More

    3ರಿಂದ 60 ರೂಪಾಯಿಗೆ ಸ್ಟಾಕ್​ ದರ ಏರಿಕೆ: ಹೂಡಿಕೆದಾರರಿಗೆ ಒಂದೇ ವರ್ಷದಲ್ಲಿ 1752% ಲಾಭ

    ಮುಂಬೈ: ಮಂಗಳವಾರ ಮಧ್ಯಾಹ್ನದ ವಹಿವಾಟಿನ ವೇಳೆ ಮೈಕ್ರೊ ಕ್ಯಾಪ್ ಸ್ಟೀಲ್ ಕಂಪನಿಯಾದ ರಾಠಿ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (Rathi Steel and Power Limited) ಷೇರುಗಳ ಬೆಲೆ ಶೇ. 2ರಷ್ಟು ಕುಸಿತ ದಾಖಲಿಸಿ ರೂ.61.53ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.

    ಈ ಕಂಪನಿಯ ಮಾರುಕಟ್ಟೆ ಮೌಲ್ಯ ರೂ. 520 ಕೋಟಿ ಇದೆ. ರಾಠಿ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ನ 52 ವಾರಗಳ ಗರಿಷ್ಠ ಷೇರು ಬೆಲೆ ರೂ 67 ಆಗಿದ್ದರೆ, ಕನಿಷ್ಠ ಬೆಲೆ ರೂ 3.15 ಆಗಿದೆ.

    ರಾಠಿ ಸ್ಟೀಲ್ ಮತ್ತು ಪವರ್‌ನ ಷೇರುಗಳ ಬೆಲೆ ಜುಲೈ 3, 2023 ರಂದು ರೂ 3.30 ಇತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಷೇರಿನ ಬೆಲೆ 1752 ಪ್ರತಿಶತದಷ್ಟು ಏರಿಕೆಯಾಗಿದೆ. ಅಂದರೆ, ಈ ಅವಧಿಯಲ್ಲಿ ಈ ಷೇರುಗಳಲ್ಲಿ 1 ಲಕ್ಷ ರೂಪಾಯಿ ತೊಡಗಿಸಿ ಇಲ್ಲಿಯವರೆಗೆ ಕಾಯ್ದುಕೊಂಡಿದ್ದಾರೆ ಈ ಷೇರುಗಳ ಬೆಲೆ ರೂ. 17.52 ಲಕ್ಷ ಆಗುತ್ತಿತ್ತು.

    ರಾಠಿ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಕಂಪನಿಯು ಕಾಸ್ಟ್ ಆಪ್ಟಿಮೈಸೇಶನ್ (ವೆಚ್ಚ ಕಡಿತ) ಯೋಜನೆಯನ್ನು ಪ್ರಾರಂಭಿಸಿದೆ ಎಂದು ಷೇರು ಮಾರುಕಟ್ಟೆಗೆ ತಿಳಿಸಿದೆ. ಕಂಪನಿಯು ಬಹುತೇಕ ಎಲ್ಲಾ ಪ್ರಮುಖ ಸಾಧನಗಳಿಗೆ ಸಂಬಂಧಿಸಿದ ಆಪ್ಟಿಮೈಸೇಶನ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ಉಕ್ಕಿನ ಎರಕಹೊಯ್ದ ಮತ್ತು ರೋಲಿಂಗ್ ಪ್ರಕ್ರಿಯೆಗಳನ್ನು ಸಿಂಕ್ರೊನೈಸ್ ಮಾಡುವ ಕೆಲಸವನ್ನು ಸಹ ಒಳಗೊಂಡಿದೆ.

    ಒಮ್ಮೆ ಕಾರ್ಯಗತಗೊಂಡರೆ, ಈ ಯೋಜನೆಯು ರಾಠಿ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ಗೆ ಇಂಧನವನ್ನು ಉಳಿಸುತ್ತದೆ ಮತ್ತು ಅದರ ಲಾಭವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಕಾರ್ಬನ್ ಫುಟ್‌ಪ್ರಿಂಟ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಂಪನಿಯು ಉತ್ತಮ ಕೆಲಸ ಮಾಡುತ್ತಿದೆ. ಕಂಪನಿಯು ಈ ಯೋಜನೆಯ ಪ್ರಾಯೋಗಿಕ ಚಾಲನೆಯನ್ನು ಮೇ 2024 ರಲ್ಲಿ ಪ್ರಾರಂಭಿಸಬಹುದು. ಕಂಪನಿಯ ವೆಚ್ಚ ಆಪ್ಟಿಮೈಸೇಶನ್ ಯೋಜನೆಯು ಉತ್ಪಾದನೆ ಮೇಲೆ ಪರಿಣಾಮ ಬೀರಬಹುದು ಮತ್ತು ಮಾರಾಟ ಪ್ರಮಾಣದಲ್ಲಿ ಸ್ವಲ್ಪ ದೌರ್ಬಲ್ಯ ಉಂಟಾಗಬಹುದು ಎಂದು ರಾಠಿ ಸ್ಟೀಲ್ ಹೇಳಿದೆ.

    ಹಣದ ಸುರಿಮಳೆ ಹರಿಸಿದ ಸ್ಮಾಲ್​ ಕ್ಯಾಪ್ ಕಂಪನಿ ಸ್ಟಾಕ್​: ಷೇರು ಬೆಲೆ 10 ದಿನಗಳಲ್ಲಿ 50% ಏರಿಕೆಯಾಗಿದ್ದೇಕೆ?

    9 ವರ್ಷಗಳಲ್ಲಿ ಮೊದಲ ಬಾರಿಗೆ ನಷ್ಟದಲ್ಲಿದೆ ಟಾಟಾ ಕಂಪನಿ: ಷೇರುಗಳನ್ನು ಖರೀದಿಸಬೇಕೋ? ಮಾರಾಟ ಮಾಡಬೇಕೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts