More

    ಹಣದ ಸುರಿಮಳೆ ಹರಿಸಿದ ಸ್ಮಾಲ್​ ಕ್ಯಾಪ್ ಕಂಪನಿ ಸ್ಟಾಕ್​: ಷೇರು ಬೆಲೆ 10 ದಿನಗಳಲ್ಲಿ 50% ಏರಿಕೆಯಾಗಿದ್ದೇಕೆ?

    ಮುಂಬೈ: ಸ್ಮಾಲ್‌ಕ್ಯಾಪ್ ಕಂಪನಿ ವೆಸುವಿಯಸ್ ಇಂಡಿಯಾ (Vesuvius India) ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ವೆಸುವಿಯಸ್ ಇಂಡಿಯಾ ಷೇರುಗಳ ಬೆಲೆ ಮಂಗಳವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಶೇ. 17 ರಷ್ಟು ಏರಿಕೆ ಕಂಡು 5084.10 ರೂ.ಗೆ ತಲುಪಿದೆ. ಈ ಮೂಲಕ ಕಂಪನಿಯ ಷೇರುಗಳ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ನಂತರ ಶೇ. 4.29ರಷ್ಟು ಏರಿಕೆಯೊಂದಿಗೆ ಈ ಷೇರಿನ ಬೆಲೆ ರೂ. 4541.35 ತಲುಪಿತು. ಕಳೆದ 10 ವಹಿವಾಟು ದಿನಗಳಲ್ಲಿ ಈ ಷೇರು ಬೆಲೆ 50% ರಷ್ಟು ಹೆಚ್ಚಾಗಿದೆ. ಈ ಷೇರಿನ ಸಾರ್ವಕಾಲಿಕ ಕನಿಷ್ಠ ಬೆಲೆ ರೂ. 30.55 ಇದೆ.

    ಮಾರ್ಚ್ 2024 ರ ತ್ರೈಮಾಸಿಕದ ಫಲಿತಾಂಶಗಳ ನಂತರ ವೆಸುವಿಯಸ್ ಇಂಡಿಯಾದ ಷೇರುಗಳ ಬೆಲೆಯಲ್ಲಿ ಈ ಏರಿಕೆ ಕಂಡುಬಂದಿದೆ. ಕಳೆದ ಒಂದು ವರ್ಷದಲ್ಲಿ ವೆಸುವಿಯಸ್ ಇಂಡಿಯಾದ ಸ್ಟಾಕ್ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಈ ಕಂಪನಿಯ ಷೇರುಗಳ 52 ವಾರಗಳ ಕನಿಷ್ಠ ಬೆಲೆ 1613.05 ರೂ. ಆಗಿದೆ. ಈ ಮೂಲಕ ಹೂಡಿಕೆದಾರರಿಗೆ ಹಣದ ಸುರಿಮಳೆಯನ್ನೇ ಈ ಷೇರು ಹರಿಸಿದೆ.

    ವೆಸುವಿಯಸ್ ಇಂಡಿಯಾ ಮಾರ್ಚ್ 2024 ರ ತ್ರೈಮಾಸಿಕದಲ್ಲಿ 68.8 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಂಪನಿಯ ಲಾಭವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 59% ಹೆಚ್ಚಾಗಿದೆ. ಇದೇ ಸಮಯದಲ್ಲಿ, ಕಂಪನಿಯ ಆದಾಯವು 2024 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 453 ಕೋಟಿ ರೂಪಾಯಿ ತಲುಪಿ, 24 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 366 ಕೋಟಿ ರೂಪಾಯಿಗಳಷ್ಟಿತ್ತು.

    ವೆಸುವಿಯಸ್ ಇಂಡಿಯಾದ ಷೇರುಗಳ ಬೆಲೆ 1 ವರ್ಷದಲ್ಲಿ ರೂ. 1600 ರಿಂದ 5000 ರೂಪಾಯಿಗಳನ್ನು ದಾಟಿದೆ. ಕಳೆದ ಒಂದು ವರ್ಷದಲ್ಲಿ ವೆಸುವಿಯಸ್ ಇಂಡಿಯಾದ ಷೇರುಗಳ ಬೆಲೆಯಲ್ಲಿ ತ್ವರಿತ ಏರಿಕೆ ಕಂಡುಬಂದಿದೆ. 2 ಮೇ 2023 ರಂದು ಕಂಪನಿಯ ಷೇರುಗಳ ಬೆಲೆ 1642.60 ರೂ. ಇದ್ದು, ಈಗ ರೂ 5062.10 ತಲುಪಿದೆ. ಕಳೆದ 2 ವರ್ಷಗಳಲ್ಲಿ ಕಂಪನಿಯ ಷೇರುಗಳ ಬೆಲೆ 400% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

    ವೆಸುವಿಯಸ್ ಇಂಡಿಯಾ ಎರಕದ ಪ್ರಕ್ರಿಯೆಯಲ್ಲಿ ದ್ರವ ಉಕ್ಕನ್ನು ನಿಯಂತ್ರಿಸುವ, ರಕ್ಷಿಸುವ ಮತ್ತು ಮೇಲ್ವಿಚಾರಣೆ ಮಾಡುವ ಸೆರಾಮಿಕ್ ಸಿಸ್ಟಮ್‌ಗಳನ್ನು ತಯಾರಿಸುತ್ತದೆ. ಅಲ್ಲದೆ, ಕಂಪನಿಯು ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಗೆ ವಕ್ರೀಕಾರಕ ಲೈನಿಂಗ್ ವಸ್ತುಗಳನ್ನು ಉತ್ಪಾದಿಸುತ್ತದೆ.

    ರೂ. 1000 ಕೋಟಿ ಹೂಡಿಕೆ:

    ವೆಸುವಿಯಸ್ ಇಂಡಿಯಾ ಮುಂದಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಅಂದಾಜು 1000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಕಂಪನಿಯು ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ಹೊಸ ಮೋಲ್ಡ್ ಫ್ಲಕ್ಸ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ.

    9 ವರ್ಷಗಳಲ್ಲಿ ಮೊದಲ ಬಾರಿಗೆ ನಷ್ಟದಲ್ಲಿದೆ ಟಾಟಾ ಕಂಪನಿ: ಷೇರುಗಳನ್ನು ಖರೀದಿಸಬೇಕೋ? ಮಾರಾಟ ಮಾಡಬೇಕೋ?

    ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದರೆ ಸೋಲಾರ್ ಷೇರುಗಳಿಗೆ ಭರ್ಜರಿ ಡಿಮ್ಯಾಂಡು: ಈ 4 ಸ್ಟಾಕ್​ ಖರೀದಿಸಲು ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts