನ ಶಟ್​ನಿಂದ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!

    ತಂತ್ರಜ್ಞಾನದ ಆರೋಗ್ಯಕರ ಬಳಕೆಯ ಕುರಿತಂತೆ ನಿಮ್ಹಾನ್ಸ್​ನಲ್ಲಿ ಸರ್ವಿಸ್ ಫಾರ್​ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ (ಶಟ್​​-SHUT) ಕ್ಲಿನಿಕ್ ಇದೆ. 30 ಲಕ್ಷ ರೂ. ಕಳೆದುಕೊಂಡ ಉದ್ಯಮಿ ಈ ಕ್ಲಿನಿಕ್​ಗೆ ಬಂದಿದ್ದು, ಷೇರು ಮಾರುಕಟ್ಟೆ ಗೀಳನ್ನು ಬಿಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಭಾರಿ ಮಳೆ: ಹಳ್ಳ ದಾಟುತ್ತಿದ್ದ ತಾಯಿ ಜತೆ ಇಬ್ಬರು ಮಕ್ಕಳೂ ನೀರುಪಾಲು

    ಜೂಜು ಮುಂತಾದ ಗೀಳಿನಿಂದ ಬಿಡಿಸುವಂತೆ ಕೋರಿ ಹಲವರು ಬರುತ್ತಾರೆ. ಆದರೆ ಈ ಥರದ ಪ್ರಕರಣ ಇದೇ ಮೊದಲು ಎಂಬುದಾಗಿ ಶಟ್​​ನ ವೈದ್ಯರು ತಿಳಿಸಿದ್ದಾರೆ. ‘ಈ ಹಿಂದೆ ಕೆಲವು ಸಮಯ ಟ್ರೇಡಿಂಗ್ ಸಂಬಂಧಿಸಿದಂತೆ ನನ್ನ ಲೆಕ್ಕಾಚಾರ ಸರಿ ಇದ್ದಿತ್ತು. ನಂತರ ಒಂದಷ್ಟು ನಷ್ಟವಾಯಿತು. ಅದನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿ ಉಳಿತಾಯದ ಹಣವೆಲ್ಲ ಖರ್ಚಾಗಿದ್ದಲ್ಲದೆ, ಸಾಲ ಮಾಡಬೇಕಾಗಿಯೂ ಬಂತು’ ಎಂದು ಉದ್ಯಮಿ ಹೇಳಿದ್ದು, ಶಟ್​ ಈಗಾಗಲೇ ಎರಡು ಹಂತದ ಚಿಕಿತ್ಸೆಯನ್ನು ಮುಗಿಸಿದೆ.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    86 ವರ್ಷದ ಮಹಿಳೆಗೆ ಕೊನೆಗೂ ಪತಿ ಸತ್ತ 49 ವರ್ಷಗಳ ಬಳಿಕ ಪಿಂಚಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts